ಪ್ರೇಕ್ಷಕರಿಗೆ ಕ್ಷಮೆ ಕೇಳಿದ ʼಏಜೆಂಟ್ʼ ಸಿನಿಮಾ ನಿರ್ಮಾಪಕ, ಕಾರಣವಾದ್ರೂ ಏನು..?
Agent Film : ಸಿನಿರಂಗದಲ್ಲಿ ಬಿಡುಗಡೆ ಆಗೋ ಸಿನಿಮಾಗಳೆಲ್ಲಾ ಗೆಲುವು ಸಾಧಿಸುತ್ತವೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಒಮ್ಮೊಮ್ಮೆ ಅದೃಷ್ಟ ನಮ್ಮ ಕೈಯನ್ನು ಹಿಡಿಯುವುದಿಲ್ಲ. ನಿರ್ಮಾಪಕರು ಸಿನಿಮಾ ಗೆದ್ದರೆ ಹುಮ್ಮಸ್ಸಿನಿಂದ ಬೀಗುತ್ತಾರೆ. ಸೋತೆ ಬೇಸರವಾಗುತ್ತಾರೆ. ಇನ್ನೂ ಕೆಲವರು ಸಿನಿಮಾ ಸೋತರು ಕೂಡ ಗೆದ್ದಿರುವಂತೆ ಬೀಗುತ್ತಾರೆ. ಆದರೆ ಇತ್ತೀಚೆಗೆ ಕೆಲವರು ಸೋಲನ್ನು ಒಪ್ಪಿಕೊಳ್ಳುತ್ತಿದ್ದಾರೆ.
Akhil Akkineni : ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದ ನಿರ್ದೇಶಕ ಸುರೇಂದರ್ ರೆಡ್ಡಿ ಈ ಸಲ ನೆಲಕಚ್ಚಿದ್ದಾರೆ. ಹೌದು ಭಾರೀ ವೆಚ್ಚದಲ್ಲಿ ನಿರ್ಮಾಣವಾಗಿದ್ದ ʼಏಜೆಂಟ್; ಸಿನಿಮಾ ಹೇಳಲು ಹೆಸರಿಲ್ಲದಂತೆ ಮುಗ್ಗರಿಸಿದೆ. ಅಖಿಲ್ ಅಕ್ಕಿನೇನಿ ಅಭಿನಯದ ತೆಲುಗು ಸಿನಿಮಾ ಇದು. ಈ ಸಿನಿಮಾ ಬಗ್ಗೆ ಮೊದಲ ಪ್ರದರ್ಶನದಿಂದಲೂ ಬರೀ ನೆಗೆಟಿವ್ ಟಾಕ್‌ಗಳೇ ಕೇಳಿಬಂದಿದ್ದವು.
ಟ್ರೋಲಿಗರು ಸಿನಿಮಾವನ್ನು ಟ್ರೋಲ್ ಮಾಡುಲು ಶುರು ಮಾಡಿದ್ದಾರೆ. ಇದಲ್ಲದೇ ಸಿನಿಮಾ ಪ್ರದರ್ಶನ ಒಂದು ವಾರ ಪೊರೈಸುವುದಕ್ಕಿಂತ ಮುಂಚಿತವಾಗಿಯೇ ಥಿಯೇಟರ್‌ನಿಂದ ಸಿನಿಮಾ ಹೊರಬಿದ್ದಿದೆ. ಈ ಏಜೆಂಟ್ ಸಿನಿಮಾವನ್ನು ರಾಮ್‌ಬ್ರಹ್ಮಂ ಸುಂಕರ್, ಅನಿಲ್ ಸುಂಕರ್ ಹಾಗೂ ದೀಪಾ ರೆಡ್ಡಿ ಅವರು ಜಂಟಿಯಾಗಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾರೀ ವೆಚ್ಚದಲ್ಲಿ ನಿರ್ಮಾಣವಾಗಿತ್ತು.
ಇದನ್ನೂ ಓದಿ-Rashmika Mandanna: ರಶ್ಮಿಕಾ ಮಂದಣ್ಣ ರಿಜೆಕ್ಟ್ ಮಾಡಿದ್ದ ಈ 5 ಸಿನಿಮಾಗಳೂ ಸೂಪರ್ ಹಿಟ್!
ಸತತವಾಗಿ ಸೋಲುಗಳಿಂದಲೇ ಮುಗ್ಗರಿಸಿದ್ದ ಅಖಿಲ್ ಏಂಜೆಟ್ ಸಿನಿಮಾ ಮೂಲಕ ಗೆಲ್ಲುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅದು ಸುಳ್ಳಾಗಿದೆ. ಸಿನಿಮಾ ಸಿನಿರಂಗದಲ್ಲಿ ನೆಲಕಚ್ಚಿದೆ. ಈ ವಿಚಾರವಾಗಿ ನಿರ್ಮಾಪಕ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಒಂದು ಪೋಸ್ಟ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ನಮ್ಮ ಸಿನಿಮಾ ಸೋತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಹತ್ತಿರ ಕ್ಷಮೆ ಯಾಚಿಸಿದ್ದಾರೆ.
Rashmika Mandanna: ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ!
ಒಟ್ಟಾರೆಯಾಗಿ ಈ ಸಿನಿಮಾ ಕಥೆಯನ್ನು ನೋಡುವುದಾದರೇ ದೇಶದ ಭದ್ರತೆಗಾಗಿ ನಿರ್ಮಿತವಾದ ರಿಸರ್ಚ್ ಅನಲಾಸಿಸ್ ವಿಂಗ್‌ದಲ್ಲಿ ಏಜೆಂಟ್ ಆಗುವ ಕನಸು ಕಟ್ಟಿಕೊಂಡಿದ್ದ ನಾಯಕನ ಕಥೆ. ಎಥಿಕಲ್ ಹ್ಯಾಕರ್ ಎಂದು ಈ ವಿಂಗ್ ಸಂಸ್ಥೆಯಲ್ಲಿ ಸೇರಿಕೊಳ್ಳು ನಾಯಕ ಎಷ್ಟು ಹರಸಾಹಸ ಮಡುತ್ತಾನೆ ಎನ್ನುವುದರ ಚಿತ್ರಣ ಈ ಸಿನಿಮಾ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.