ತಮ್ಮ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟ ಅಭಿಷೇಕ್ ಬಚ್ಚನ್..! ಐಶ್ವರ್ಯ ರೈ ಇಷ್ಟೆಲ್ಲಾ ಮಾಡಿದ್ದೆ ಬಿರುಕಿಗೆ ಕಾರಣವಾಯ್ತಾ..?
Aishwarya Rai Abhishek Bachchan: ಐಶ್ ಕೈ ಹಿಡಿದ ಮೇಲೆ... 15 ವರ್ಷಗಳ ದಾಂಪತ್ಯದ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್ ಹೇಳಿಕೆ ವೈರಲ್!
Aishwarya Rai Abhishek Bachchan: ಭಾರತೀಯ ಸಿನಿ ಜಗತ್ತಿನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಕೊನೆಗೊಂಡಿದೆ ಎಂಬ ಸುದ್ದಿ ಸದ್ಯ ಹೆಚ್ಚು ಸದ್ದು ಮಾಡುತ್ತಿದೆ. ಈ ಮಧ್ಯೆ, ಅಭಿಷೇಕ್ ಮತ್ತೊಬ್ಬ ನತಿಯಿಂದಾಗಿ ಐಶ್ ಗೆ ಮೋಸ ಮಾಡಿದ್ದಾರೆ ಎಂಬ ವದಂತಿಗಳು ಕೂಡ ಹರಿದಾಡುತ್ತಿವೆ. ಈ ಮಧ್ಯೆ, ಬಿಗ್ ಬಿ ಕುಡಿ ಅಭಿಷೇಕ್ ಬಚ್ಚನ್ ತಮ್ಮ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟಿರುವ ಹೇಳಿಕೆ ವೈರಲ್ ಆಗತೊಡಗಿದೆ.
ವಯಸ್ಸಿನಲ್ಲಿ ತಮಗಿಂತಲೂ ದೊಡ್ಡವಳಾದ ವಿಶ್ವ ಸುಂದರಿಯನ್ನು ವರಿಸಿದ್ದ ಅಭಿಷೇಕ್ ಬಚ್ಚನ್ 2007ರಲ್ಲಿ ಐಶ್ವರ್ಯ ರೈ ಜೊತೆಗೆ ಸಪ್ತಪದಿ ತುಳಿದರು. ಅಂದಿನಿಂದಲೂ ಒಂದಿಲ್ಲೊಂದು ವಿಷಯವಾಗಿ ಈ ಜೋಡಿ ಚರ್ಚೆಯಲ್ಲಿರುತ್ತಾರೆ. ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಸುಂದರ ದಾಂಪತ್ಯಕ್ಕೆ ಯಾವ ಕೆಟ್ಟ ದೃಷ್ಟಿ ಬಿತ್ತೋ ಎಂಬಂತೆ ಇಬ್ಬರೂ ದೂರವಾಗಿದ್ದಾರೆ. ಇದಲ್ಲದೆ, ಅಭಿಷೇಕ್ ಬಚ್ಚನ್ ನಿಮ್ರತ್ ಕೌರ್ ಜೊತೆ ಅಫೇರ್ ಹೊಂದಿರುವುದರಿಂದಲೇ ಐಶ್ವರ್ಯ ರೈಗೆ ಮೋಸ ಮಾಡಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದೆರಗಿದೆ.
ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನದ ಬಗ್ಗೆ ಕುಟುಂಬದಿಂದಾಗಿ ಅಥವಾ ಅವರ ಆಪ್ತ ಮೂಲಗಳಿಂದಾಗಿ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ. ಆದರೂ, ಈ ಸ್ಟಾರ್ ದಂಪತಿಯ ಬಗ್ಗೆ ದಿನ ಒಂದಿಲ್ಲೊಂದು ವಿಷಯಗಳು ಹರಿದಾಡುತ್ತಲೇ ಇವೆ. ಅಭಿಷೇಕ್ ಬಚ್ಚನ್ ತಮ್ಮ 15 ವರ್ಷಗಳ ದಾಂಪತ್ಯದ ಬಗ್ಗೆ ಮಾತನಾಡಿರುವ ಹೇಳಿಕೆ ಈಗ ಮತ್ತೊಮ್ಮೆ ವೈರಲ್ ಆಗಿದ್ದು, ಇದರಲ್ಲಿ ಅಭಿಷೇಕ್ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ- ಸುದೀಪ್ ಜಾಗಕ್ಕೆ ದರ್ಶನ್- ಬಿಗ್ ಬಾಸ್ ನಿರೂಪಣೆಗೆ ಡಿ ಬಾಸ್: ಇದು ನಿಜಾನಾ?
