ಮಣಿರತ್ನಂ ಅವರ `ಪೊನ್ನಿಯಿನ್ ಸೆಲ್ವನ್` ಚಿತ್ರದಲ್ಲಿ ದ್ವಿಪಾತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್?
ಈ ಚಿತ್ರದಲ್ಲಿ ಚೋಳ ಸಾಮ್ರಾಜ್ಯದ ಪೆರಿಯಾ ಪಜುವೆಟ್ಟರಾಯಾರ್ ಅವರ ಪತ್ನಿ ನಂದಿನಿ ಪಾತ್ರದಲ್ಲಿ ಐಶ್ವರ್ಯ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ನವದೆಹಲಿ: ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಪ್ರಶಂಸಿಸಲ್ಪಟ್ಟ ಐಶ್ವರ್ಯಾ ರೈ ಬಚ್ಚನ್ ಅಭಿಮಾನಿಗಳು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಚಿತ್ರವೊಂದರಲ್ಲಿ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಉತ್ಸುಕರಾಗಿದ್ದಾರೆ. ಐಶ್ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿದ್ದವು.
ಇತ್ತೀಚಿನ ಮಾಹಿತಿ ಪ್ರಕಾರ, ಅವರು ಈ ಚಿತ್ರದಲ್ಲಿ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗುತ್ತಿದೆ. ಐಬಿಟೈಮ್ಸ್.ಕೊ.ಇನ್(IBTimes.co.in) ಪ್ರಕಾರ, 'ಪೊನ್ನಿಯಿನ್ ಸೆಲ್ವನ್' ತಮಿಳು ಮೆಗಾ ಪ್ರಾಜೆಕ್ಟ್ ಆಗಿದ್ದು, ದಕ್ಷಿಣ ಚಲನಚಿತ್ರೋದ್ಯಮದ ಹಲವಾರು ಮೇರು ಕಲಾವಿದರು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಬಹು ಭಾಷೆಗಳಲ್ಲಿ ಮೂಡಿ ಬರಲಿದೆ ಎಂಬ ವರದಿಯೂ ಇದೆ.
ಈ ಚಿತ್ರದಲ್ಲಿ ಚೋಳ ಸಾಮ್ರಾಜ್ಯದ ಪೆರಿಯಾ ಪಜುವೆಟ್ಟರಾಯಾರ್ ಅವರ ಪತ್ನಿ ನಂದಿನಿ ಪಾತ್ರದಲ್ಲಿ ಐಶ್ವರ್ಯ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಣಿಯಾಗಿದ್ದ ನಂದಿನಿಯ ತಾಯಿ - ಮಂದಕಿನಿ ದೇವಿಯ ಪಾತ್ರವನ್ನೂ ಐಶ್ವರ್ಯ ರೈ ನಿರ್ವಹಿಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಐಶ್ ತಾಯಿ ಮತ್ತು ಮಗಳ ಪಾತ್ರವನ್ನು ನಿರ್ವಹಿಸಲಿದ್ದು, ಅಲ್ಲಿ ನಂದಿನಿ ಪಾತ್ರದ ಮೇಲೆ ಪ್ರಧಾನ ಗಮನ ಹರಿಸಲಾಗುವುದು ಎನ್ನಲಾಗಿದೆ.
ಕಾರ್ತಿ, ವಿಕ್ರಮ್, ಮೋಹನ್ ಬಾಬು ಮತ್ತು ಕೀರ್ತಿ ಸುರೇಶ್ ಅವರಂತಹ ಪ್ರಮುಖ ಮುಖಗಳೊಂದಿಗೆ ಐಶ್ವರ್ಯಾ ನಾಮಸೂಚಕ ಪಾತ್ರದಲ್ಲಿ 'ಪೊನ್ನಿಯಿನ್ ಸೆಲ್ವನ್' ಕಾಣಿಸಿಕೊಳ್ಳಲಿದ್ದಾರೆ.
'ಪೊನ್ನಿಯಿನ್ ಸೆಲ್ವನ್' ತಮಿಳು ಭಾಷೆಯಲ್ಲಿ ಬರೆದ ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿ. ಇದು ಚೋಳ ರಾಜ ರಾಜರಾಜ ಚೋಳನ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಈ ವರ್ಷದ ನವೆಂಬರ್‌ನಿಂದ ಸೆಟ್ ಏರಲಿದೆ ಎಂದು ವರದಿಯಾಗಿದೆ.