Ananya Pandey : ‘ಆಶಿಕಿ 2’ ಸಿನಿಮಾದಿಂದ ಜನಪ್ರಿಯತೆ ಪಡೆದ ಆದಿತ್ಯ ರಾಯ್​ ಕಪೂರ್​ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ನಟ ಡೇಟಿಂಗ್‌ ವದಂತಿಯಿಂದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಹೌದು ಆದಿತ್ಯ ರಾಯ್​ ಕಪೂರ್​ ಹಾಗೂ ನಟಿ ಅನನ್ಯಾ ಪಾಂಡೆ ಅವರ ಪ್ರೇಮ್​ ಕಹಾನಿ ಬಹಿರಂಗ ಆಗಿದೆ, ನಟಿ ಅನನ್ಯಾ ಪಾಂಡೆ ಅವರ ಜೊತೆ ನಟ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇನ್ನು ಈ ವಿಚಾರವಾಗಿ ಅವರು ತಾವಾಗಿಯೇ ಹೇಳಿಕೊಂಡಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳು ಅವರಿಬ್ಬರ ಪ್ರೀತಿಗೆ ಸಾಕ್ಷಿ ಒದಗಿಸುತ್ತಿವೆ. ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಅವರು ವಿದೇಶಕ್ಕೆ ತೆರಳಿದ್ದಾರೆ. ಆದರೆ ಇಬ್ಬರೂ ಹೋಗಿರೋದು ಒಂದೇ ಪ್ಲೇಸ್‌ಗೆ. 


ಸ್ಪೇನ್‌ನಲ್ಲಿ ನಡೆಯುತ್ತಿದ್ದ ಸಂತೀತ ಕಾರ್ಯಕ್ರಮದಲ್ಲಿ ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಒಟ್ಟಿಗೆ ಹೋಗಿದ್ದಾರೆ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಸ್ಟೋರಿ ಶೇರ್‌ ಮಾಡಿಕೊಂಡಿದ್ದಾರೆ. ಇಬ್ಬರೂ ಮೆನ್ಷನ್‌ ಮಾಡಿಕೊಂಡಿರುವುದರಿಂದ ಅಭಿಮಾನಿಗಳೆಗೆ ಕ್ಲಾರಿಟಿ ಸಿಕ್ಕಿದೆ.


Ileana D'Cruz: ಕೊನೆಗೂ ಬಾಯ್‌ಫ್ರೆಂಡ್ ಮುಖ ತೋರಿಸಿದ ಗೋವಾ ಬ್ಯೂಟಿ..!


ಕೆಲವು ದಿನಗಳ ಹಿಂದೆ ಅನನ್ಯಾ ಪಾಂಡೆಯನ್ನು ಆದಿತ್ಯ ರಾಯ್​ ಕಪೂರ್​ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಹರಿದಾಡುತ್ತಿತ್ತು. ಇದೀಗ ಅವರಿಬ್ಬರ ನಡುವಿನ ಪ್ರೀತಿಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. 


ಈ ಫೋಟೋದಲ್ಲಿ, ಆದಿತ್ಯ ಏನನ್ನೋ ಹೇಳುತ್ತಿದ್ದಾನೆ ಮತ್ತು ಅನನ್ಯಾ ಅವನನ್ನು ನೋಡುತ್ತಾ ಅವಳ ಕಣ್ಣುಗಳಲ್ಲಿ ಮುಳುಗಿದಂತೆ ಕಾಣಿಸುತ್ತದೆ. ಚಿತ್ರದಲ್ಲಿ ಅನನ್ಯಾಳ ಮುಖದ ನಗುವೇ ಆಕೆ ಆದಿತ್ಯನನ್ನು ಎಷ್ಟು ಪ್ರೀತಿಸುತ್ತಿದ್ದಾಳೆ ಎನ್ನುವುದನ್ನು ಹೇಳುತ್ತಿದೆ. ಈ ದಿನದಂದು, ಆದಿತ್ಯ ನೀಲಿ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ ಮತ್ತು ಅನನ್ಯಾ ಬಿಳಿ ಬಣ್ಣದ ಟಾಪ್ ಜೊತೆಗೆ ಗುಲಾಬಿ ಬಣ್ಣದ ಜಾಕೆಟ್ ಧರಿಸಿದ್ದಾರೆ. ಇನ್ನು ಯಾರೋ ಗುಟ್ಟಾಗಿ ಇಬ್ಬರ ಫೋಟೋಗಳನ್ನು ತೆಗೆದು ವೈರಲ್ ಮಾಡಿದ್ದಾರೆ.


ಇದನ್ನೂ ಓದಿ-Kajol Video: ಜನಾಂಗೀಯ ನಿಂದನೆ ಪದ ಬಳಸಿದ ಕಾಜೋಲ್.. ನೆಟ್ಟಿಗರಿಂದ ಕ್ಲಾಸ್‌!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.