Aishwarya Rai Abhishek Bachchan Divorce: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸೆಲಬ್ರಿಟಿಗಳೇ ಆದ್ರೂ ಅವರು ಎಲ್ಲರಂತೆ ‘ಗಂಡ-ಹೆಂಡತಿ’. ‘ಎಲ್ಲರ ಮನೆ ದೋಸೇನೂ ತೂತೇ…’ ಎನ್ನುವಂತೆ ಈ ಸ್ಟಾರ್ ಗಂಡ-ಹೆಂಡತಿಯ ನಡುವೆಯೂ ಜಗಳ ಅನ್ನೋದು ಕಾಮನ್ ಆಗಿದೆ. ಕಾಮನ್ ಆಗಿದ್ದ ಈ ಸ್ಟಾರ್ ಗಂಡ-ಹೆಂಡತಿಯ ಜಗಳ ಇತ್ತೀಚೆಗೆ ವಿಪರೀತವಾಗಿ ವಿಚ್ಛೇದನದವರೆಗೂ ಹೋಗಿಬಿಟ್ಟಿದೆ.


COMMERCIAL BREAK
SCROLL TO CONTINUE READING

ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ ಮಗ ಎನ್ನುವ ಹೆಚ್ಚುಗಾರಿಕೆ ಹೊಂದಿರುವ ಅಭಿಷೇಕ್ ಬಚ್ಚನ್ ಮತ್ತು ವಿಶ್ವಸುಂದರಿ ಐಶ್ವರ್ಯ ರೈ ಹೈ ಪ್ರೊಫೈಲ್ ಗಂಡ-ಹೆಂಡತಿ. ಇಬ್ಬರೂ ಖ್ಯಾತಿಯ ಉತ್ತುಂಗ ಚುಂಬಿಸಿ ಬಂದಿದ್ದರೂ, ‘ಇದ್ದರೆ ಇರಬೇಕು ಹಿಂಗೆ… ಈ ಜೋಡಿಯಂಗೆ’ ಎನ್ನುವಂತಿದ್ದರು. ಈ ಸುಂದರ ಸಂಸಾರಕ್ಕೆ ಸಾಕ್ಷಿಯಾಗಿದ್ದಳು ಮುದ್ದಿನ ಮಗಳು. ಆದರೆ ಅದ್ಯಾವ ಸಂದರ್ಭದಲ್ಲಿ ಅದೇನಾಯಿತೋ…. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಅದು ಸಂಬಂಧ ಮುರಿದುಹೋಗುವ ಹಂತಕ್ಕೂ ತಲುಪಿತು. 


ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಎಲ್ಲವೂ ಸರಿ ಇಲ್ಲ, ಗಂಡ-ಹೆಂಡಿತಿ ನಡುವೆ ಮತ್ತೆ ಅದೇ ಮಧುರ ಮೈತ್ರಿ ಉಳಿಯಲು ಸಾಧ್ಯವಿಲ್ಲ, ದಾಂಪತ್ಯದಲ್ಲಿ ಮೂಡಿರುವ ಬಿರುಕು ಮುಚ್ಚಿಕೊಳ್ಳಲು ಸಾಧ್ಯವೇ ಇಲ್ಲ, ಅವರಿಬ್ಬರೂ ಪರಸ್ಪರ ವಿಚ್ಛೇದನಕ್ಕೆ ಈಗಾಗಲೇ ಮಾನಸಿಕವಾಗಿ ತಯಾರಾಗಿದ್ದಾರೆ ಎನ್ನುವ ಸಂಗತಿಗಳು ಈಗ ಗುಟ್ಟೇನಲ್ಲ. 


ಇದನ್ನೂ ಓದಿ- ನಟ ದರ್ಶನ್‌ಗೆ ಮಧ್ಯಂತರ ಬೇಲ್ ಆಯ್ತು.. ಚಾಲೆಂಜಿಗ್ ಸ್ಟಾರ್ ಮುಂದಿರುವ ದೊಡ್ಡ ಚಾಲೆಂಜ್ ಯಾವುದು?


