Aishwarya Rai: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದಕ್ಕಾಗಿ ಈ ದಂಪತಿಗಳು ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ.. ಇಲ್ಲಿಂದ ಅವರ ಡಿವೋರ್ಸ್‌ ರೂಮರ್ಸ್‌ ಸಖತ್‌ ವೈರಲ್‌ ಆಗುತ್ತಿದೆ.. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ವಿಚ್ಛೇದನದ ಪೋಸ್ಟ್‌ವೊಂದನ್ನು ಲೈಕ್‌ ಮಾಡಿ ಎಲ್ಲರಿಗೂ ಶಾಕ್‌ ನೀಡಿದ್ದರು ಅಲ್ಲದೇ ಐಶ್ವರ್ಯಾ ಬಚ್ಚನ್ ಕುಟುಂಬದೊಂದಿಗೆ ಮಾತ್ರವಲ್ಲದೆ ಅಭಿಷೇಕ್ ಜೊತೆಗೂ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ಚರ್ಚೆಗಳು ಹೆಚ್ಚು ತೀವ್ರವಾಗಿವೆ... ಹೀಗೆ ವಿಚ್ಛೇದನ ಸುದ್ದಿಗೆ ಪುಷ್ಠಿ ನೀಡುವಂತೆ ಒಂದಾದ ಮೇಲೊಂದು ಮಾಹಿತಿ ಹರಿದುಬರುತ್ತಿವೆ.  


ಇದನ್ನೂ ಓದಿ-ಅನುಶ್ರೀಗೆ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂದಿದ್ರಂತೆ ಅಚ್ಯುತ್ ಕುಮಾರ್!? ನಿರೂಪಕಿ ಕೈಗೆ ತಗ್ಲಾಕೊಂಡ ಕನ್ನಡದ ಪ್ರಖ್ಯಾತ ನಟ!


ಐಶ್ವರ್ಯಾ ರೈ, ಬಚ್ಚನ್ ಕುಟುಂಬ ಮತ್ತು ಅಭಿಷೇಕ್ ಬಚ್ಚನ್ ಜೊತೆಗಿನ ಪ್ರತ್ಯೇಕತೆಯ ಸುದ್ದಿಗಳ ನಡುವೆ, ನಟಿ ಪತಿ ಅಭಿಷೇಕ್‌ ಜೊತೆಗೆ ತುಂಬಾ ಜಗಳವಾಡುತ್ತಾರೆ ಎಂದು ಹೇಳುವ ವಿಡಿಯೋವೊಂದು ವೈರಲ್ ಆಗುತ್ತಿದೆ.


ಇತ್ತೀಚಿನ ದಿನಗಳಲ್ಲಿ ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಂತೆ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಐಶ್ವರ್ಯಾ ತನ್ನ ಮತ್ತು ಅಭಿಷೇಕ್ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವ ವಿಷಯದ ಬಗ್ಗೆ ಮಾತನಾಡಿದ್ದಾಳೆ.. 



 


ಇದನ್ನೂ ಓದಿ-‘ಸೀತಾರಾಮ’ ಅಶೋಕ್‌ ತಂಗಿ ಅಂಜಲಿ ನಿಜಕ್ಕೂ ಯಾರು ಗೊತ್ತಾ? ಇವರ ರಿಯಲ್‌ ಲೈಪ್‌ ಸ್ಟೋರಿ ಕೇಳಿದ್ರೆ ಶಾಕ್‌ ಆಗ್ತೀರಾ!!


'ನಾವಿಬ್ಬರೂ ತುಂಬಾ ಬಲವಾದ, ಚಿಂತನಶೀಲ ವ್ಯಕ್ತಿತ್ವವನ್ನು ಹೊಂದಿದ್ದೇವೆ.. ನಾವು ಇನ್ನೂ ವಾದ ಮತ್ತು ಚರ್ಚೆಯ ನಡುವಿನ ವ್ಯತ್ಯಾಸವನ್ನು ಕಲಿಯುತ್ತಿದ್ದೇವೆ.. ಹೀಗಾಗಿ ಎಂತದ್ದೇ ವಿಚಾರಗಳಿದ್ದರೂ ವಾದಕ್ಕಿಂತ ಮೊದಲು ಚರ್ಚೆ ಮಾಡುತ್ತೇವೆ.. ಅಭಿಷೇಕ್‌ ಜೊತೆ ಮನಸ್ಥಾಪ ಇರೋದು ನಿಜ ಆದರೆ ನಾವಿಬ್ಬರೂ ಚರ್ಚೆ ಮಾಡಿ ಬಳಿಕ ಮುಂದಿನದನ್ನು ನೋಡುತ್ತೆವೆ" ಎಂದು ಐಶ್ ಹೇಳಿಕೊಂಡಿದ್ದಾರೆ.. 
 
2007ರಲ್ಲಿ ವಿವಾಹವಾದ ಈ ದಂಪತಿಗಳು ತಮ್ಮ ಆಳವಾದ ಪ್ರೀತಿ ಮತ್ತು ಪರಸ್ಪರ ಗೌರವಕ್ಕೆ ಹೆಸರುವಾಸಿಯಾಗಿದ್ದಾರೆ.. ಸಾಮಾನ್ಯವಾಗಿ ಎಲ್ಲರ ಸಂಬಂಧದಂತೆ, ಅವರ ನಡುವೆ ಅನೇಕ ವಿಷಯಗಳಲ್ಲಿ ಜಗಳಗಳು ಮತ್ತು ಭಿನ್ನಾಭಿಪ್ರಾಯಗಳಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews