ನವದೆಹಲಿ: ಜನಪ್ರಿಯ ಮಕ್ಕಳ ಆಟ PUBG ಅನ್ನು ಪ್ರಸ್ತುತ ಭಾರತದಲ್ಲಿ ನಿಷೇಧಿಸಲಾಗಿದೆ. ಈ ಚೀನೀ ಆಟದ ಬಗ್ಗೆ ಭಾರತೀಯ ಮಕ್ಕಳಲ್ಲಿ ವಿಪರೀತ ವ್ಯಾಮೋಹವಿತ್ತು ಮತ್ತು ಇದೀಗ ಅದನ್ನು ಮುರಿಯಲು ಅಕ್ಷಯ್ ಕುಮಾರ್ (Akshay Kumar) ಬಂದಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ PUBG ಸ್ಪರ್ಧೆ ನೀಡಲು FAU-G(ಫೌ-ಜಿ) ಆಟವನ್ನು ಪರಿಚಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಆಟದ ವಿಶೇಷತೆಯೆಂದರೆ, ಆಟದ ಗಳಿಕೆಯ ಒಂದು ಭಾಗವನ್ನು 'ಭಾರತ್ ಕೇ ವೀರ್ ಟ್ರಸ್ಟ್'ಗೆ  ನೀಡಲಾಗುವುದು. ಈ ಟ್ರಸ್ಟ್ ಅನ್ನು ಕೇಂದ್ರ ಗೃಹ ಸಚಿವಾಲಯ ಸ್ಥಾಪಿಸಿದೆ.


FAU-G ಆಟದ ಕುರಿತು ಮಾಹಿತಿ ನೀಡಿ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, " ಪ್ರಧಾನಿ ಮೋದಿ ಅವರ ಆತ್ಮನಿರ್ಭರ್ ಬೆಂಬಲಿಸುತ್ತ FAU-G ಆಟವನ್ನು ಪರಿಚಯಿಸಲು ಸಂತಸವಾಗುತ್ತಿದೆ. ಮನರಂಜನೆಯ ಜೊತೆಗೆ ಆಟಗಾರರು ಈ ಆಟದಲ್ಲಿ ಸೈನಿಕರ ಬಲಿದಾನದ ಕುರಿತು ಕೂಡ ಮಾಹಿತಿ ಪಡೆಯಬಹುದಾಗಿದೆ. ಈ ಆಟದಿಂದ ಆಗುವ ಗಳಿಕೆಯ ಶೇ.20ರಷ್ಟು ಆದಾಯವನ್ನು 'ಭಾರತ್ ಕೇ ವೀರ್' ಟ್ರಸ್ಟ್ ಗೆ ಕೊಡುಗೆಯಾಗಿ ನೀಡಲಾಗುವುದು" ಎಂದಿದ್ದಾರೆ.



PUBG ಅನ್ನು ನಿಷೇಧಿಸಿದ ಮೋದಿ ಸರ್ಕಾರ
ಚೀನಾದ 59 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿದ ಬಳಿಕ, ಮತ್ತೆ 118 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸುವುದಾಗಿ ಮೋದಿ ಸರ್ಕಾರ ಘೋಷಿಸಿದೆ. ಇವುಗಳಲ್ಲಿ ಹೆಚ್ಚಿನವು ಚೀನೀ ಮೊಬೈಲ್ ಅಪ್ಲಿಕೇಶನ್‌ಗಳಾಗಿವೆ. ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ನಿಷೇಧಿಸಲಾಗಿರುವ ಈ ಅಪ್ಲಿಕೇಶನ್‌ನಲ್ಲಿ ಜನಪ್ರಿಯ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ PUBG ಕೂಡ ಶಾಮೀಲಾಗಿದೆ.


PUBG ಹಾಗೂ LUDO ಮೇಲೂ ಕೂಡ ನಿಷೇಧ
ನಿಷೇಧಿಸಲಾಗಿರುವ 118 ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ, PUBG ಜೊತೆಗೆ, ಮತ್ತೊಂದು ಅತ್ಯಂತ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ LUDO ವನ್ನು ಸಹ ಸೇರಿಸಲಾಗಿದೆ. ಇದಲ್ಲದೆ, ಕ್ಯಾರಮ್ ಮತ್ತು ಚೆಸ್‌ನ ಅನೇಕ ಜನಪ್ರಿಯ ಮೊಬೈಲ್ ಅಪ್ಲಿಕೇಶನ್‌ಗಳನ್ನು ಸಹ ನಿಷೇಧಿಸಲಾಗಿದೆ. ಮೂಲಗಳ ಪ್ರಕಾರ, ನಿಷೇಧಿಸಲಾದ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ, ಕಳೆದ ಬಾರಿ ಇಂತಹ ಹಲವು ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ, ಆದರೆ ಆ ಹೆಸರಿನ ಇದೇ ರೀತಿಯ ಆವೃತ್ತಿಯು ಆನ್‌ಲೈನ್‌ನಲ್ಲಿ ಚಾಲನೆಯಲ್ಲಿವೆ ಎನ್ನಲಾಗುತ್ತಿತ್ತು.