Icon Star Allu Arjun Property: ಟಾಲಿವುಡ್‌ ಐಕಾನ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿರುವ ಅಲ್ಲು ಅರ್ಜುನ್ ಬಾಲಕಲಾವಿದನಾಗಿ ಸಿನಿರಂಗಕ್ಕೆ ಎಂಟೀ ನೀಡದವರು, ಇಂದು ಭಾರೀ ಸಂಭಾವನೆ ಪಡೆಯುವ ನಟನರಲ್ಲಿ ಒಬ್ಬರಾಗಿದ್ದಾರೆ. ಐಕಾನ್‌ ಸ್ಟಾರ್‌ ಮೊದಲು ಗಂಗೋತ್ರಿ ಸಿನಿಮಾ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಿ, ತದನಂತರ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಹಲವು  ಬ್ಲಾಕ್ ಬಸ್ಟರ್ ಹಿಟ್ ಕೂಡ ಆಗಿದೆ.


COMMERCIAL BREAK
SCROLL TO CONTINUE READING

ಅಲ್ಲು ಅರ್ಜುನ್‌ ಎರಡು ಎಕರೆ ಜಾಗದಲ್ಲಿ 100 ಕೋಟಿ ರೂ.ಗೆ ಬೆಲೆ ಬಾಳುವ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿ ಸ್ವಿಮ್ಮಿಂಗ್ ಪುಲ್, ಜಿಮ್ನಾಷಿಯಂ, ಹೋಮ್ ಥಿಯೇಟರ್, ಬಾರ್ ಝೋನ್, ಮಕ್ಕಳಿಗಾಗಿ ಆಟದ ಮೈದಾನ  ಕೂಡ ಇದೆ. ಈ ನಟನ ಮನೆ ಬ್ಲೆಸ್ಸಿಂಗ್ ಬಂಗಲೆ ಹೈದರಾಬಾದ್‌ನ  ಜುಬಿಲಿ ಹಿಲ್ಸ್‌ನಲ್ಲಿದ್ದು, ಇದು ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ಒಂದಾಗಿದೆ. ಹಲವಾರು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಈ ಏರಿಯಾದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಅಪ್ಪು ಆಪ್ತರಿಂದ ಬಿಡುಗಡೆಯಾಯಿತು 'ರತ್ನ' ಚಿತ್ರದ ಹಾಡುಗಳು


ಐಕಾನ್‌ ಸ್ಟಾರ್‌ಗೆ ಐಷಾರಾಮಿ ಕಾರಿನ ಕ್ರೇಜ್ ಕೊಂಚ ಜಾಸ್ತಿನೇ ಇದ್ದು, ಈ ನಟನ ಮನೆಯ ಗ್ಯಾರೇಜ್ ನಲ್ಲಿರುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ರೇಂಜ್ ರೋವರ್ ವೋಗ್ ಇದೆ. ಈ ಕಾರು ಸುಮಾರು 2.5-4 ಕೋಟಿ ರೂ ಬೆಲೆ ಬಾಳುತ್ತದೆ. ಅಷ್ಟು ಮಾತ್ರವಲ್ಲದೇ ಜಾಗ್ವಾರ್ ಎಕ್ಸ್ಜೆಎಲ್ ಹಾಗೂ ವೋಲ್ವೋ ಎಕ್ಸ್‌ಸಿ 90 ಟಿ8 ಎಕ್ಸಲೆನ್ಸ್‌ ಅಂತಹ ಕೋಟಿ ಕೋಟಿ ಬೆಲೆಯ ಕಾರುಗಳಿವೆ. ಕಾರುಗಳಷ್ಟೇ  ಅಲ್ಲದೇ ಈ ನಟ ಖಾಸಗಿ  ಜೆಟ್ ಕೂಡ ಹೊಂದಿದ್ದಾರೆ


ನಟ ಅಲ್ಲು ಅರ್ಜುನ್‌ ಬಳಿ ವ್ಯಾನಿಟಿ ವ್ಯಾನ್  ಕೂಡ ಇದ್ದು, ಸಿನಿಮಾ ಶೂಟಿಂಗ್ ಅಂತ ಹೊರೆಗೆ ಹೋದಾಗ  ತಮ್ಮ ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯುತ್ತಾರೆ. ಇದರ ಬೆಲೆ ಸುಮಾರು ಏಳು ಕೋಟಿ ಎನ್ನಲಾಗುತ್ತಿದ್ದು,  ಇದರಲ್ಲಿ ಹೈಟೆಕ್ ರೂಮ್, ಮನರಂಜನಾಗೆಗಾಗಿ ಸ್ಮಾರ್ಟ್ ಟೆಲಿವಿಷನ್, ಆರಾಮದಾಯಕ ರೆಕ್ಲೈನರ್, ಜಿಮ್ನಾಷಿಯಂ, ರೆಫ್ರಿಜರೇಟರ್ ಮತ್ತು ಹೈಟೆಕ್ ಬಾತ್ ರೂಮ್ ಸೇರಿದಂತೆ ಹಲವಾರು ಲಗ್ಜುರಿ ಸೌಲಭ್ಯಗಳು ಇವೆ.


ಇದನ್ನೂ ಓದಿ: ಆಂಕರ್‌ ಅನುಶ್ರೀಗೂ ನಟ ರಕ್ಷಿತ್‌ ಶೆಟ್ಟಿಗೂ ಮದುವೆ? ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಹುಟ್ಟಿಸಿದ ಫೋಟೋ!!


ಪ್ಯಾನ್‌ ಇಂಡಿಯಾ ಸ್ಟಾರ್‌ ನಟ ಅಲ್ಲು ಅರ್ಜುನ್ ಗೆ ಐಷಾರಮಿ ಕಾರಿನ ಕ್ರೇಜ್‌ ಹೇಗೆ ಇದೆಯೋ ಹಾಗೆಯೇ ದುಬಾರಿ ವಾಚ್ ಅಂದ್ರೆ ತುಂಬಾನೇ ಇಷ್ಟ. ಆದರಿಂದ ಈ ನಟ ಐಷಾರಾಮಿ ವಾಚ್‌ಗಳ ಅದ್ಭುತ ಕಲೆಕ್ಷನ್ ಹೊಂದಿದ್ದು, ಅವರು ಕಾರ್ಟಿಯರ್ ಸ್ಯಾಂಟೋಸ್ 100 XL, Hublot ಬ್ಯಾಂಗ್ ಬ್ಯಾಂಗ್ ಸ್ಟೀಲ್ ಕಾರ್ಬನ್ ವಾಚ್ ಹಾಕಿಕೊಂಡಿರುವುದನ್ನು ನೋಡಬಹುದು. ರೋಲೆಕ್ಸ್ ಡೇಟೋನಾ ಸ್ಟೇನ್ ಲೆಸ್ ಸ್ಟೀಲ್ ವಾಚ್ ತೊಟ್ಟಿಕೊಂಡಿರುವುದನ್ನು ಕಾಣಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .