Pushpa 2 : ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್‌ನಿಂದ ಪ್ಯಾನ್ ಇಂಡಿಯಾ ಐಕಾನ್ ಸ್ಟಾರ್ ಆಗಿ ಬೆಳೆದ ಅಲ್ಲು ಅರ್ಜುನ್ ಅವರಿಗೆ ಫ್ಯಾನ್ಸ್‌ ಕ್ರೇಜ್ ಹೆಚ್ಚು. ಬಿಡುಗಡೆಯ ನಂತರ ಸಂಚಲನ ಮೂಡಿಸಿದ್ದ ಪುಷ್ಪ 1.. ಇದೀಗ ಪುಷ್ಪ 2 ಬಿಡುಗಡೆಯಾಗದೇ ದಾಖಲೆಗಳನ್ನು ಸೃಷ್ಟಿಸುತ್ತಿದೆ.


COMMERCIAL BREAK
SCROLL TO CONTINUE READING

ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಷ್ಪ 2 ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಅಲ್ಲು ಅರ್ಜುನ್ ಕ್ರೇಜ್ ಮಾಮೂಲಿಯಾಗಿರಲಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಈ ಫಸ್ಟ್ ಲುಕ್ ಗೆ ಭಾರೀ ಲೈಕ್ಸ್ ಬರುತ್ತಿದೆ. ತಿರುಪತಿ ಸುತ್ತಮುತ್ತ ನಡೆಯುವ ಗಂಗಮ್ಮ ಜಾತ್ರೆಯಲ್ಲಿ ಗಂಡಸರು ಹೆಣ್ಣಿನ ವೇಷ (ದೇವಿಯ ವೇಷ) ಧರಿಸುತ್ತಾರೆ. ಇದು ಅಲ್ಲಿನ ಜನರ ಆಚರಣೆ. ಅದೇ ರೀತಿ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಹೆಣ್ಣಿನ ಪೋಷಾಕು ತೊಟ್ಟಿರುವ ಫಸ್ಟ್ ಲುಕ್ ಚಿತ್ರವನ್ನು ಸುಕುಮಾರ್ ರಿಲೀಸ್ ಮಾಡಿದ್ದರು. ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು ಇಂದಿಗೂ ಸಿಗುತ್ತಲೇ ಇದೆ.


ಇದನ್ನೂ ಓದಿ: ಸೂಪರ್‌ಸ್ಟಾರ್‌ ಶ್ರೀದೇವಿ 60ನೇ ಹುಟ್ಟು ಹಬ್ಬಕ್ಕೆ ಗೂಗಲ್ ಡೂಡಲ್ ಗೌರವ..!


ಬಿಡುಗಡೆಯಾದಾಗಿನಿಂದ ಹಿಡಿದು ಈ ಫೋಸ್ಟರ್‌ ಇದುವರೆಗೆ 7 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ. ಆದ್ದರಿಂದ ಇದೊಂದು ಸಾರ್ವಕಾಲಿಕ ದಾಖಲೆ ಎನ್ನಲಾಗಿದೆ. ಭಾರತೀಯ ಚಿತ್ರವೊಂದರ ಪೋಸ್ಟರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಇಷ್ಟು ದೊಡ್ಡ ಲೈಕ್‌ಗಳನ್ನು ಪಡೆಯುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಈಗಾಗಲೇ ಪುಷ್ಪ ದಿ ರೂಲ್ ಟೀಸರ್ ರಿಲೀಸ್‌ ಆಗಿ ಸಖತ್‌ ಸೌಂಡ್‌ ಮಾಡಿತ್ತು.


ಕರ್ಲಿ ಹೇರ್ನಲ್ಲಿ ಗಮನ ಸೆಳೆದ ಕರಾವಳಿ ಸುಂದರಿ..ಪೋಟೋಸ್‌ ನೋಡಿ


ಇನ್‌ಸ್ಟಾಗ್ರಾಮ್‌ನಲ್ಲಿ ಇದುವರೆಗೆ ಯಾವುದೇ ಭಾರತೀಯ ಚಲನಚಿತ್ರ ಪಡೆಯದಷ್ಟು ದೊಡ್ಡ ಸಂಖ್ಯೆ ಲೈಕ್‌ಗಳನ್ನು ಈ ಪೋಸ್ಟರ್‌ ಪಡೆದುಕೊಂಡಿದೆ. ಇದು ಸಾರ್ವಕಾಲಿಕ ರಾಷ್ಟ್ರೀಯ ದಾಖಲೆ ಎಂದು ಚಲನಚಿತ್ರ ನಿರ್ಮಾಣ ಸಂಸ್ಥೆ Mythri Movie Makers ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುತ್ತಿದೆ. ನೆಗೆಟಿವ್ ಟ್ರೋಲಿಂಗ್ ಕೂಡ ನಡೆಯುತ್ತಿದೆ. ಪುಷ್ಪ 1 ರಿಲೀಸ್ ಆಗಿ ಎರಡು ವರ್ಷಗಳೇ ಕಳೆದಿವೆ.. ಪುಷ್ಪ 2 ಬಗ್ಗೆ ಹೆಚ್ಚು ಸುದ್ದಿಯಿಲ್ಲ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