ವಿಶೇಷ ರೀತಿಯಲ್ಲಿ ಯೋಗ ಮಾಡಿ ಎಲ್ಲರ ಗಮನ ಸೆಳೆದ ಅಲಯಾ, ವಿಡಿಯೋ ವೀಕ್ಷಿಸಿದ ಜನರಿಂದ ಶ್ಲಾಘನೆ
ತಲೆಕೆಳಗಾದ ಯೋಗ ಭಂಗಿಯಲ್ಲಿರುವ ವಿಡಿಯೋವನ್ನು ಅಲಯಾ ಎಫ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನವದೆಹಲಿ: ಲಾಕ್‌ಡೌನ್ ಅನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವ ನಟಿ ಅಲಯಾ ಎಫ್ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ. ನಟಿ ಈ ಬಾರಿ ಯೋಗ ಮಾಡಲು ಪ್ರಾರಂಭಿಸಿದ್ದಾರೆ. ಅಲಯಾ ತಮ್ಮ ಯೋಗಾಭ್ಯಾಸದ ವೀಡಿಯೊವನ್ನು ಹಂಚಿಕೊಂಡಿದ್ದು ಆ ವಿಡಿಯೋದಲ್ಲಿ 'ಖೋಯಾ ಗಯೆ ಹಮ್ ಕೌನ್' ಹಾಡು ಕೇಳಿಬರುತ್ತದೆ.
"ನಾನು ನನ್ನ ಜೀವನದಲ್ಲಿ ಎಂದಿಗೂ ಯೋಗ ಮಾಡಿಲ್ಲ, ಆದರೆ ಈಗ ನನ್ನ ನೆಚ್ಚಿನ ಕೆಲಸವೆಂದರೆ ತಂಪಾದ ಯೋಗ ವೀಡಿಯೊಗಳನ್ನು ಕಂಡುಹಿಡಿಯುವುದು ಮತ್ತು ಆ ವೀಡಿಯೊಗಳಂತೆ ನಾನು ಯೋಗ ಮಾಡಲು ಸಾಧ್ಯವಾಗುವ ದಿನಕ್ಕಾಗಿ ನಾನು ತುಂಬಾ ಉತ್ಸುಕಳಾಗಿದ್ದೇನೆ. ಕೊನೆಯವರೆಗೂ ನೋಡಿ." ಎಂದು ಬರೆಯುವ ಮೂಲಕ ಅವರು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಈ ಹಿಂದೆಯೂ ಅವರು ಸೋಷಿಯಲ್ ಮೀಡಿಯಾದಲ್ಲಿ ತಲೆಕೆಳಗಾದ ಯೋಗ ಭಂಗಿಯಲ್ಲಿರುವ ವಿಡಿಯೋ ಪೋಸ್ಟ್ ಪೋಸ್ಟ್ ಮಾಡಿದ್ದರು.
ಈ ಲಾಕ್ ಡೌನ್ ಸಮಯದಲ್ಲಿ ನಟಿ ಅಲಿಯಾ ಎಫ್ ಸೃಜನಾತ್ಮಕವಾಗಿ ಸಕ್ರಿಯವಾಗಿರಲು ನಿರ್ಧರಿಸಿದ್ದಾರೆ. ಅವಳು ಅಧ್ಯಯನ ಮಾಡುತ್ತಾಳೆ, ಚಲನಚಿತ್ರಗಳನ್ನು ನೋಡುತ್ತಾಳೆ, ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಾಳೆ, ಅಡುಗೆ ಮಾಡುತ್ತಾಳೆ ಮತ್ತು ಸದೃಢವಾಗಿರಲು ಹೊಸ ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದಾರೆ.