pushpa 2 teaser: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಸಿನಿಮಾದ ಟೀಸರ್‌ ಸಾರ್ವಕಾಲಿಕ ದಾಖಲೆ ಬರೆದಿದೆ. ಸುಕುಮಾರ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಪುಷ್ಪ 1 ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್‌ ಇಂಡಿಯಾ ಸ್ಟಾರ್‌ ಆದರು. ಈ ಸಿನಿಮಾಗೆ ದೇವಿ ಶ್ರೀ ಪ್ರಸಾದ್ ನೀಡಿದ ಸಂಗೀತ ಕೂಡ ಸೂಪರ್ ಹಿಟ್ ಆಯಿತು. ಈ ಚಿತ್ರದ ಹಾಡುಗಳು.. ಅದರಲ್ಲೂ ಶ್ರೀ ವಲ್ಲಿ ಹಾಡು ಅಪಾರ ಜನಪ್ರಿಯತೆ ಗಳಿಸಿತು. ಕೆಂಪು ಚಂದನದ ಕಳ್ಳಸಾಗಣೆ ಹಿನ್ನೆಲೆಯ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 15 ರೂಪಾಯಿ ಸೀರೆ ಉಟ್ಟಿ 300 ಕೋಟಿ ಹೀರೋಯಿನ್.. ! 


ಈ ಚಿತ್ರದ ಭಾಗ 2 ಗಾಗಿ ಅಭಿಮಾನಿಗಳು ಮತ್ತು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಷ್ಪ 2 ಟೀಸರ್ ಬಿಡುಗಡೆಯಾಗಿದೆ. ಗಂಗಮ್ಮನ ಜಾತ್ರೆ ಹಿನ್ನೆಲೆಯಲ್ಲಿ ನಿರ್ದೇಶಕ ಸುಕುಮಾರ್ ಈ ಟೀಸರ್ ಕಟ್ ಮಾಡಿದ್ದಾರೆ. ಈ ಟೀಸರ್‌ನಲ್ಲಿ ಯಾವುದೇ ಡೈಲಾಗ್‌ಗಳಿಲ್ಲ. ಬರೀ ಜಾತ್ರೆ.‌ ಅಲ್ಲು ಅರ್ಜುನ್ ಲುಕ್ ಅನ್ನು ಈ ಟೀಸರ್ ನಲ್ಲಿ ತೋರಿಸಲಾಗಿದೆ. ಬಿಜಿಎಂ ಅಂತು ಮೈ ರೋಮಾಂಚನಗೊಳಿಸುವಂತಿದೆ. ಈ ಟೀಸರ್ ನಲ್ಲಿ ಅಲ್ಲು ಅರ್ಜುನ್ ಅದ್ಭುತವಾಗಿ ಕಂಡಿದ್ದಾರೆ. ಮಾತಂಗಿ ಗೆಟಪ್‌ನಲ್ಲಿ ಮಿಂಚಿದ್ದಾರೆ. ಪುಷ್ಫ 2 ಟೀಸರ್ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.


ಪುಷ್ಪ 2 ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಟೀಸರ್ ಈಗಾಗಲೇ ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪುಷ್ಪ 2 ಟೀಸರ್ ಕೇವಲ 101 ನಿಮಿಷಗಳಲ್ಲಿ 500 ಸಾವಿರ ಲೈಕ್ಸ್ ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದೀಗ ಈ ಟೀಸರ್ 1 ಮಿಲಿಯನ್ ಲೈಕ್ಸ್ ಪಡೆದಿದೆ. ಇದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ರೇಂಜ್ ನಲ್ಲಿ ಟೀಸರ್ ಇದ್ದರೆ ಸಿನಿಮಾ ಹೇಗಿರುತ್ತೆ ಅಂತ ಅಲ್ಲು ಅರ್ಜುನ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ:Bigg Boss OTT : ಶೀಘ್ರದಲ್ಲೇ ಬಿಗ್ ಬಾಸ್ ಒಟಿಟಿ ಹೊಸ ಸೀಸನ್‌ ಶುರು.. ದಿನಾಂಕ ಮತ್ತು ಸಮಯ ಇಲ್ಲಿ ತಿಳಿಯಿರಿ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.