1971ರ ನಂತರ ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ಕಿಂಗ್ ಖಾನ್ ʼಪಠಾಣ್ʼ ರಿಲೀಸ್..!
Pathaan release in bangladesh : ಬರೋಬ್ಬರಿ 4 ವರ್ಷಗಳ ಬಳಿಕ ʼಪಠಾಣ್ʼ ಸಿನಿಮಾದ ಮೂಲಕ ತೆಲೆ ಮೇಲೆ ಮಿಂಚಿದ ನಟ ಶಾರುಖ್ ಶಾನ್ ಇದೀಗ ಬಂಗ್ಲಾದೇಶದಲ್ಲೂ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. 1971 ರ ನಂತರ ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ಆದಿತ್ಯ ಚೋಪ್ರಾ ನಿರ್ಮಾಣದ ಪಠಾಣ್ ಸಿನಿಮಾ ಬಿಡುಗಡೆಯಾಗಲಿದೆ.
Pathaan in bangladesh : ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿರುವ ಸಿನಿಮಾ ಪಠಾಣ್. ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಬ್ಲಾಕ್‌ಬಸ್ಟರ್ ಪಠಾಣ್‌ನಲ್ಲಿ ಶಾರುಖ್ ನಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1050 ಕೋಟಿಗೂ ಹೆಚ್ಚು ಗಳಿಕೆಯೊಂದಿಗೆ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾ ದಾಖಲೆ ಸೃಷ್ಟಿಸಿದೆ.
ಇದೀಗ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಈ ಚಿತ್ರವು ವಿಭಜನೆಯ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರವಾಗಿದೆ. ಪಠಾಣ್ ಬಾಂಗ್ಲಾದೇಶದಲ್ಲಿ ಮೇ 12 ರಂದು ಬಿಡುಗಡೆಯಾಗಲಿದೆ. ಈ ಕುರಿತು ಅಂತರಾಷ್ಟ್ರೀಯ ವಿತರಣಾ ವಿಭಾಗದ ಉಪಾಧ್ಯಕ್ಷ ನೆಲ್ಸನ್ ಡಿಸೋಜ ಮಾತನಾಡಿ, ಸಿನಿಮಾ ಯಾವತ್ತೂ ರಾಷ್ಟ್ರ, ಜನಾಂಗ, ಸಂಸ್ಕೃತಿಗಳ ನಡುವೆ ಒಗ್ಗೂಡಿಸುವ ಶಕ್ತಿಯಾಗಿದೆ. ಇದು ಗಡಿಗಳನ್ನು ಮೀರುತ್ತದೆ, ಜನರನ್ನು ಪ್ರೇರೇಪಿಸುತ್ತದೆ ಅಲ್ಲದೆ, ಜನರನ್ನು ಒಟ್ಟುಗೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿಶ್ವಾದ್ಯಂತ ಐತಿಹಾಸಿಕ ವ್ಯವಹಾರವನ್ನು ಮಾಡಿರುವ ಪಠಾಣ್ ಈಗ ಬಾಂಗ್ಲಾದೇಶದಲ್ಲಿ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿವೆ 3 ಬಂಗಲೆಗಳು, ಜಿಮ್, ಸ್ವಿಮ್ಮಿಂಗ್ ಪೂಲ್ ಜೊತೆಗೆ ಇಷ್ಟೆಲ್ಲಾ ಸೌಕರ್ಯ
1971ರ ದೇಶ ವಿಭಜನೆಯ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರ ಪಠಾಣ್. ʼಏಕ್ ಥಾ ಟೈಗರ್ʼ, ʼಟೈಗರ್ ಜಿಂದಾ ಹೈʼ ಮತ್ತು ʼವಾರ್ʼ ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿರುವ YRF ನ ಸ್ಪೈ ಯೂನಿವರ್ಸ್‌ನ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲಿ ಪಠಾಣ್ ಸಹ ಒಂದು. YRF ಸ್ಪೈ ಯೂನಿವರ್ಸ್ ಈಗ ಭಾರತೀಯ ಚಿತ್ರರಂಗದ ಅತಿದೊಡ್ಡ ಸಿನಿ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ.
ಅಲ್ಲದೆ, 4 ವರ್ಷಗಳ ಸುದೀರ್ಘ ವಿರಾಮದ ನಂತರ ಶಾರುಖ್ ಖಾನ್ ಪಠಾಣ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ. ಈಗಾಗಲೇ ಶಾರುಖ್ ಆಕ್ಷನ್ ಅವತಾರ ಎಲ್ಲರಿಗೂ ಇಷ್ಟವಾಗಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿದ್ದಾರೆ. ಈ ಸಿನಿಮಾ ಬೇಷರಂ ರಂಗ್ ಸಾಂಗ್ ಬಿಡುಗಡೆಯಾದಾಗಿನಿಂದ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ದೀಪಿಕಾ ಕೇಸರಿ ಬಿಕಿನಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.