Bollywood : ಹಿಂದಿ ಬಿಗ್ ಬಾಸ್ ಸೀಸನ್ 16 ರ ಸ್ಪರ್ಧಿ ಪ್ರಿಯಾಂಕಾ ಚಹರ್ ಚೌಧರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಅಭಿಮಾನಿಗಳು ಕೂಡ ನಟಿಯ ಮೇಲೆ ಸಾಕಷ್ಟು ಪ್ರೀತಿಯನ್ನು  ತೋರಿಸುತ್ತಾರೆ. ರಿಯಾಲಿಟಿ ಶೋನಿಂದ ಹೊರಬಂದಾಗಿನಿಂದ ಈ ನಟಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಸಾಲು ಮರದ ತಿಮ್ಮಕ್ಕ ಅವರಲ್ಲಿ ಹಿಂದಿ ಕಿರುತೆರೆ ನಟಿ ಆಶೀರ್ವಾದ ಪಡೆದಿದ್ದಾರೆ. 


COMMERCIAL BREAK
SCROLL TO CONTINUE READING

ಎಲ್ಲೆಡೆ ನಟಿ ಅಭಿಮಾನಿಗಳ ಮನಕದ್ದಿದ್ದಾರೆ. ಅವರ ಒಂದು ವಿಡಿಯೋ ಹೊರಬಿದ್ದಿದ್ದು, ಅದರಲ್ಲಿ ಅವರು ಸಾಲು ಮರದ ತಿಮ್ಮಕ್ಕ ಅವರ ಪಾದಗಳನ್ನು ಮುಟ್ಟಿದ್ದಾರೆ. ವಾಸ್ತವವಾಗಿ, ಪ್ರಿಯಾಂಕಾ ಚಾಹರ್ ಚೌಧರಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. ಸುಂದರವಾದ ಬಿಳಿ ಸೀರೆಯನ್ನು ಧರಿಸಿದ ನಟಿ ಸುಂದರವಾಗಿ ಕಾಣುತ್ತಿದ್ದರು. ಅವರು ತಮ್ಮ ಕ್ಯೂಟ್  ನಗುವಿನೊಂದಿಗೆ ಇಲ್ಲಿಗೆ ಬಂದಾಗ, 110 ವರ್ಷದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅಲ್ಲಿ ಉಪಸ್ಥಿತರಿದ್ದರು.


 



ಇದನ್ನೂ ಓದಿ-ಆಕಾಶದಲ್ಲಿರುವ ನಕ್ಷತ್ರಕ್ಕೆ ರಾಜರತ್ನ ʼಅಪ್ಪು' ಹೆಸರು..! ಇದಲ್ವಾ ಗುರು ಖುಷಿ ವಿಚಾರ 


ಅವರನ್ನು ಬೇಟಿಯಾದ ನಟಿ ಅವರ ಕಾಲುಗಳನ್ನು ಮುಟ್ಟಿ ಆಶಿರ್ವಾದ ತೆಗೆದುಕೊಂಡಿದ್ದಾರೆ. ಸಾಲು ಮರದ ತಿಮ್ಮಕ್ಕನಿಗೆ ಅಪಾರ ಅಭಿಮಾನಿ ಬಳಗವಿದೆ. ಈ ವಿಡಿಯೋ ವೈರಲ್ಆಗಿದೆ. ಈ ವಿಡಿಯೋದ ನಂತರ ಜನರು ಪ್ರತಿಕ್ರಿಯಿಸಿದ್ದಾರೆ. ನಟಿಯ ನಡತೆಯನ್ನು ಹೊಗಳಿದ್ದಾರೆ. ಅವರು ಸೇನಾ ಕುಟುಂಬದ ಮಗಳು. ಅವರನ್ನು ಹೀಗೆ ಬೆಳೆಸಲಾಗಿದೆ ನೋಡಿ ಎಂದಿದ್ದಾರೆ. ಅವರಿಗೆ ದುರಹಂಕಾರವಿಲ್ಲ, ಎಂದೆಲ್ಲ ಹೊಗಳಿದ್ದಾರೆ. 


ಇದನ್ನೂ ಓದಿ-ಕಪ್ಪು ಬಿಕಿನಿ ಧರಿಸಿ ಹಾಟ್‌ ಲುಕ್‌ ಕೊಟ್ಟ "ಶಾಮಾ ಸಿಕಂದರ್"..! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.