Alia Bhatt Grandpa Died: ಭಟ್ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಆಲಿಯಾ ಭಟ್ ಅವರ ತಾತ ನಿಧನರಾಗಿದ್ದಾರೆ. ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರ ತಂದೆ ನರೇಂದ್ರ ನಾಥ್ ರಜ್ದಾನ್ ಅವರು 93 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್‌ ಮೂಲಕ ನಟಿ ಆಲಿಯಾ ಈ ಮಾಹಿತಿಯನ್ನು ನೀಡಿದ್ದಾರೆ. ಇದರೊಂದಿಗೆ ಆಲಿಯಾ ಅಜ್ಜನ ಜೊತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದೀಪಿಕಾ - ಐಶ್ವರ್ಯ ಅಲ್ಲ, ಈ ಚೆಲುವೆ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ!


ಆಲಿಯಾ ಭಟ್ ಅಜ್ಜನ ಮೇಲೆ ತುಂಬಾ ಪ್ರೀತಿ ಹೊಂದಿದ್ದರು. ಅವರ ಈ ಪೋಸ್ಟ್ ಇದಕ್ಕೆ ಸಾಕ್ಷಿಯಾಗಿದೆ. ಈ ಪೋಸ್ಟ್‌ನಲ್ಲಿ ಆಲಿಯಾ, "ನನ್ನ ಅಜ್ಜ... ನನ್ನ ನಾಯಕ... 93 ವರ್ಷದವರೆಗೂ ಗಾಲ್ಫ್ ಆಡಿದರು. ಕೆಲಸ ಮಾಡಿದರು. ಅತ್ಯುತ್ತಮ ಆಮ್ಲೆಟ್‌ಗಳನ್ನು ತಯಾರಿಸುತ್ತಿದ್ದರು. ತನ್ನ ಮೊಮ್ಮಕ್ಕಳೊಂದಿಗೆ ಸಾಕಷ್ಟು ಆಟವಾಡುತ್ತಿದ್ದರು. ಅವರ ಕ್ರಿಕೆಟ್ ಆಟ, ಸ್ಕೆಚಿಂಗ್ ನನಗೆ ಇಷ್ಟ. ನನ್ನ ಪ್ರೀತಿಯ ಅಜ್ಜ, ತನ್ನ ಕುಟುಂಬವನ್ನು ತುಂಬಾ ಪ್ರೀತಿಸಿದರು ಮತ್ತು ಕೊನೆಯ ಕ್ಷಣದವರೆಗೂ ತನ್ನ ಜೀವನವನ್ನು ಆನಂದಿಸಿದರು" ಎಂದು ಬರೆದಿದ್ದಾರೆ.


 



 


ಆಲಿಯಾ ಭಟ್ ಹೊರತಾಗಿ, ಆಕೆಯ ತಾಯಿ ಸೋನಿ ರಜ್ದಾನ್ ತನ್ನ ತಂದೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸೋನಿ ರಜ್ದಾನ್ ಮತ್ತು ಆಲಿಯಾ ಅವರ ಈ ಪೋಸ್ಟ್‌ನಲ್ಲಿ, ಎಲ್ಲಾ ಸೆಲೆಬ್ರಿಟಿಗಳು ನರೇಂದ್ರ ನಾಥ್ ರಜ್ದಾನ್ ಅವರ ಸಾವಿಗೆ ನಿರಂತರವಾಗಿ ಶೋಕಿಸುತ್ತಿದ್ದಾರೆ ಮತ್ತು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.


ತಾತನ ಅನಾರೋಗ್ಯದ ಹಿನ್ನೆಲೆ ಆಲಿಯಾ IIFA ಗೆ ಹೋಗಲಿಲ್ಲ:


ನರೇಂದ್ರ ನಾಥ್ ರಜ್ದಾನ್ ಅವರ ಆರೋಗ್ಯ ಬಹಳ ದಿನಗಳಿಂದ ಕೆಟ್ಟಿತ್ತು. ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ IIFA ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿತ್ತು. ಆದರೆ ತನ್ನ ಅಜ್ಜನ ಅನಾರೋಗ್ಯದ ಕಾರಣ, ಆಲಿಯಾ IIFA ಗೆ ಹೋಗಲಿಲ್ಲ.


ಇದನ್ನೂ ಓದಿ:ಮಲೈಕಾ ಪ್ರೆಗ್ನೆನ್ಸಿ ವದಂತಿ ಕೇಳಿ ಕೆಂಡಾಮಂಡಲರಾದ ಅರ್ಜುನ್ ಕಪೂರ್, ಸಿಟ್ಟಿನಲ್ಲಿ ಈ ಹೇಳಿದ್ದೇನು ಕೇಳಿ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.