ಬಿಲ್ ಗೇಟ್ಸ್ ಮನಗೆದ್ದ ಅಕ್ಷಯ್ ಕುಮಾರ್ ಸಿನಿಮಾ `ಟಾಯ್ಲೆಟ್ ಎ ಲವ್ ಸ್ಟೋರಿ`
ಚಲನಚಿತ್ರದ ಕಥೆಯನ್ನು ಪ್ರೇಕ್ಷಕರು ವಿಮರ್ಶಾತ್ಮಕವಾಗಿ ಶ್ಲಾಘಿಸಿದರು. ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಗಿತ್ತು.
ನವ ದೆಹಲಿ: ಅಕ್ಷಯ್ ಕುಮಾರ್ ಅಭಿನಯದ 'ಟಾಯ್ಲೆಟ್ ಎ ಲವ್ ಸ್ಟೋರಿ' ಚಿತ್ರ ಬಿಲ್ ಗೇಟ್ಸ್ ಮನಗೆದ್ದಿದೆ.
ಹೌದು, ಅಕ್ಷಯ್ ಕುಮಾರ್ ಅವರ ಚಿತ್ರ 'ಟಾಯ್ಲೆಟ್ ಎ ಲವ್ ಸ್ಟೋರಿ', ಈ ವರ್ಷದ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಯಿತು. ಇದು ಭಾರತದ ಸಮಸ್ಯೆಯ ಮೇಲೆ ಮಾಡಿದ ಚಿತ್ರವಾಗಿದ್ದು, ಜನರು ಎಲ್ಲಿ ತ್ವರಿತವಾಗಿ ಮಾತನಾಡುವುದಿಲ್ಲ ಎಂಬುದನ್ನು ತಿಳಿಸುತ್ತದೆ. ಈ ಚಿತ್ರ ಕತೆ ಅಂತಹದ್ದೇ ಒಂದು ಸ್ವರೂಪದ್ದಾಗಿತ್ತು. ಪತಿಯ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಪತ್ನಿ ಅವನನ್ನು ಬಿಟ್ಟು ಹೋಗುತ್ತಾಳೆ. ನಂತರ, ಪತಿ ತನ್ನ ಪತ್ನಿಯನ್ನು ವಾಪಸ್ ಕರೆಸಿಕೊಳ್ಳುವ ಸಲುವಾಗಿ ಈ ವಿಷಯದ ಬಗ್ಗೆ ಕೆಲಸ ಮಾಡುತ್ತಾನೆ. ಎಲ್ಲರನ್ನು ಎದುರಿಸಿ ಶೌಚಾಲಯಗಳನ್ನು ತಯಾರಿಸುತ್ತಾನೆ.
ಈ ಚಿತ್ರದ ಬಗ್ಗೆ ಸಾಕಷ್ಟು ವಿಮರ್ಶೆಗಳು ಬಂದವು. ಅಷ್ಟೇ ಅಲ್ಲ ಇದು ಬಾಕ್ಸ್ ಆಫೀಸ್ನಲ್ಲೂ ಸಹ ಹಿಟ್ ಆಗಿತ್ತು. ಚಿತ್ರದ ಬಜೆಟ್ 18 ಕೋಟಿ ಆದರೆ, ಅದರ ಬಾಕ್ಸ್ ಆಫಿಸ್ ಕಲೆಕ್ಷನ್ 216.58 ಕೋಟಿ. ಬಿಲ್ ಗೇಟ್ಸ್ ಕೂಡಾ ಈ ಚಲನಚಿತ್ರವನ್ನು ಪ್ರಶಂಸಿಸಿದ್ದಾರೆ. ಚಲನಚಿತ್ರದ ಕುರಿತು ಅವರು ತಮ್ಮ ಟ್ವಿಟರ್ನಲ್ಲಿ ಬರೆದಿದ್ದಾರೆ, "ಟಾಯ್ಲೆಟ್: ಎ ಲವ್ ಸ್ಟೋರಿ, ನೂತನವಾಗಿ ಮದುವೆಯಾದ ಜೋಡಿ ಆಧಾರಿತ ಬಾಲಿವುಡ್ನ ರೋಮ್ಯಾಂಟಿಕ್ ಚಲನಚಿತ್ರವಾಗಿದೆ. ಭಾರತದಲ್ಲಿ ಶುಚಿತ್ವಕ್ಕೆ ಸಂಬಂಧಿಸಿದ ಸವಾಲುಗಳನ್ನು ಸೇರಿಸಿ ಪ್ರೇಕ್ಷಕರಿಗೆ ತೋರಿಸಿಲಾಗಿದೆ ಎಂದು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಿಲ್ ಗೇಟ್ಸ್ ಈ ಚಿತ್ರದಲ್ಲಿ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಈ ಲೇಖನದಲ್ಲಿ, ಭಾರತದಲ್ಲಿ ನಿರ್ಮಲೀಕರಣದ ಸಮಸ್ಯೆಯನ್ನು ಚಿತ್ರವು ಹೇಗೆ ತೋರಿಸುತ್ತದೆ ಎಂಬುದರ ಕುರಿತು ಅಕ್ಷಯ್ ಅವರ ಚಲನಚಿತ್ರದಲ್ಲಿ ಹೇಳಲಾಗಿದೆ. ಟಾಯ್ಲೆಟ್ ಚಿತ್ರವು ಪ್ರಧಾನಿ ಮೋದಿ ಅವರ ಸ್ವಚ್ಛತೆ ಮಿಷನ್ ಪ್ರೇರಿತ ಪ್ರೇಮ ಕಥೆಯಾಗಿದೆ ಎಂದು ತಿಳಿಸಿದ್ದಾರೆ.