aishwarya rai abhishek bachchan: ಬಾಲಿವುಡ್ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ  ಏಪ್ರಿಲ್ 20 ರಂದು ತಮ್ಮ 17 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಇಡೀ ದಿನ ಈ ವಿಶೇಷ ಸಂದರ್ಭದಲ್ಲಿ ದಂಪತಿಗಳು ಯಾವುದೇ ಫೋಟೋವನ್ನು ಹಂಚಿಕೊಂಡಿರಲಿಲ್ಲ ಆದರೆ ಇದೀಗ ಕಾಯುವಿಕೆ ಕೊನೆಯಾಗಿದ್ದು ಈ ಜೋಡಿ ಕ್ಯೂಟ್‌ ಫೋಟೋವೊಂದನ್ನು ಹಂಚಿಕೊಂಡಿದೆ.. 


COMMERCIAL BREAK
SCROLL TO CONTINUE READING

ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಭಿನ್ನಾಭಿಪ್ರಾಯದ ವರದಿಗಳು ಮುನ್ನೆಲೆಗೆ ಬರುತ್ತಿವೆ. ಹೀಗಿರುವಾಗ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಬ್ಬರೂ ವಿಚ್ಛೇದನದ ವದಂತಿಗಳಿಗೆ ಮತ್ತೊಮ್ಮೆ ತೆರೆ ಎಳೆದಿದ್ದಾರೆ. ತಮ್ಮ 17 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಸಹ ಕಾಣಿಸಿಕೊಂಡಿರುವ ಫ್ಯಾಮಿಲಿ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ-Bollywood Actress: ರಾತ್ರೋ ರಾತ್ರಿ ಸಿನಿಮಾಗಳಿಂದ ನಟಿ ಔಟ್: ಇಂದು ನಾರಾರು ಕೋಟಿಯ ಒಡತಿ!


ಐಶ್ವರ್ಯಾ ಮತ್ತು ಅಭಿಷೇಕ್ ಅವರ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆದರೆ, ಈ ಚಿತ್ರದಲ್ಲಿ ಜಯಾ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿಲ್ಲ, ಇದರಿಂದಾಗಿ ಬಚ್ಚನ್ ಕುಟುಂಬದಲ್ಲಿ ಮತ್ತೊಮ್ಮೆ ಬಿರುಕು ಮೂಡಿದೆ ಎಂಬ ಸುದ್ದಿ ಮುನ್ನೆಲೆಗೆ ಬರುತ್ತಿದೆ. ಒಬ್ಬ ಬಳಕೆದಾರರು ಬರೆದಿದ್ದಾರೆ, 'ಇಡೀ ಕುಟುಂಬವನ್ನು ಏಕೆ ಒಟ್ಟಿಗೆ ನೋಡಲಾಗುವುದಿಲ್ಲ?' ಮತ್ತೊಬ್ಬ ಬಳಕೆದಾರ, 'ಕೊನೆಗೆ ಇಬ್ಬರೂ ವಿಚ್ಛೇದನದ ಸುದ್ದಿಯನ್ನು ತಿರಸ್ಕರಿಸಿದ್ದಾರೆ' ಎಂದು ಬರೆದಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ದಂಪತಿಗೆ ವಿವಾಹ ವಾರ್ಷಿಕೋತ್ಸವದಂದು ಶುಭಹಾರೈಸಿದ್ದಾರೆ.


 ಅಭಿಷೇಕ್ ಮತ್ತು ಐಶ್ವರ್ಯಾ ಅವರ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಬಚ್ಚನ್ ಕುಟುಂಬದ ಯಾರೂ ದಂಪತಿಗಳನ್ನು ಅಭಿನಂದಿಸುವ ಪೋಸ್ಟ್ ಅನ್ನು ಹಂಚಿಕೊಂಡಿಲ್ಲ.. ಅಲ್ಲದೇ ಅಮಿತಾಬ್, ಶ್ವೇತಾ ಬಚ್ಚನ್ ಈ ದಂಪತಿಗಳ ಪೋಸ್ಟ್‌ಗೆ ಕಾಮೆಂಟ್ ಮಾಡಿಲ್ಲ.. ಸದ್ಯಕ್ಕೆ ಬಚ್ಚನ್ ಕುಟುಂಬದಲ್ಲಿ ಏನೋ ಸರಿಯಿಲ್ಲ ಎಂದು ಅಭಿಮಾನಿಗಳು ಹೇಳಲು ಇದೇ ಕಾರಣ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.


ಇದನ್ನೂ ಓದಿ-ಖ್ಯಾತ ನಿರ್ದೇಶಕರ ಮನೆಯಲ್ಲಿ ಕಳ್ಳತನ : 1 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ ದೋಚಿದ ಖದೀಮರು  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.