ವಿಚ್ಛೇದನ ವದಂತಿ ನಡುವೆ ‘ಬಚ್ಚನ್’ ಎಂಬ ಸರ್ ನೇಮ್ ಅನ್ನು ಕೈಬಿಟ್ಟಿದ್ದಾರಾ ಐಶ್ವರ್ಯ ರೈ? ಫ್ಯಾಕ್ಟ್ ಚೆಕ್ ಏನ್ ಹೇಳುತ್ತೆ?
Aishwarya Rai International Star: ಇತ್ತೀಚಿಗೆ ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಂ ಕಾರ್ಯಕ್ರಮದಲ್ಲಿ ವಿಶ್ವಸುಂದರಿ, ಬಾಲಿವುಡ್ ಬೆಡಗಿ, ಐಶ್ವರ್ಯ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಮಹಿಳಾ ಸಬಲೀಕರಣ’ದ ಬಗ್ಗೆ ಮಾತನಾಡಿದರು. ಈ ಈವೆಂಟ್‌ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ಐಶ್ವರ್ಯ ರೈಗೆ ಸಂಬಂಧಿಸಿದಂತೆ ಒಂದು ವೀಡಿಯೋವನ್ನು ಶೇರ್ ಮಾಡಿದೆ.
Aishwarya Rai International Star: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚನ್ ದಾಂಪತ್ಯದಲ್ಲಿ ದೊಡ್ಡ ಮಟ್ಟದ ಬಿರುಕು ಮೂಡಿದೆ. ಈಗಾಗಲೇ ದಂಪತಿಗಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯಲು ನಿಶ್ವಯಿಸಿದ್ದು ಶೀಘ್ರವೇ ಡಿವೋರ್ಸ್ ತೆಗೆದುಕೊಳ್ಳುತ್ತಾರೆ ಎಂಬ ದಟ್ಟ ವದಂತಿಯ ನಡುವೆ ಐಶ್ವರ್ಯ ರೈ ತಮ್ಮ ಹೆಸರಿನೊಂದಿಗೆ ಇಟ್ಟುಕೊಂಡಿದ್ದ ಸರ್ ನೇಮ್ ‘ಬಚ್ಚನ್’ ಎಂಬುದನ್ನು ಕೈ ಬಿಟ್ಟಿದ್ದಾರೆ ಎನ್ನುವ ಹೊಸ ಗಾಸಿಪ್ ಸೃಷ್ಟಿಯಾಗಿದೆ. ಇದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚನ್ ಡಿವೋರ್ಸ್ ರೂಮರ್ಸ್ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.
ಇತ್ತೀಚಿಗೆ ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಂ (Global Women's Forum) ಕಾರ್ಯಕ್ರಮದಲ್ಲಿ ವಿಶ್ವಸುಂದರಿ, ಬಾಲಿವುಡ್ ಬೆಡಗಿ, ಐಶ್ವರ್ಯ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಮಹಿಳಾ ಸಬಲೀಕರಣ’ದ ಬಗ್ಗೆ ಮಾತನಾಡಿದರು. ಈ ಈವೆಂಟ್‌ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ಐಶ್ವರ್ಯ ರೈಗೆ ಸಂಬಂಧಿಸಿದಂತೆ ಒಂದು ವೀಡಿಯೋವನ್ನು ಶೇರ್ ಮಾಡಿದೆ. ಐಶ್ವರ್ಯ ರೈ ವೇದಿಕೆ ಮೇಲೆ ಬಂದಾಗ ಹಿಂದಿನ ಸ್ಕ್ರೀನ್ ಮೇಲೆ ಈ ವೀಡಿಯೋ ಬರುತ್ತದೆ. ಐಶ್ವರ್ಯ ರೈ ಹೆಸರನ್ನು ಪ್ರಸ್ತುತ ಪಡಿಸುವಾಗ ‘ಐಶ್ವರ್ಯ ರೈ, ಇಂಟರ್ನ್ಯಾಷನಲ್ ಸ್ಟಾರ್’ ಎಂದಷ್ಟೇ ಹೇಳುತ್ತದೆ.
ಐಶ್ವರ್ಯ ರೈ ಭಾಗವಹಿಸಿದ್ದ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಅವರ ಸರ್ ನೇಮ್ ‘ಬಚ್ಚನ್’ ಇಲ್ಲದೆ ಇದ್ದದ್ದು ಸಹಜವಾಗಿ ಕುತೂಹಲಕ್ಕೆ ಮತ್ತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದು ಈವೆಂಟ್ ಆಯೋಜಕರ ಪ್ರಮಾದ ಎನ್ನುವುದು ಒಂದು ವಾದವಾದರೆ, ಐಶ್ವರ್ಯ ರೈ ಉದ್ದೇಶಪೂರ್ವಕವಾಗಿಯೇ ‘ಬಚ್ಚನ್’ ಹೆಸರು ಕೈಬಿಟ್ಟಿದ್ದಾರೆ ಎನ್ನುವುದು ಇನ್ನೊಂದು ರೀತಿಯ ವ್ಯಾಖ್ಯಾನ.