ಐಶ್ವರ್ಯ ರೈ ಇಂತಹ ಕಠಿಣ ನಿರ್ಧಾರಕ್ಕೆ ಬರಲು ಅಭಿಷೇಕ್ ಬಚ್ಚನ್ ಕಾರಣ. ಅಭಿಷೇಕ್ ಬಚ್ಚನ್ ತಮ್ಮ ‘ಲಂಚ್ ಬಾಕ್ಸ್’ ಚಿತ್ರದ ಹೀರೋಯಿನ್ ನಿಮ್ರತ್ ಕೌರ್ ಜೊತೆ ಹೆಚ್ಚು ಸಲುಗೆಯಿಂದ ಇದ್ದಾರೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ನಿಮ್ರತ್ ಕೌರ್ ಅವರು ಅಭಿಷೇಕ್ ಬಚ್ಚನ್ ಜೊತೆ ಹತ್ತಿರ ಆಗುತ್ತಿದ್ದಂತೆ ಐಶ್ವರ್ಯ ರೈ ದೂರವಾಗತೊಡಗಿದ್ದಾರೆ ಎನ್ನಲಾಗುತ್ತಿದೆ.


ಈಗಾಗಲೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದೂರವಾಗಿದ್ದು ಪ್ರತ್ಯೇಕ ವಾಸ ಮಾಡುತ್ತಿದ್ದಾರೆ. ಅಧಿಕೃತವಾಗಿ ವಿಚ್ಛೇದನ ಪಡೆಯಲು ಕಾಯುತ್ತಿದ್ದಾರೆ. ಈ ನಡುವೆ ಇವರಿಬ್ಬರನ್ನೂ ಒಂದಾಗುವಂತೆ ಮನವೊಲಿಸಲು ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಫಲ ಕೊಟ್ಟಿಲ್ಲ. ಜೊತೆಗೆ ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿರುವ ಬಗ್ಗೆಯಾಗಲಿ, ವಿಚ್ಛೇದನ ಪಡೆಯುವ ಬಗ್ಗೆಯಾಗಲಿ ಇಬ್ಬರೂ ಪ್ರತಿಕ್ರಿಯಿಸಿಲ್ಲ. 


ಇದನ್ನೂ ಓದಿ- ಐಶ್ವರ್ಯ ರೈಗೆ ಅಭಿಷೇಕ್ ಬಚ್ಚನ್ ಕೈ ಕೊಡಲು ಈ ನಟಿ ಕಾರಣನಾ?


ಈ ಎಲ್ಲದರ ನಡುವೆ, ಮುಖ್ಯವಾಗಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯುತ್ತಾರೆ ಎನ್ನುವ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿರುವುದರ ನಡುವೆ ಮೊದಲ ಬಾರಿ ಐಶ್ವರ್ಯ ರೈ ಪ್ರತಿಕ್ರಿಯಿಸಿದ್ದಾರೆ. ಕಪಿಲ್ ಶರ್ಮಾ ನಡೆಸಿಕೊಡುವ ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ಕಾರ್ಯಕ್ರಮದಲ್ಲಿ ಮಾತನಾಡಿರುವ ಐಶ್ವರ್ಯ ರೈ,  ‘ಪ್ರತಿ ಬಾರಿ ಅಭಿಷೇಕ್ ಬಚ್ಚನ್ ಜೊತೆ ಜಗಳವಾದಾಗ ನಾನೇ ಮೊದಲು Sorry ಕೇಳುತ್ತಿದ್ದೆ’ ಎಂದು ಹೇಳಿದ್ದಾರೆ. ಈ ಮೂಲಕ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಬಹಳ ದಿನ ಬಾಳುವಂತದ್ದಲ್ಲ ಎನ್ನುವ ಮಾತುಗಳನ್ನು ಪುಷ್ಟಿಕರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.