ವಿದೇಶದಲ್ಲೂ ʼಮೋದಿ ಮಾತುʼ ಪಾಲಿಸಿದ ಅಕ್ಷಯ್ : ಪೊರಕೆ ಹಿಡಿದು ಫೋಟೋ ಹಾಕಿದ ಬಿಟೌನ್ ಸ್ಟಾರ್
Swachhata Hi Seva : ಆಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿಯವರು ʼಸ್ವಚ್ಛತಾ ಹೀ ಸೇವಾʼ ಡ್ರೈವ್ಗೆ ಕರೆ ನೀಡಿದ್ದಾರೆ. ಇದರ ಹಿನ್ನಲೆ ಮೋದಿ ಕರೆಗೆ ಸ್ಪಂದಿಸಿರುವ ನಟ ಅಕ್ಷಯ್ ಕುಮಾರ್ ವಿದೇಶದಲ್ಲಿ ಸಮುದ್ರದಡದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಅಲ್ಲದೆ ಈ ಕುರಿತ ಫೋಟೋವನ್ನೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Akshay kumar : ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅಭಿನಯದ ʼಮಿಷನ್ ರಾಣಿಗಂಜ್ʼ ಸಿನಿಮಾ ಇದೇ ವಾರ ತೆರೆ ಕಾಣಲು ಸಜ್ಜಾಗಿದೆ. ಈ ವೇಳೆ ಅಕ್ಕಿ ವಿದೇಶದಕ್ಕೆ ಪ್ರಯಾಣಿಸಿದ್ದು, ಅಲ್ಲಿಯೂ ಸಹ ಮೋದಿಯವರ ಸೂಚನೆಯನ್ನು ಪಾಲಿಸಿದ್ದಾರೆ. ಹಾಗಾದ್ರೆ ಅಕ್ಷಯ್ ವಿದೇಶದಲ್ಲಿ ಏನು ಮಾಡಿದ್ರು? ಪ್ರಧಾನಿ ಯಾವ ರೂಲ್ಸ್ ಪಾಲಿಸಿದ್ರು ಅಂತ ತಿಳ್ಕೊಬೇಕು ಅಂದ್ರೆ ಈ ಸ್ಟೋರಿ ಓದಿ..
ಭಾರತದ ಬಹುಬೇಡಿಕೆ ನಟ ಅಕ್ಷಯ್ ಕುಮಾರ್ ಒಬ್ಬರು. ತಮ್ಮ ಸಿನಿಮಾಗಳಿಂದ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಹಾಗೆ ಎಷ್ಟೋ ಜನರಿಗೆ ಪ್ರೇರಣೆಯಾಗಿದ್ದಾರೆ. ತಮ್ಮ ಸಿನಿಮಾಗಳ ಮೂಲಕ ಸಾಮಾಜಿಕವಾಗಿ ಒಳ್ಳೆಯ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೆ, ಫಿಟ್‌ನೆಸ್, ಶಿಸ್ತಿನ ಮೂಲಕ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಆಸ್ತಿ ಎಷ್ಟು? ನಟನ ವಾರ್ಷಿಕ ಆದಾಯ ನೀವು ಊಹಿಸಲೂ ಅಸಾಧ್ಯ!
ಅಕ್ಷಯ್ ಸೋಷಿಯಲ್ ಮಿಡಿಯಾವನ್ನು ಕಾಲ ಕಾಲಕ್ಕೆ ಸಮಯಕ್ಕೆ ಸರಿಯಾಗಿ ಉಪಯೋಗ ಮಾಡುತ್ತಾರೆ. ತಮ್ಮ ಖಾಸಗಿ ಜೀವನಕ್ಕೆ ಸಂಬಂದಿಸಿದ ಪೋಸ್ಟ್‌ಗಿಂತ ಹೆಚ್ಚಾಗಿ ಅಕ್ಷಯ್ ಸಿನಿಮಾಗೆ ಸಂಬಂಧ ಪಟ್ಟ ಪೋಸ್ಟ್‌ಗಳನ್ನೇ ಹಾಕುತ್ತಾರೆ. ಇತ್ತೀಚೆಗೆ ತಮ್ಮ ಸಿನಿಮಾ ಮಿಷನ್ ರಾಣಿಗಂಜ್ ಸಂಬಂದಿಸಿದ ಪೋಸ್ಟರ್ ಹಂಚಿಕೊಂಡಿದ್ದರು.
ನಿಖಿಲ್ ಕುಮಾರಸ್ವಾಮಿ - ಧ್ರುವ ಸರ್ಜಾ ಭೇಟಿಗೆ ಕಾರಣವೇನು?
ಸದ್ಯ ಅಕ್ಷಯ್ ಕುಮಾರ್ ವಿದೇಶಕ್ಕೆ ತೆರೆಳಿದ್ದಾರೆ. ಆಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿಯವರು ʼಸ್ವಚ್ಛತಾ ಹೀ ಸೇವಾʼ (Swachhata Hi Seva) ಡ್ರೈವ್ ಅನೌಂನ್ಸ್ ಮಾಡಿದರು. ಇದರ ಹಿನ್ನಲೆ ಮೋದಿ ಕರೆಗೆ ಸ್ಪಂದಿಸಿರುವ ನಟ ಅಕ್ಷಯ್ ಕುಮಾರ್ ವಿದೇಶದಲ್ಲಿ ಸಮುದ್ರದಡದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಅಲ್ಲದೆ ಈ ಕುರಿತ ಫೋಟೋವನ್ನೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಅಕ್ಕಿ ಫೋಸ್ಟ್‌ಗೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡಿದ್ದಾರೆ. ಓವರ್ ಆಕ್ಟಿಂಗ್ ಮಾಡುತ್ತಿದ್ದಾನೆ, ಎಷ್ಟೋಂದು ನಟಿಸ್ತಿಯಾ, ಈ ಫೋಸ್ಟ್ ಡಿಲೀಟ್ ಮಾಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಬೆಸ್ಟ್ ಪೋಸ್ಟ್ ಅಂತಹ ನಟನಿಗೆ ಮೆಚ್ಚುಗೆ ಸೂಚಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.