Alia-Ranbir Marriage: ʼಕಪೂರ್ʼ ಮನೆ ಸೊಸೆಯಾದ ಆಲಿಯಾ ಭಟ್
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು ಎಂಬುದು ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದ ಸುದ್ದಿ. ಇದೀಗ ಆ ಸುದ್ದಿಗೆ ಅಧಿಕೃತವಾಗಿ ಸ್ಪಷ್ಟನೆ ದೊರೆತಿದ್ದು, ಅಂತಿಮವಾಗಿ ಇವರಿಬ್ಬರು ಪತಿ-ಪತ್ನಿಯರಾಗಿ ಸಪ್ತಪದಿ ತುಳಿದಿದ್ದಾರೆ.
ಮುಂಬೈ: ಬಾಲಿವುಡ್ನ ಕ್ಯೂಟ್ ಕಪಲ್ ಎಂದೇ ಹೆಸರುವಾಸಿಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹ ಇಂದು ಸಾಂಗವಾಗಿ ನೆರವೇರಿದೆ. ಭದ್ರತೆ, ಗೌಪ್ಯತೆ ನಡುವೆಯೂ ಬಾಂದ್ರಾದ ಮನೆಯಲ್ಲಿ ಸ್ನೇಹಿತರು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ಕಾರ್ಯ ನಡೆದಿದೆ.
ಇದನ್ನು ಓದಿ: 'ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‌ನಿಂದ ದಲಿತ ಸಿಎಂ ಮಾಡುವೆ’
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು ಎಂಬುದು ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದ ಸುದ್ದಿ. ಇದೀಗ ಆ ಸುದ್ದಿಗೆ ಅಧಿಕೃತವಾಗಿ ಸ್ಪಷ್ಟನೆ ದೊರೆತಿದ್ದು, ಅಂತಿಮವಾಗಿ ಇವರಿಬ್ಬರು ಪತಿ-ಪತ್ನಿಯರಾಗಿ ಸಪ್ತಪದಿ ತುಳಿದಿದ್ದಾರೆ.
ಈ ಮದುವೆಯಲ್ಲಿ ರಣ್‌ಬೀರ್ ಕಪೂರ್ ತಾಯಿ ನೀತು ಕಪೂರ್, ಸಹೋದರಿಯರಾದ ರಿಧಿಮಾ ಕಪೂರ್ ಸಾಹ್ನಿ, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಆಲಿಯಾ ಭಟ್ ತಂದೆ ಮಹೇಶ್ ಭಟ್, ತಾಯಿ ಸೋನಿ ರಜ್ದಾನ್, ಶಾಹೀನ್ ಭಟ್ ಸೇರಿ ಅನೇಕರು ಭಾಗವಹಿಸಿದ್ದರು.
ಇದನ್ನು ಓದಿ: ‘ಸಾವಿನ ಮನೆಯಲ್ಲಿ ರಾಜಕಾರಣ ನಡೆಸುವ ರಣಹದ್ದುಗಳು ಬೀದಿಗೆ ಇಳಿದಿವೆ!’
ರಣಬೀರ್ ಮತ್ತು ಆಲಿಯಾ ಮದುವೆ ಸಮಾರಂಭ ಮುಗಿದಿದ್ದು, ಸಂಜೆ 7 ಗಂಟೆಯ ಬಳಿಕ ಮಾಧ್ಯಮಗಳ ಮುಂದೆ ಪತಿ- ಪತ್ನಿಯರಾಗಿ ಬಂದು ವಿವಾಹವನ್ನು ತಾವೇ ಬಹಿರಂಗಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ರಣಬೀರ್ ಮತ್ತು ಆಲಿಯಾ ಅವರ ಮದುವೆಯ ಫೋಟೋಗಳಿಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಆರತಕ್ಷತೆ ಮುಂದಿನ ದಿನಗಳಲ್ಲಿ ನಡೆಸುವ ಸಾಧ್ಯತೆಯಿದ್ದು, ಈ ಕಾರ್ಯಕ್ರಮದಲ್ಲಿ ಇಡೀ ಬಾಲಿವುಡ್ ಬಳಗವನ್ನು ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.