ಮುಂಬೈ: ಕರೋನಾಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ನಂತರ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಎಂಟು ವರ್ಷದ ಮಗಳು ಆರಾಧ್ಯ ಬಚ್ಚನ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಐಶ್ವರ್ಯಾ ಮತ್ತು ಆರಾಧ್ಯ ಇಬ್ಬರೂ ಮುಂಬೈನ ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಜಲ್ಸಾದಲ್ಲಿರುವ ತಮ್ಮ ಮನೆಗೆ ತಲುಪಿದ್ದಾರೆ. ಬಹಳ ಸಮಯದ ನಂತರ, ಬಚ್ಚನ್ ಕುಟುಂಬದಿಂದ ಒಂದು ಒಳ್ಳೆಯ ಸುದ್ದಿ ಹೊರಬಂದಿದೆ. ಆದರೆ, ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಯಾವಾಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಬ್ಬರ ಆರೋಗ್ಯ ಸ್ಥಿತಿಯಲ್ಲಿ ತುಂಬಾ ಸುಧಾರಣೆ ಇದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕರೋನಾ ವೈರಸ್ ಸೋಂಕಿನಿಂದ ಜುಲೈ 17 ರಂದು ಐಶ್ವರ್ಯಾ ಮತ್ತು ಆರಾಧ್ಯ ಅವರನ್ನು ಮುಂಬಯಿಯ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಶ್ವರ್ಯಾ ಮತ್ತು ಆರಾಧ್ಯ ಸಹ ಕರೋನಾ ಪಾಸಿಟಿವ್ ಆಗಿದ್ದರು, ಆದರೆ ಇಬ್ಬರೂ ಮುಂಬೈನ ಜುಹುನಲ್ಲಿರುವ ಬಂಗಲೆ ಜಲ್ಸಾದಲ್ಲಿ ಹೋಮ್ ಕ್ವಾರಂಟೀನ್ ಆಗಿದ್ದರು. ಆದರೆ ಬಳಿಕ ಐಶ್ವರ್ಯಾ ರೈ ಅವರಿಗೆ ಜ್ವರ, ಉಸಿರಾಟದ ತೊಂದರೆ, ಕಫ ಮತ್ತು ವಿಪರೀತ ಕೆಮ್ಮಿನಿಂದ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆ ಇಬ್ಬರು  ನಾನಾವತಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು.


ಜುಲೈ 11 ರಂದು ಶತಮಾನದ ಸೂಪರ್ ಸ್ಟರ್ ಅಮಿತಾಬ್ ಬಚ್ಚನ್ ಅವರು ತಮಗೆ ಕರೋನಾ ತಗುಲಿರುವ ಕುರಿತು ಮಾಹಿತಿ ನೀಡಿದ್ದರು, ಇದಾದ ಸ್ವಲ್ಪ ಸಮಯದ ನಂತರ ಅಭಿಷೇಕ್ ಬಚ್ಚನ್ ಅವರ ಕರೋನಾ ಪರೀಕ್ಷಾ ಫಲಿತಾಂಶವು ಸಕಾರಾತ್ಮಕವಾಗಿದೆ ಎಂದು ವರದಿ ಬಂದಿತ್ತು.


ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಕರೋನಾಗೆವರದಿ ಧನಾತ್ಮಕ ಬಂದ ಬಳಿಕ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಎಂಟು ವರ್ಷದ ಮಗಳು ಆರಾಧ್ಯ ಬಚ್ಚನ್ ಕೂಡ ಕರೋನಾ ವೈರಸ್ ಪರೀಕ್ಷೆಗೆ ಒಳಗಾಗಿದ್ದರು. ಇಬ್ಬರಿಗೂ ಕರೋನಾ ಲಕ್ಷಣಗಳು ಇರಲಿಲ್ಲ. ಏತನ್ಮಧ್ಯೆ, ಜಯ ಬಚ್ಚನ್ ಅವರ ಕರೋನಾ ವರದಿಯೂ ನಕಾರಾತ್ಮಕ ಬಂದಿತ್ತು.


ಇದಾದ ಒಂದು ದಿನ ನಂತರ ಅಂದರೆ ಜುಲೈ 12ಕ್ಕೆ ಐಶ್ವರ್ಯಾ ಮತ್ತು ಆರಾಧ್ಯರ ವರದಿ ಸಕಾರಾತ್ಮಕ ಬಂದಿತ್ತು. ಇದರ ನಂತರ, ಐಶ್ವರ್ಯ ಮತ್ತು ಆರಾಧ್ಯ ಅವರು ಮನೆಯ ಕ್ಯಾರೆಂಟೈನ್‌ನಲ್ಲಿದ್ದರು.