The Kerala Story : ವಿವಾದಗಳ ನಡುವೆ ಬಿಡುಗಡೆಯಾದ ʼದಿ ಕೇರಳ ಸ್ಟೋರಿʼಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕೇರಳ, ಪಶ್ಚಿಮ ಬಂಗಾಳ ಈ ಸಿನಿಮಾವನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ. ಆದ್ರೆ, ತಮಿಳುನಾಡಿನ ಕೆಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಚಿತ್ರಮಂದಿರಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಸದ್ಯ ಉಳಿದ ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.


COMMERCIAL BREAK
SCROLL TO CONTINUE READING

ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಅದಾ ಶರ್ಮಾ ಶಿವ ತಾಂಡವ ಸ್ತೋತ್ರ ಪಠಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶಿವನ ಸಾನಿದ್ಯದಲ್ಲಿ ಕುಳಿತು ನಟಿ ಮಂತ್ರ ಪಠಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ವಿಡಿಯೋ ನೋಡಿದ ನೆಟ್ಟಿಗರು ಅದಾ ಭಕ್ತಿಗೆ ಫಿದಾ ಆಗಿದ್ದಾರೆ. ಅಲ್ಲದೆ, ಕೇರಳ ಸ್ಟೋರಿ ಚಿತ್ರದಲ್ಲಿನ ನಟನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Sonam Bajwa: ಮೈ ಮೇಲೆ ಬಟ್ಟೆ ಇದೆ, ಒಳ ಉಡುಪು ಇಲ್ಲ ಎಂದ ನೆಟ್ಟಿಗರು .. ಇಲ್ಲಿವೆ ನೋಡಿ ಈ ನಟಿಯ ಹಾಟ್‌ ಫೋಟೋಸ್..


ಕೇರಳ ಸ್ಟೋರಿ ಕೇರಳದ ಹಿಂದೂ ಮಹಿಳೆಯರ ಸುತ್ತ ಸುತ್ತುತ್ತದೆ, ಹಿಂದೂ ಯುವತಿಯೊಬ್ಬಳು ಇಸ್ಲಾಮಿಕ್ ಸ್ನೇಹಿತರಿಂದ ಬ್ರೈನ್ ವಾಶ್ ಆಗಿ ಮತಾಂತರಗೊಳ್ಳುವ ಮತ್ತು ಭಯೋತ್ಪಾದರ ಕ್ರೌರ್ಯಕ್ಕೆ ಸಿಲುಕುವ ಕಥಾ ಹಂದರ ಈ ಸಿನಿಮಾದಲ್ಲಿದೆ. ಮತಾಂತರದಂತಹ ಸೂಕ್ಷ್ಮ ವಿಚಾರ ಹೊಂದಿರುವ ಹಿನ್ನೆಲೆ ಈ ಚಿತ್ರ ನಿಷೇಧ ಮತ್ತು ಬೆದರಿಕೆಯನ್ನು ಎದುರಿಸುತ್ತಿದೆ. ಪ್ರಸ್ತುತ ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರವು ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ, ಸುಮಾರು 60 ಕೋಟಿ ರೂ. ದಾಟುವಲ್ಲಿ ಯಶಸ್ವಿಯಾಗಿದೆ.


 

 

 

 



 

 

 

 

 

 

 

 

 

 

 

A post shared by Adah Sharma (@adah_ki_adah)


ಆರಂಭಿಕ ಅಂದಾಜಿನ ಪ್ರಕಾರ ಈ ಚಿತ್ರವು ಒಟ್ಟು 68.86 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.  ಸ್ಟೋರಿ ವಿಚಾರಕ್ಕೆ ಬರುವುದಾದ್ರೆ, ಕೇರಳದ ಹಿಂದೂ ಯುವತಿಯನ್ನು ಆಕೆಯ ಗೆಳತಿಯರು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮತ್ತು ಸಿರಿಯಾಕ್ಕೆ ಹೋಗಲು ಬ್ರೈನ್ ವಾಶ್ ಮಾಡುತ್ತಾರೆ. ಹಿಂದು ಯುವತಿಯ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ನಂತರ ಆಕೆಯನ್ನು ISIS ಭಯೋತ್ಪಾದಕ ಸಂಘಟನೆಗೆ ಕಳುಹಿಸಲಾಗುತ್ತದೆ, ಅಲ್ಲಿ ಆಕೆಗೆ ಚಿತ್ರಹಿಂಸೆ ನೀಡಲಾಗುತ್ತದೆ.


ಇದನ್ನೂ ಓದಿ: Shraddha das : ಶ್ರದ್ಧಾ ನಿನ್ನ ಅಪರೂಪದ ಸೌಂದರ್ಯ ರಾಶಿಗೆ ನಾನಾದೆ ದಾಸ..! ಫೋಟೋಸ್‌ ನೋಡಿ


ಸುದೀಪ್ತೋ ಸೇನ್ ನಿರ್ದೇಶನ ಈ ಸಿನಿಮಾವನ್ನು ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಈ ಚಿತ್ರ ಕೇರಳದ ಸುಮಾರು 32,000 ಮಹಿಳೆಯರ ಮತಾಂತರಕ್ಕೆ ಸಿಕ್ಕಿಬಿದ್ದು, ನೋವು ಅನುಭವಿಸಿದ ನೈಜ ಘಟನೆಗಳನ್ನು ಆಧರಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಈ ಚಿತ್ರವನ್ನು ವಿರೋಧಿಸಿದ್ದರು. ಅಲ್ಲದೆ, ಇದನ್ನೂ ಸಂಘ ಪರಿವಾರದ ಅಜೆಂಡಾ ಅಂತ ದೂರಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