ನವದೆಹಲಿ: ಪಂಜಾಬ್ನ ಅಮೃತಸರದಲ್ಲಿ ಪಂಜಾಬೀ ಕುಟುಂಬವೊಂದರಲ್ಲಿ ಜನಿಸಿದ ನಟ ಅಕ್ಷಯ್ ಕುಮಾರ್ ಮುಂಬೈಯಲ್ಲಿ ನೆಲೆಸುವ ಮುನ್ನ ದೆಹಲಿಯ ಚಾಂದನಿ ಚೌಕ್ನಲ್ಲಿ ಜೀವನವನ್ನು ಕಳೆದರು. 1990 ರ ದಶಕದಲ್ಲಿ ನಟನೆಗೆ ಬಂದ ಅಕ್ಷಯ್ ಕುಮಾರ್ ಅವರು ಮುಖ್ಯವಾಗಿ ಖಿಲಾಡಿ (1992), ಮೊಹ್ರಾ (1994), ಸಬಸೆ ಬಡಾ ಖಿಲಾಡಿ (1995) ಮತ್ತು ಖಿಲಾಡಿಯೋಂಕಾ ಖಿಲಾಡಿ (1996) ನಂತಹ ಚಿತ್ರಗಳಲ್ಲಿ ನಟಿಸುವ ಮೂಲಕ ಸಾಮಾನ್ಯವಾಗಿ "ಖಿಲಾಡಿ ಸರಣಿಗಳು" ಎಂದು ಕರೆಯಲಾಗುವ ಚಲನಚಿತ್ರಗಳಲ್ಲಿನ ತಮ್ಮ ನಟನೆಗೆ ಹೆಸರುವಾಸಿಯಾಗಿದ್ದರು.


COMMERCIAL BREAK
SCROLL TO CONTINUE READING

ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ದಂಪತಿಗಳ ಪುತ್ರಿಯಾದ ಟ್ವಿಂಕಲ್ ಖನ್ನಾ ಅವರೊಂದಿಗೆ ಎರಡು ಬಾರಿ ನಿಶ್ಚಿತಾರ್ಥಕ್ಕೊಳಗಾದ ಅಕ್ಷಯ್ ಕುಮಾರ್ ನಂತರ 2001 ರ ಜನವರಿಯಲ್ಲಿ ವಿವಾಹವಾದರು. ಇವರಿಗೆ ಆರವ್ ಮತ್ತು ನಿತಾರ ಎಂಬ ಮುದ್ದಾದ ಮಕ್ಕಳಿದ್ದಾರೆ. 


ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ತಮ್ಮ ಮಗಳೊಂದಿಗೆ ಗಾಳಿಪಟ ಹಾರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.



ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಈ ಹಬ್ಬವನ್ನು ದಕ್ಷಿಣದ ರಾಜ್ಯಗಳಾದ ಕರ್ನಾಟಕದಲ್ಲಿ 'ಸಂಕ್ರಾಂತಿ' ಎಂದರೆ, ತಮಿಳುನಾಡಿನಲ್ಲಿ 'ಪೊಂಗಲ್' ಎಂದು ಕರೆಯುತ್ತಾರೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವಿದೆ.