ನವದೆಹಲಿ: ಬಾಲಿವುಡ್ ನಲ್ಲಿ ಡ್ರೀಮ್ ಗರ್ಲ್ ಎಂದೇ ಖ್ಯಾತ ಹೇಮಾ ಮಾಲಿನಿ ಅವರ ಮುಂಬರುವ ಚಿತ್ರ 'ಶಿಮ್ಲಾ ಮಿರ್ಚ್'ನ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ತುಂಬಾ ಸ್ವಾರಸ್ಯಕರವಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೈಲರ್ ನಲ್ಲಿ ಹೇಮಾ ಮಾಲಿನಿ ಕಂಡು ಬಂದ ರೀತಿಗೆ ನೀವು ಸಹ ವಾಹ್-ವಾಹ್ ಹೇಳುವಿರಿ. ಈ ಚಿತ್ರದಲ್ಲಿ ನಟ ರಾಜ್ ಕುಮಾರ್ ಜೊತೆ ಹೇಮಾಮಾಲಿನಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಶಕ್ತಿ ಕಪೂರ್ ಕೂಡ ಮುಖ್ಯಭೂಮಿಕೆಯಲ್ಲಿ ಕಂಡುಬಂದಿದ್ದು, ರಮೇಶ್ ಸಿಪ್ಪಿ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.


COMMERCIAL BREAK
SCROLL TO CONTINUE READING


ಹೇಮಾ ಮಾಲಿನಿ ಅವರ ವೃತ್ತಿ ಜೀವನದಲ್ಲಿ ಖ್ಯಾತ ನಿರ್ಮಾಪಕ ರಮೇಶ್ ಸಿಪ್ಪಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ರಮೇಶ್ ಸಿಪ್ಪಿ ತಮ್ಮ ಚಿತ್ರ 'ಶೋಲೆ'ಯಲ್ಲಿ ಹೇಮಾ ಮಾಲಿನಿ ಅವರಿಗೆ 'ಬಸಂತಿ' ಪಾತ್ರ ನೀಡಿದ್ದರು. ಅಷ್ಟೇ ಅಲ್ಲ ಹೇಮಾ ಮಾಲಿನಿ ಅವರ ಇನ್ನೊಂದು ಸೂಪರ್ ಹಿಟ್ ಚಿತ್ರ 'ಸೀತಾ ಔರ್ ಗೀತಾ' ನಿರ್ದೇಶನವನ್ನೂ ಕೂಡ ರಮೇಶ್ ಸಿಪ್ಪಿ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಇಂದಿಗೂ ಕೂಡ ಅಭಿಮಾನಿಗಳ ಸ್ಮೃತಿ ಪಟಲದಲ್ಲಿ ಖಾಯಂ ಸ್ಥಾನ ಉಳಿಸಿಕೊಂಡಿವೆ.


ಈ ಟ್ರೈಲರ್ ನಲ್ಲಿ ಚಿತ್ರದ ನಟ ರಾಜ್ ಕುಮಾರ್ ರಾವ್ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಲು ವಿಫಲಗೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಬಳಿಕ ಅವರು ರಾಕುಲ್ ಪ್ರೀತ್ ಸಿಂಗ್ ಗೆ ಪ್ರೇಮ ಪತ್ರ ಬರೆಯುತ್ತಾರೆ. ಈ ಪತ್ರ ರಾಕುಲ್ ಪ್ರೀತ್ ಸಿಂಗ್ ಬದಲು ರಾಕುಲ್ ಅವರ ತಾಯಿಯ ಪಾತ್ರ ನಿರ್ವಹಿಸುತ್ತಿರುವ ಹೇಮಾಮಾಲಿನಿ ಅವರ ಕೈಗೆ ಸಿಗುತ್ತದೆ. ಹೀಗಾಗಿ ಹೇಮಾ ಮಾಲಿನಿ ತನ್ನ ಮಗಳ ಬಾಯ್ ಫ್ರೆಂಡ್ ನ ಪ್ರೀತಿಗೆ ಒಳಗಾಗುವುದನ್ನು ತೋರಿಸಲಾಗಿದೆ.


ಹೇಮಾ ನಿರ್ವಹಿಸುತ್ತಿರುವ ಪತ್ರದ ಕಾರಣ ಇದೀಗ ಅಭಿಮಾನಿಗಳು ಹೇಮಾ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರ ಮಧ್ಯೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ. ಆದರೆ, ಈ ಹೋಲಿಕೆ ನ್ಯಾಯಸಮ್ಮತವಲ್ಲ ಎಂದೂ ಕೂಡ ಹೇಳಲಾಗುತ್ತಿದೆ. ಹಲವು ವರ್ಷಗಳ ಕಾಲ ಬಾಲಿವುಡ್ ನಲ್ಲಿ ತನ್ನ ನಟನೆ ಹಾಗೂ ಸೌಂದರ್ಯದ ಮೂಲಕ ಪ್ರೇಕ್ಷಕರನ್ನು ಕಟ್ಟಿ ಹಾಕಿರುವ ಹೇಮಾ ಮಾಲಿನಿ ಹೋಲಿಕೆಯಲ್ಲಿ ರಾಕುಲ್ ಪ್ರೀತ್, ಚಿತ್ರರಂಗದಲ್ಲಿ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ.


ಹೇಮಾ ಮಾಲಿನಿ ಅವರ ಈ 'ಶಿಮ್ಲಾ ಮಿರ್ಚ್' ಚಿತ್ರ ಜನವರಿ 3, 2020 ಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ ಮಥುರಾದಿಂದ ಸಂಸದೆಯಾಗಿರುವ ಹೇಮಾ ಮಾಲಿನಿ, ಬಹಳಷ್ಟು ದಿನಗಳ ಬಳಿಕ ಬೆಳ್ಳಿ ಪರದೆಗೆ ರೀಎಂಟ್ರಿ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಅವರು 'ಏಕ ಥಿ ರಾಣಿ ಐಸಿ ಭಿ' ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ವಿಜಯರಾಜೆ ಸಿಂಧಿಯಾ ಅವರ ಭೂಮಿಕೆಯಲ್ಲಿ ಕಂಡುಬಂದಿದ್ದರು.