Allu Arjun: ತೆಲುಗು ಸಿನಿರಂಗದಲ್ಲಿ ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ... ಪುಷ್ಪ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಬನ್ನಿ ಸದ್ಯ ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಇನ್ನು ಪುಷ್ಪ 2 ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗಷ್ಟೇ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅಲ್ಲಿನ ಪುಷ್ಪಾ ಸಿನಿಮಾದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದರು. ನಟ ಪುಷ್ಪ 3 ಕೂಡ ಬರುವ ಸಾಧ್ಯತೆ ಇದೆ ಎನ್ನುವುದರ ಸುಳಿವೊಂದನ್ನು ನೀಡಿದ್ದಾರೆ..


ಇದನ್ನೂ ಓದಿ-ʻನಾನು ಕಿವುಡನಲ್ಲ..ʼ ಎಲ್ಲರೆದುರೇ ಕರಣ್‌ ಜೋಹರ್‌ ಮೇಲೆ ಕಿರುಚಾಡಿದ ರಣಬೀರ್‌ ಕಪೂರ್.!


ಎಷ್ಟೇ ದೊಡ್ಡ ಸ್ಟಾರ್‌ ಆದರೂ ಎಳ್ಳಷ್ಟೂ ಸೊಕ್ಕಿಲ್ಲದ ನಟ ಬನ್ನಿ ತನ್ನ ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ತನ್ನ ಸ್ವಂತ ಕುಟುಂಬದ ಸದಸ್ಯರಂತೆ ಪರಿಗಣಿಸುತ್ತಾನೆ... ಈ ವಿಚಾರವನ್ನು ಅವರೊಟ್ಟಿಗೆ ಕೆಲವ ಮಾಡುವವರೇ ಅನೇಕ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.. 


ನಟ ಅಲ್ಲು ಅರ್ಜುನ್‌ ಶೂಟಿಂಗ್ ಗಾಗಿ ಕ್ಯಾರವಾನ್ ಬಳಸುತ್ತಾರೆ.. ಈ ವಾಹನದ ಚಾಲಕ ಲಕ್ಷ್ಮಣ್.. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಇವರು ಬನ್ನಿ ಕುರಿತು ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Mehabooba: ಜಾತಿ-ಮತ-ಧರ್ಮ ಮೀರಿದ ಮೆಹಬೂಬಕ್ಕೆ ಮುಹೂರ್ತ‌ ಫಿಕ್ಸ್! 


ನಿರ್ದೇಶಕ ಬೋಯಪತಿ ಶ್ರೀನು ಜೊತೆ ಲಕ್ಷ್ಮಣ್ ಕೆಲಸ ಮಾಡುತ್ತಿದ್ದರು. ಆದರೆ ಆತ ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿ. ಲಕ್ಷ್ಮಣ್ ಬೋಯಪಾಟಿ ಅವರನ್ನು ಬಿಟ್ಟು ಅಲ್ಲು ಅರ್ಜುನ್ ಬಳಿ ಬಂದಿದ್ದು, ಬ್ನನಿ ಮಾತೃ ಹೃದಯದ ವ್ಯಕ್ತಿ ಎಂಬುದನ್ನು ಅರಿತುಕೊಂಡೆ ಎಂದಿದ್ದಾರೆ. ಅಲ್ಲು ನಟನೆಯ ಅಲ ವೈಕುಂಠಪುರಮುಲೋ ಬಿಡುಗಡೆಯಾದ ನಂತರ ತಮ್ಮ ಮನೆಯ ಕೆಲಸಗಾರರಿಗೆ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಬೋನಸ್ ಆಗಿ ಭಾರಿ ಮೊತ್ತದ ಹಣವನ್ನು ನೀಡಲಾಗಿತ್ತು ಎಂದು ಲಕ್ಷ್ಮಣ್ ಹೇಳಿದ್ದಾರೆ. 


ಇನ್ನು ಆ ಕಾರವಾನ್ ಅನ್ನು ನಿರ್ವಹಿಸಲು ವಿಶೇಷ ತರಬೇತಿಯ ಅಗತ್ಯವಿದೆ. ಲಕ್ಷ್ಮಣ್ ಅವರು ತಮ್ಮ ಕಾರವಾನ್ ತಯಾರಿಸುವಾಗ ತಿಂಗಳುಗಟ್ಟಲೆ ಪುಣೆಯಲ್ಲಿ ಉಳಿದು ಅದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಕಲಿತಿದ್ದಾರಂತೆ.. ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಳ ಪಡೆಯುವ ಲಕ್ಷ್ಮಣ್, ಪ್ರತಿ ವರ್ಷ ಅವರ ಹುಟ್ಟುಹಬ್ಬದಂದು ಬನ್ನಿ ಅವರೇ ಕೇಕ್ ತಂದು ಕತ್ತರಿಸುತ್ತಾರೆ ಎಂದು ಅಲ್ಲು ಅರ್ಜುನ್‌ ಅವರ ಸರಳತೆಯ ಬಗ್ಗೆ ಮಾತನಾಡಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.