Houseful 5 : ಸಿನಿ ರಸಿಕರನ್ನು ನಗೆಯಲ್ಲಿ ತೆಲಿಸಲು ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಮರಳಿದ್ದಾರೆ. ಹೌಸ್‌ಫುಲ್‌ ಸಿನಿಮಾ ಸರಣಿಯ ಐದನೇ ಭಾಗವನ್ನು ಘೋಷಿಸಿದ್ದಾರೆ. ಸ್ವತಃ ಈ ಸುದ್ದಿಯನ್ನು ಅಕ್ಷಯ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಹೌಸ್‌ ಫುಲ್‌ ಸರಣಿಗಳು ಸಖತ್‌ ಹಿಟ್‌ ಆಗಿವೆ. ಸದ್ಯ ಹೌಸ್‌ಫುಲ್‌ 5 ತೆರೆಗೆ ಬರಲಿದ್ದು, ಈ ಸಿನಿಮಾವನ್ನು ತರುಣ್ ಮನ್ಸುಖಾನಿ ನಿರ್ದೇಶಿಸಲಿದ್ದಾರೆ. ಹೌಸ್‌ಫುಲ್ 5 2024ರ ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ. ಮೋಜು, ಮನರಂಜನೆ ಮತ್ತು ಹಾಸ್ಯದ ರೋಲರ್-ಕೋಸ್ಟರ್ ರೈಡ್‌ನ ಭರವಸೆಯೊಂದಿಗೆ ಮಿಂಚಲು ಚಿತ್ರತಂಡ ಸಿದ್ಧವಾಗಿದೆ.


ಇದನ್ನೂ ಓದಿ: ಅಮೀರ್ ಖಾನ್ ಅವರ 3 Idiots 2 ಕನ್ಫರ್ಮ್? ರಾಜು ರಸ್ತೋಗಿ ಕೊಟ್ರು ಬಿಗ್ ಅಪ್‌ಡೇಟ್!


ಅಕ್ಷಯ್ ಕುಮಾರ್ ಜೊತೆಗೆ ಹೌಸ್‌ಫುಲ್ 5 ನಲ್ಲಿ ರಿತೇಶ್ ದೇಶಮುಖ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದಿನ ಸಿರೀಸ್‌ನಲ್ಲಿಯೂ ಸಹ ಇಬ್ಬರು ನಟಿಸಿದ್ದರು. ಸದ್ಯ ಇನ್ಯಾವ ಕಲಾವಿದರು ಈ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲ.


ರಾಮ್‌ಚರಣ ಮಗಳ ನಾಮಕರಣಕ್ಕೆ 24 ಕ್ಯಾರೆಟ್‌ ಬಂಗಾರದ ತೊಟ್ಟಿಲು ಗಿಪ್ಟ್‌ ನೀಡಿದ ಅಂಬಾನಿ..!


ಮೊದಲ ಹೌಸ್‌ಫುಲ್ ಚಲನಚಿತ್ರವು 2010 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ಅರ್ಜುನ್ ರಾಂಪಾಲ್ ಮತ್ತು ಚಂಕಿ ಪಾಂಡೆ ನಟಿಸಿದ್ದರು. 2012 ರಲ್ಲಿ ಫ್ರಾಂಚೈಸಿಯ ಎರಡನೇ ಭಾಗ ರಿಲೀಸ್‌ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು. ಉಳಿದ ಎರಡು ಹೌಸ್‌ಫುಲ್ ಚಲನಚಿತ್ರಗಳು ಕ್ರಮವಾಗಿ 2016 ಮತ್ತು 2019 ರಲ್ಲಿ ಬಿಡುಗಡೆಯಾದವು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.