ರಶ್ಮಿಕಾ ಮಂದಣ್ಣ ಬಳಿಕ ಡಿಜಿಟಲ್ ಮ್ಯಾನಿಪ್ಯುಲೇಷನ್ಗೆ ಒಳಗಾದ ಮತ್ತೊಬ್ಬ ನಟಿ: ಕತ್ರಿನಾ ಡೀಪ್‌ಫೇಕ್ ಚಿತ್ರ ವೈರಲ್!
Bollywood Actress Katrina Kaif:ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವಿವಾದದ ನಂತರ, ಬಹುನಿರೀಕ್ಷಿತ `ಟೈಗರ್ 3` ಸಿನಿಮಾದ ಕತ್ರಿನಾ ಕೈಫ್ ಟವೆಲ್ ಫೈಟ್ ದೃಶ್ಯವು ಡಿಜಿಟಲ್ ಮ್ಯಾನಿಪ್ಯುಲೇಷನ್ಗೆ ಒಳಗಾಗಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Katrina Deep Fake Photo Viral: ಇತ್ತೀಚೆಗಷ್ಟೇ ಡೀಪ್‌ಫೇಕ್ ವಿಡಿಯೋವೊಂದಕ್ಕೆ ಗುರಿಯಾದ ಕನ್ನಡ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ, ಈ ಪ್ರಕರಣದಲ್ಲಿ ಡೀಪ್‌ಫೇಕ್ ವಿಡಿಯೋದಲ್ಲಿ ಯುವತಿಯೊಬ್ಬರು ಎದೆಯ ಭಾಗ ರಿವೀಲ್ ಮಾಡುವ ಕಪ್ಪು ಬಟ್ಟೆಯನ್ನು ಧರಿಸಿ ಲಿಫ್ಟ್‌ಗೆ ಎಂಟ್ರಿ ನೀಡುವುದನ್ನು ತೋರಿಸುತ್ತದೆ. ಆದರೆ, ಆಕೆಯ ಮುಖವನ್ನು ರಶ್ಮಿಕಾಗೆ ಹೋಲುವ ರೀತಿಯಲ್ಲಿ ಮಾರ್ಫ್ ಮಾಡಿ ಎಡಿಟ್ ಮಾಡಲಾಗಿದ್ದು, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋ ನಕಲಿ ಎಂದು ಗಮನಸೆಳೆದ್ದರು. ಈನಟಿ ತಮ್ಮ ಆಘಾತ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ.
ಬಳಿಕ ನಟಿ ರಶ್ಮಿಕಾಗೆ ಅಭಿಮಾನಿಗಳು ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಮೃಣಾಲ್, ನಾಗ ಚೈತನ್ಯ ಸೇರಿದಂತೆ ಅನೇಕರು ಬೆಂಬಲ ನೀಡಿದ್ದರು. ಮಾರ್ಫ್ ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ಮೇಲೆ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ, "ಅತ್ಯಂತ ಭಯಾನಕ" ಎಂದಿದ್ದಾರೆ. ಇನ್ನೂ ಮೂಲ ವಿಡಿಯೋದಲ್ಲಿರುವ ಜಾರಾ ಪಟೇಲ್ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ನಕಲಿ ವಿಡಿಯೋಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. ಇದೀಗ ಕತ್ರಿನಾ ಕೈಫ್ ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
ಇದನು ಓದಿ: Tiger 3: ಕತ್ರಿನಾ ಕೈಫ್ ಟವೆಲ್ ಫೈಟ್ ಸೀನ್ ವೈರಲ್..!
ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗಿನಿಂದ ಕತ್ರಿನಾ ಕೈಫ್ ಟವೆಲ್ ಫೈಟ್ ದೃಶ್ಯವು ಭಾರಿ ಸುದ್ದಿಯಲ್ಲಿದ್ದು, ಈಕೆ ಈ ಫೈಟ್ ಬಗ್ಗೆ ಇದನ್ನು ಶೂಟ್ ಮಾಡಲು ಕಷ್ಟಕರವಾಗಿದ್ದು, ಇಬ್ಬರು ಮಹಿಳೆಯರು ಈ ರೀತಿ ಫೈಟ್ ಮಾಡುವ ಸೀಕ್ವೆನ್ಸ್ ಇರುವುದು ಅಪರೂಪ ಎಂದು ಹೇಳಿಕೊಂಡಿದ್ದಾರೆ. ಇದರ ಚಿತ್ರವನ್ನು ಕತ್ರಿನಾ ಕೈಫ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಬಾಲಿವುಡ್ ನಟಿ ಕತ್ರಿನಾ ಮತ್ತು ಹಾಲಿವುಡ್ ಸ್ಟಂಟ್ ವುಮನ್ ಜೊತೆ ಟವೆಲ್ ಧರಿಸಿ ಸಕತ್ ಫೈಟ್ ಮಾಡುತ್ತಿದ್ದಾರೆ. ಆದರೆ, ಈಗ ವೈರಲ್ ಆಗಿರುವ ಎಡಿಟ್ ಮಾಡಿರುವ ಚಿತ್ರದಲ್ಲಿ ಕತ್ರಿನಾ ಕೈಫ್ ಟವೆಲ್ ಬದಲಿಗೆ ಲೋ ಕಟ್ ವೈಟ್ ಬ್ರಾ ಮತ್ತು ಮ್ಯಾಚಿಂಗ್ ಇನ್ನರ್ ವೇರ್ ಧರಿಸಿರುವ ಹಾಗೆ ಮಾಡಲಾಗಿದೆ.
ಆರ್ಟಿಫಿಶೀಯಲ್ ಇಂಟಲಿಜೆನ್ಸ್ ಬಳಸಿಕೊಂಡು ಫೋಟೋವನ್ನು ಬದಲಾಯಿಸಲಾಗಿದ್ದರಿಂದ, ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಬಳಕೆದಾರರು ಡೀಪ್‌ಫೇಕ್ ಚಿತ್ರವನ್ನು ಖಂಡಿಸಿದ್ದಾರೆ. "ಟೈಗರ್ 3 ರ ಕತ್ರಿನಾ ಕೈಫ್ ಟವೆಲ್ ದೃಶ್ಯವನ್ನು ಮಾರ್ಫ್ ಮಾಡಲಾಗಿದ್ದು, ಸದ್ಯ ಈ ಡೀಪ್‌ಫೇಕ್ ಫೋಟೋ ವೈರಲ್ ಆಗಿದೆ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. AI ಒಂದು ಉತ್ತಮ ಸಾಧನ. ಆದರೆ ಮಹಿಳೆಯರನ್ನು ಕೆಟ್ಟದಾಗಿ ತೋರಿಸಲು ಅದನ್ನು ಬಳಸುವುದು ಕ್ರಿಮಿನಲ್ ಅಪರಾಧ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.