ಇದನ್ನೂ ಓದಿ- ರಶ್ಮಿಕಾ ಮಂದಣ್ಣ ಅಪ್ಪಟ ಕೊಡಗಿನ ಬೆಡಗಿ ಎಂಬುದಕ್ಕೆ ಇಲ್ಲಿದೆ ಪ್ರೂಫ್...
ಬೇರೆ ಸಂದರ್ಭಗಳಲ್ಲಿ ‘ಬಚ್ಚನ್’ ಸರ್ ನೇಮ್ ಬಿಟ್ಟಿದ್ದಿದ್ದರೆ ಅದು ಇಷ್ಟೊಂದು ಚರ್ಚೆಯಾಗುತ್ತಿರಲಿಲ್ಲವೇನೋ, ಆದರೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ತೀರಾ ಹಳಸಿದೆ, ಅವರು ಮತ್ತೆ ಒಂದಾಗಲಾರರು, ಈಗಾಗಲೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದು, ಡಿವೋರ್ಸ್ ಗಾಗಿ ಕಾಯುತ್ತಿದ್ದಾರೆ ಎನ್ನುವ ಸಂದರ್ಭದಲ್ಲಿ ಈ ರೀತಿ ಐಶ್ವರ್ಯ ರೈ ಹೆಸರಿನೊಂದಿಗಿದ್ದ ‘ಬಚ್ಚನ್’ ಹೆಸರನ್ನು ಕೈಬಿಟ್ಟಿರುವುದು ವಿಚ್ಛೇದನ ವದಂತಿಗೆ ಪುಷ್ಟಿ ನೀಡಿದಂತಾಗಿದೆ.
ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಂ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಜೊತೆಗಿನ ‘ಬಚ್ಚನ್’ ಹೆಸರನ್ನು ಕೈಬಿಟ್ಟಿರಬಹುದು, ಆದರೆ ಐಶ್ವರ್ಯ ರೈ ಅವರ ಪರ್ಸನಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಬಚ್ಚನ್’ ಎಂಬ ಸರ್ ನೇಮ್ ಇದೆಯೋ ಇಲ್ಲವೋ ಎನ್ನುವ ಕುರಿತು ‘ನ್ಯೂಸ್ 18’ ಫ್ಯಾಕ್ಟ್ ಚೆಕ್ ಮಾಡಿದೆ. ಫ್ಯಾಕ್ಟ್ ಚೆಕ್ ವೇಳೆ ಐಶ್ವರ್ಯ ರೈ ತಮ್ಮ ಹೆಸರಿನ ಮುಂದೆ ಇದ್ದ ಸರ್ ನೇಮ್ ‘ಬಚ್ಚನ್’ ಅನ್ನು ಕೈಬಿಟ್ಟಿಲ್ಲ ಎನ್ನುವುದು ಖಾತರಿಯಾಗಿದೆ. ಐಶ್ವರ್ಯ ರೈ ಅವರ ಪರ್ಸನಲ್ ಇನ್ಸ್ಟಾಗ್ರಾಮ್ ಖಾತೆಯು ‘ಐಶ್ವರ್ಯ ರೈ ಬಚ್ಚನ್’ ಎನ್ನುವ ಹೆಸರಿನಲ್ಲೇ ಇರುವುದು ಗೊತ್ತಾಗಿದೆ.
ಇದನ್ನೂ ಓದಿ- ನಟಿ ಊರ್ವಶಿ ರೌಟೆಲಾ ಬೆಡ್ ರೂಂ ವಿಡಿಯೋ ವೈರಲ್..! ತುಂಡು ಬಟ್ಟೆ ತೊಟ್ಟು, ಹಾಸಿಗೆ ಮೇಲೆ ಉರುಳಾಡಿದ ಸುಂದ್ರಿ..
ಮೌನ ಮುರಿಯದ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್!
ಬಾಲಿವುಡ್ ನ ಹೈಪ್ರೊಫೈಲ್ ಜೋಡಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚನ್ ಅವರ ವೈವಾಹಿಕ ಸಂಬಂಧದ ಬಗ್ಗೆ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ, ದಿನಕ್ಕೊಂದು ರೀತಿಯ ಗಾಸಿಪ್ ಹರಡುತ್ತಿದ್ದರೂ ಇಬ್ಬರ ಪೈಕಿ ಯಾರೋಬ್ಬರೂ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟಿಕರಣ ನೀಡಲು ಮುಂದಾಗಿಲ್ಲ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚನ್ ಮೌನವಾಗಿರುವ ಕಾರಣಕ್ಕೆ ದಿನದಿಂದ ದಿನಕ್ಕೆ ಅವರಿಬ್ಬರು ಡಿವೋರ್ಸ್ ಆಗುತ್ತಾರೆ ಎಂಬ ರೂಮರ್ಸ್ ಹೆಚ್ಚಾಗುತ್ತಲೇ ಇದೆ. ಸಹಜವಾಗಿ ಅವರ ಮೇಲೆ ಅಭಿಮಾನ ಇಟ್ಟುಕೊಂಡವರಿಗೆ ಇದು ಬೇಸರ ತರಿಸುತ್ತಿದೆ. ಬಾಳಬೇಕಾದ ಜೋಡಿ ಬಾಡಿಹೋಗದಿರಲಿ ಎನ್ನುವುದೇ ಅಭಿಮಾನಿಗಳ ಆಶಯ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.