Akshay Kumar : ಬಾಲಿವುಡ್‌ ಸೂಪರ್‌ ಸ್ಟಾರ್‌ ನಟ ಅಕ್ಷಯ್ ಕುಮಾರ್ ಪ್ರಸ್ತುತ ನೋರಾ ಫತೇಹಿ, ಸೋನಮ್ ಬಾಜ್ವಾ, ಮೌನಿ ರಾಯ್, ದಿಶಾ ಪಟಾನಿ ಮತ್ತು ಅಪರಶಕ್ತಿ ಖುರಾನಾ ಜೊತೆ ದಿ ಎಂಟರ್‌ಟೈನರ್ಸ್ ಲೈವ್ ಟೂರ್‌ಗಾಗಿ USAಗೆ ತೆರಳಿದ್ದಾರೆ. ಮಾರ್ಚ್ 3 ರಂದು ಶುಕ್ರವಾರ ಅಟ್ಲಾಂಟಾದ ಗ್ಯಾಸ್ ಸೌತ್ ಅರೆನಾದಲ್ಲಿ ಅಕ್ಕಿ ಅಂಡ್‌ ಟೀಂ ತಮ್ಮ ಮೊದಲ ಪ್ರದರ್ಶನ ನೀಡಿತು. ಇದೀಗ ಕಾರ್ಯಕ್ರಮ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.


COMMERCIAL BREAK
SCROLL TO CONTINUE READING

ಸೆಲೆಬ್ರಿಟಿ ಪಾಪರಾಜೋ ವೈರಲ್ ಭಯಾನಿ ಹಂಚಿಕೊಂಡ ವೀಡಿಯೊದಲ್ಲಿ, ಅಕ್ಷಯ್ ವೇದಿಕೆಯಲ್ಲಿ ಕೆಂಪು ಲೆಹೆಂಗಾದಲ್ಲಿ ನೋರಾ ಫತೇಹಿಯೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಕಪ್ಪು ಬ್ಲೇಜರ್‌ನ ಕೆಳಗೆ ಕೆಂಪು ಲೆಹೆಂಗಾ ಧರಿಸಿ ನೋರಾ ಜೊತೆ ಸಖತ್‌ ಡಾನ್ಸ್‌ ಮಾಡಿರುವ ವಿಡಿಯೋ ಇದಾಗಿದೆ. ಅಕ್ಕಿಯನ್ನು ಲೆಹೆಂಗಾದಲ್ಲಿ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಅಲ್ಲದೆ ಟ್ರೋಲ್‌ ಕೂಡ ಮಾಡುತ್ತಿದ್ದಾರೆ. 



ಇದನ್ನೂ ಓದಿ: ಮೈಂಡ್ ಬ್ಲಾಕ್ ಆಗುತ್ತೆ ಉರ್ಫಿ ಬ್ಯಾಕ್‌ ನೋಡಿದ್ರೆ..! ವಿಡಿಯೋ ನೋಡಿ ಗೊತ್ತಾಗುತ್ತೆ


ʼಇದೊಂದು ನೋಡೋಕೆ ಬಾಕಿ ಇತ್ತುʼ ಅಂತ ಕೆಲ ನೆಟ್ಟಿಗರು ಅಕ್ಷಯ್‌ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʼಸೆಲ್ಫಿಯನ್ನು ನಾಶಪಡಿಸಿದ ನಂತರ, ಅವರು ಈಗ ನೃತ್ಯ ಮತ್ತು ಹಾಡುವಿಕೆಯಿಂದ ಹಣವನ್ನು ಗಳಿಸುತ್ತಿದ್ದಾರೆ, ವಾಹ್ʼ.. ಅಂತ ವ್ಯಂಗ್ಯವಾಡಿದ್ದಾರೆ. ʼಸಿನಿಮಾಗಳಿಲ್ಲ, ಹಾಗಾಗಿ ಈ ರೀತಿ ಹಣ ಗಳಿಸುತ್ತಿದ್ದಾರೆʼ ಎಂದು ನೆಟ್ಟಿಗೊಬ್ಬರು ಪ್ರತಿಕ್ರಿಯೆ ಮಾಡಿದ್ದಾರೆ. ʼಅಕ್ಷಯ್‌ಗೆ ನೋರಾ ಅವನ ಮಗಳಂತೆ ಕಾಣುತ್ತಿದ್ದಾಳೆʼ ಅಂತಾನೂ ಕಾಮೆಂಟ್‌ ಬರುತ್ತಿವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.