Adipurush Pre Release Event in Tirupati: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ ಆದಿಪುರುಷ. ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಈ ಚಿತ್ರ ಜೂನ್ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಓಂ ರಾವುತ್ ನಿರ್ದೇಶಿಸಿದ ಈ ಸಿನಿಮಾ ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ. ರಾಘವನಾಗಿ ಪ್ರಭಾಸ್, ಜಾನಕಿಯಾಗಿ ಕೃತಿ ನಟಿಸಿದ್ದಾರೆ. ಲಂಕೇಶ್ವರ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಚಾರ ಕಾರ್ಯಗಳು ಕಿಕ್‌ ಪಡೆದಿವೆ. ಇದೇ ತಿಂಗಳ 6 ರಂದು ತಿರುಪತಿಯಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಚಿತ್ರತಂಡ ಹಮ್ಮಿಕೊಂಡಿದೆ.  


COMMERCIAL BREAK
SCROLL TO CONTINUE READING

ಆದಿಪುರುಷ ಪ್ರಿ ರಿಲೀಸ್‌ ಕಾರ್ಯಕ್ರಮಕ್ಕೆ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಆರಂಭದಲ್ಲಿ ಪ್ರಚಾರ ಮಾಡಲಾಗಿತ್ತು. ಆದರೆ ಈ ಸಮಾರಂಭಕ್ಕೆ ಚಿನ್ನಜೀಯರ ಸ್ವಾಮೀಜಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ಅವರ ಭಕ್ತರಿಗೆ ಹಾಗೂ ತಿರುಪತಿಗೆ ಬಂದವರಿಗೆ ಈಗಾಗಲೇ ಪ್ರೀ ರಿಲೀಸ್ ಈವೆಂಟ್ ಪಾಸ್ ಗಳನ್ನು ನೀಡಿರುವುದು ಗೊತ್ತಾಗಿದೆ. ಪ್ರಭಾಸ್ ಅಭಿಮಾನಿಗಳ ಜೊತೆಗೆ ತಿರುಪತಿ ಭಕ್ತರು ಮತ್ತು ಸಿನಿಪ್ರೇಮಿಗಳು ಈ ಈವೆಂಟ್‌ಗೆ  ಬರುವ ಸಾಧ್ಯತೆಯಿದೆ. ಎಸ್.ವಿ.ಯೂನಿವರ್ಸಿಟಿ ಮೈದಾನದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ 200 ಗಾಯಕರು ಮತ್ತು 200 ನೃತ್ಯಗಾರರೊಂದಿಗೆ ಪ್ರದರ್ಶನ ಇರಲಿದೆಯಂತೆ. 


ಇದನ್ನೂ ಓದಿ: ಅವಿವಾ ಕೈ ಹಿಡಿದು ಅರುಂಧತಿ ನಕ್ಷತ್ರ ತೋರಿಸಿದ ಅಭಿಷೇಕ್!


ಶ್ರೇಯಸ್ ಮೀಡಿಯಾ ಆದಿಪುರುಷ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆದರೆ ತಿರುಪತಿಯಲ್ಲಿ ಸುರಿದ ಮಳೆಯಿಂದ ಪ್ರಭಾಸ್ ಅಭಿಮಾನಿಗಳು ಕಂಗಾಲಾಗಿದ್ದಾರೆ. ನಾಳೆಯೂ ಮಳೆಯಾದರೆ ತೊಂದರೆಯಾಗುತ್ತದೆ ಎನ್ನುತ್ತಿದ್ದಾರೆ.  


ಬಾಹುಬಲಿ ದಿ ಬಿಗಿನಿಂಗ್ ಪ್ರಿ-ರಿಲೀಸ್ ಈವೆಂಟ್ ಕೂಡ ಇದೇ ಸ್ಥಳದಲ್ಲಿ ನಡೆದಿತ್ತು. ಈಗ ಎಸ್ ವಿ ಯೂನಿವರ್ಸಿಟಿ ಮೈದಾನದಲ್ಲಿ ಆದಿಪುರುಷ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯುತ್ತಿದ್ದು, ಚಿತ್ರ ಬಂಪರ್ ಹಿಟ್ ಆಗುವುದು ಖಚಿತ ಎನ್ನುತ್ತಾರೆ ಅಭಿಮಾನಿಗಳು. ಎಸ್ ವಿ ಮೈದಾನದಲ್ಲಿ ಮತ್ತೊಮ್ಮೆ ಪ್ರಭಾಸ್ ಸಿನಿಮಾ ಕಾರ್ಯಕ್ರಮ ನಡೆಯುತ್ತಿದ್ದು, ಆದಿಪುರುಷ ಕೂಡ ಸೂಪರ್ ಸಕ್ಸಸ್ ಆಗಲಿ ಎಂಬ ಹಾರೈಕೆ ಅಭಿಮಾನಿಗಳದ್ದಾಗಿದೆ.  


ಇದನ್ನೂ ಓದಿ:  ‘ಭೈರತಿ ರಣಗಲ್​’ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.