Abhishek Aishwarya Marriage: ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ 20 ಏಪ್ರಿಲ್ 2007 ರಂದು ಮದುವೆಯಾದರು. ಇವರ ಮದುವೆಯ ಬಗ್ಗೆ ಚಿತ್ರರಂಗದಲ್ಲಿ ಹಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ಯಾವುದೋ ದೋಷದಿಂದ ಅಭಿಷೇಕ್‌ಗಿಂತ ಮೊದಲೇ ಐಶ್ವರ್ಯ ರೈ ಅವರನ್ನು ಮರದ ಜೊತೆ ಮದುವೆ ಮಾಡಿದ್ದಾರೆಂಬ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. 


COMMERCIAL BREAK
SCROLL TO CONTINUE READING

ಆ ಸಮಯದಲ್ಲಿ ಐಶ್ವರ್ಯ ರೈಗೆ ಮಂಗಳ ದೋಷವಿದ್ದ ಕಾರಣ, ಧಾರ್ಮಿಕ ಪದ್ಧತಿಯಂತೆ ಐಶ್ವರ್ಯ ರೈ ಅವರನ್ನು ಮೊದಲು ಮರಕ್ಕೆ ಮದುವೆ ಮಾಡಲಾಯಿತು ಎಂದು ಹೇಳಲಾಗುತ್ತದೆ. 2008 ರಲ್ಲಿ ಐಶ್ವರ್ಯ ರೈ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಐಶ್‌, ಮದುವೆ ಸಮಯದಲ್ಲಿ ಕೆಲವು ಘಟನೆಗಳು ನಡೆದಿವೆ. ಆದರೆ ಅದರ ಬಗ್ಗೆ ಏಕೆ ಹೆಚ್ಚು ಗಮನ ಹರಿಸಬೇಕು ಎಂದಿದ್ದರು. ಮರದ ಜೊತೆ ಮದುವೆಯಾಗಿದೆ ಎಂಬುದು ನಿಜವೇ ಎಂದಾಗ, ಅವರು ಅದಕ್ಕೆ ಹಾರಿಕೆಯ ಉತ್ತರವನ್ನು ಕೊಟ್ಟಿದ್ದರು. ಎಲ್ಲೂ ಐಶ್ವರ್ಯ ಆಗಲಿ ಅವರ ಕುಟುಂಬವಾಗಲಿ ಇದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿಲ್ಲ. 


ಇದನ್ನೂ ಓದಿ: Dunki Twitter Review: ಶಾರುಖ್ ಖಾನ್ 'ಡಂಕಿ' ಚಿತ್ರ ಹೇಗಿದೆ.. ಕಿಂಗ್‌ ಖಾನ್‌ ಫ್ಯಾನ್ಸ್‌ ಬೇಸರಕ್ಕೆ ಕಾರಣವೇನು? 


2007 ರಲ್ಲಿ ಅಮಿತಾಭ್ ಬಚ್ಚನ್‌ ಕೂಡ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಮರದ ಜೊತೆ ಮದುವೆ ಆಗಿದ್ದು ಸತ್ಯವೇ ಎಂದಾಗ, ನಮ್ಮ ಕುಟುಂಬವು ಮೂಢನಂಬಿಕೆಯನ್ನು ಹೊಂದಿಲ್ಲ. ಮರ ಎಲ್ಲಿದೆ, ದಯವಿಟ್ಟು ನನಗೆ ತೋರಿಸಿ, ಅವಳು ಮದುವೆಯಾದ ಏಕೈಕ ವ್ಯಕ್ತಿ ನನ್ನ ಮಗ ಎಂದು ಹೇಳಿದ್ದರು.


ಇದೇ ವಿಚಾರ ಮತ್ತೆ 2016 ರಲ್ಲಿ ಮುನ್ನೆಲೆ ಬಂದಿತು. ಆಗ ಈ ಬಗ್ಗೆ 2016 ರಲ್ಲಿ ಅಭಿಷೇಕ್‌ ಬಚ್ಚನ್‌ ಸಹ ಟ್ವೀಟ್‌ ಮಾಡಿದ್ದರು. ನಾವು ಇನ್ನೂ ಈ ಮರವನ್ನು ಹುಡುಕುತ್ತಿದ್ದೇವೆ. ದಾಖಲೆಗಳಿದ್ದರೆ ತೋರಿಸಿ ಎಂದು ಬರೆದು ಪೋಸ್ಟ್‌ ಮಾಡಿದ್ದರು. 


ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಗುಟ್ಟಾಗಿ ಮೊಬೈಲ್‌ ಬಳಸುತ್ತಾರಾ ಸ್ಪರ್ಧಿಗಳು.. ಸಂಗೀತಾ ಹಿಂದಿದ್ದ ಚಾರ್ಜರ್‌ ಬಿಚ್ಚಿಟ್ಟ ಸತ್ಯ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.