ಬಾಲಿವುಡ್ ಹಂಗಾಮಾಗೆ ನೀಡಿರುವ ಸಂದರ್ಶನದ ಹಳೆಯ ವಿಡಿಯೋದಲ್ಲಿ ಅಭಿಷೇಕ್ ಬಚ್ಚನ್ ನೀಡಿರುವ ಹೇಳಿಕೆಗಳು ವೈರಲ್ ಆಗುತ್ತಿದ್ದು, ಇದರಲ್ಲಿ ಬಿಗ್ ಬಿ ಕುಡಿ ಐಶ್ವರ್ಯಾ ರೈ ಜೊತೆಗಿನ 15 ವರ್ಷಗಳ ದಾಂಪತ್ಯದ ಬಗ್ಗೆ ಮಾತನಾಡುತ್ತಾ, "ನನ್ನ ಹೆಂಡತಿ ಅಸಾಧಾರಣ.." ಭಾವನಾತ್ಮಕವಾಗಿ ಅವಳು ನನಗೆ ಬೆಂಬಲವಾಗಿದ್ದಾಳೆ ಎಂದಿದ್ದಾರೆ.
ನನಗಿಂತ ಮೊದಲೇ ಇಂಡಸ್ಟ್ರೀಗೆ ಬಂದಿರುವ ಐಶ್ ನನ್ನನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾಳೆ. ಈ ಇಂಡಸ್ಟ್ರಿಯಲ್ಲಿ ಹೆಚ್ಚು ಅನುಭವ ಹೊಂದಿರುವ ಐಶ್ವರ್ಯ ರೈ ನಾನು ಕೆಳಗೆ ಬಿದ್ದಾಗೆಲ್ಲಾ ನನಗೆ ಬೆಂಬಲ ನೀಡುತ್ತಾರೆ. ಯಾವ ಸಂದರ್ಭದಲ್ಲಿ ನನಗೆ ನನ್ನದೇ ಆದ ಸ್ಪೇಸ್ ನೀಡುವ ಅವಶ್ಯಕತೆ ಇದೆ... ಎಂಬುದು ಆಕೆಗೆ ಚೆನ್ನಾಗಿ ಗೊತ್ತಿದೆ ಆಕೆ ಓರ್ವ ಪರ್ಫೆಕ್ಟ್ ಪತ್ನಿ ಎಂಬ ವಿಚಾರವನ್ನು ತಿಳಿಸಿದ್ದಾರೆ.
ಇಂತಹ ಮಡದಿ ಹೊಂದಿರುವುದೇ ನನ್ನ ಅದೃಷ್ಟ:
ಸಾಕಷ್ಟು ಬಾರಿ ನೆಗೆಟಿವ್ ಕಾಮೆಂಟ್‌ಗಳನ್ನು ನಾವು ನೋಡಿರುತ್ತೇವೆ. ಐಶ್ವರ್ಯ ಇಂತಹ ಸಂದರ್ಭವನ್ನು ನಿಭಾಯಿಸುವುದು ಹೇಗೆ ಎಂಬುದನ್ನೂ ತುಂಬಾ ಸರಳ ಭಾಷೆಗಳಲ್ಲಿ ತಿಳಿ ಹೇಳುತ್ತಾರೆ. ನೆಗೆಟಿವ್ ಕಾಮೆಂಟ್ ಮೇಲೆ ಗಮನಹರಿಸಬೇಡಿ. ಸಾವಿರಾರು ಪಾಸಿಟಿವ್ ಕಾಮೆಂಟ್‌ಗಳಿವೆ ಇದರತ್ತ ಗಮನಕೇಂದ್ರೀಕರಿಸಿ ಎಂದವರು ನನಗೆ ಹೇಳುತ್ತಾರೆ. ನನ್ನ ದೃಷ್ಟಿಕೋನಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಗುರು ಆಕೆ. ಇಂತಹ ಮಡದಿಯನ್ನು ನನ್ನ ಲೈರ್ಫ್ ಪಾರ್ಟ್ನರ್ ಆಗಿ ಪಡೆದಿರುವ ನಾನೇ ಅದೃಷ್ಟವಂತ ಎಂದು ಅಭಿಷೇಕ್ ಬಚ್ಚನ್ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ- 13 ವರ್ಷಕ್ಕೆ ಅಪ್ಪನಿಗಿಂತಲೂ ದುಪ್ಪಟ್ಟು ಸಂಪತ್ತು ಹೊಂದಿರುವ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ?
ಸಾಕಷ್ಟು ಕಡೆಗಳಲ್ಲಿ ಪತಿ ಬಗ್ಗೆ ಮಾತನಾಡಿರುವ ಐಶ್ವರ್ಯ ರೈ ಕೂಡ ಇಂತಹುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇಂತಹ ಸುಂದರ ದಾಂಪತ್ಯದ ಮೇಲೆ ಯಾರ ವಕ್ರ ದೃಷ್ಟಿ ನೆಟ್ಟಿತೋ ಏನೋ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ನಡುವಿನ ಬಿರುಕು ಅವರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.