Naga Chaitanya 2nd Marriage: ನಾಗ ಚೈತನ್ಯ ತೆಲುಗು ಚಿತ್ರರಂಗದ ಪ್ರಮುಖ ನಟ. ಅವರು 2017 ರಲ್ಲಿ ನಟಿ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾದರು.. ಆದರೆ ನಾಲ್ಕು ವರ್ಷಗಳ ನಂತರ ಅವರೊಂದಿಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದರು..  ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ನಾಗ ಚೈತನ್ಯ 2021ರಲ್ಲಿ ಸಮಂತಾಗೆ ವಿಚ್ಛೇದನ ನೀಡಿದ್ದರು. ವಿಚ್ಛೇದನದ ನಂತರ ಇಬ್ಬರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. 


COMMERCIAL BREAK
SCROLL TO CONTINUE READING

ನಟಿ ಸಮಂತಾ ಸದ್ಯ ಸ್ಟಾರ್‌ ನಾಯಕಿಯಾಗಿ ಸಖತ್‌ ಸದ್ದು ಮಾಡುತ್ತಿದ್ದರೆ.. ಅದೇ ರೀತಿ ನಾಗ ಚೈತನ್ಯ ಕೂಡ ಅಮೀರ್ ಖಾನ್ ಅಭಿನಯದ ಲಾಲ್ ಸತ್ತಾ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಚಿತ್ರ ಫ್ಲಾಪ್ ಆದ ಕಾರಣ ಟಾಟಾ ಬಾಲಿವುಡ್ ಬಿಟ್ಟು ತೆಲುಗು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಸದ್ಯ ಇವರ ಅಭಿನಯದಲ್ಲಿ ತಾಂಡೆಲ್ ಎಂಬ ಸಿನಿಮಾ ತಯಾರಾಗುತ್ತಿದೆ. ಇದರಲ್ಲಿ ನಾಗ ಚೈತನ್ಯ ಎದುರು ಸಾಯಿ ಪಲ್ಲವಿ ನಟಿಸಿದ್ದಾರೆ.


ಇದನ್ನೂ ಓದಿ-ಒಂದಾನೊಂದು ಕಾಲದಲ್ಲಿ ಹುಡುಗನ ಕನಸಿನ ಕನ್ಯೆ, ಚಿತ್ರರಂಗವನ್ನು ನಡುಗಿಸಿದ ನಾಯಕಿ!! ಆ ಸುಂದರಿ ಯಾರು ಗೊತ್ತಾ


ಇದೆಲ್ಲದರ ಮಧ್ಯೆ ಟಾಲಿವುಡ್‌ನಲ್ಲಿ ನಾಗ ಚೈತನ್ಯ ರೊಮ್ಯಾನ್ಸ್ ವದಂತಿಗಳು ಹರಿದಾಡುತ್ತಿವೆ. ಪೊನ್ನಿಯ ಸೆಲ್ವನ್ ಚಿತ್ರದಲ್ಲಿ ನಟ ಜಯಂ ರವಿ ಎದುರು ನಟಿಸಿದ್ದ ನಟಿ ಶೋಭಿತಾ ಧೂಳಿಪಾಲ ಅವರನ್ನು ನಾಗ ಚೈತನ್ಯ ಪ್ರೀತಿಸುತ್ತಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರೂ ಲಂಡನ್ ನಲ್ಲಿ ಡೇಟ್ ಗೆ ಹೋದಾಗ ತೆಗೆದ ಫೋಟೋವೊಂದು ಲೀಕ್ ಆಗಿ, ವೈರಲ್ ಆಗಿದೆ.


ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರು ಪೋಸ್ಟ್ ಮಾಡಿದ ಫೋಟೋಗಳನ್ನು ಹೋಲಿಕೆ ಮಾಡಿದ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಹೋಗಿದ್ದಾರೆ ಎಂದು ಊಹಿಸುತ್ತಿದ್ದಾರೆ.. ಇವರಿಬ್ಬರ ರಹಸ್ಯ ಪ್ರೇಮ ಕಹಾನಿ ಬೆಳಕಿಗೆ ಬರುತ್ತಿದ್ದಂತೆ ಟಾಲಿವುಡ್ ವಲಯದಲ್ಲಿ ನಾಗ ಚೈತನ್ಯ-ಸೋಫಿತಾ ಜೋಡಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ಇದೆ. 


ಇದನ್ನೂ ಓದಿ-ಕಿಯಾರಾ ಸೌಂದರ್ಯ ಹಿಂದಿನ ರಹಸ್ಯವೇನು ಗೊತ್ತಾ ? ಇಲ್ಲಿದೆ ಕೆಲವು ಡಯಟ್ ಟಿಪ್ಸ್!!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.