Pushpa 2 theatrical rights: ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗ ಪ್ಯಾನ್-ಇಂಡಿಯನ್ ಕ್ರೇಜ್ ಮತ್ತು ಬೇಡಿಕೆ ಎರಡನ್ನೂ ಹೊಂದಿದ್ದಾರೆ. ಅದರಲ್ಲೂ ಪುಷ್ಪ ಚಿತ್ರದ ನಂತರ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಈಗ ಎಲ್ಲರ ಕಣ್ಣು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಮೇಲೆ ನೆಟ್ಟಿದೆ. ಬಹು ನಿರೀಕ್ಷಿತ ಚಿತ್ರ ಆಗಸ್ಟ್ 15 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 


COMMERCIAL BREAK
SCROLL TO CONTINUE READING

ಗ್ರ್ಯಾಂಡ್ ಆಗಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ನಾನಾ ಸುದ್ದಿಗಳು ಕೇಳಿ ಬರುತ್ತಿವೆ. ‘ಪುಷ್ಪ 2’ ಸಿನಿಮಾದ ಹಿಂದಿ ಅವತರಣಿಕೆಯ ವಿತರಣಾ ಹಕ್ಕು 200 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಈ ಸುದ್ದಿ ಕೇಳಿ ಅಲ್ಲು ಅರ್ಜುನ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸುಕುಮಾರ್ ನಿರ್ದೇಶನದ 'ಪುಷ್ಪ 2' ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ. ಚಿತ್ರವು ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.


ಇದನ್ನೂ ಓದಿ: ಹೊನ್ನವಳ್ಳಿ ಕೃಷ್ಣ ಹೆಂಡತಿ ಈ ಫೇಮಸ್ ನಟಿ‌.. ಮಕ್ಕಳು ಯಾರು ಗೊತ್ತೇ!


ಉತ್ತರ ಭಾರತದಲ್ಲಿ ಹೆಚ್ಚಿನ ಹಿಂದಿ ಪ್ರೇಕ್ಷಕರಿದ್ದಾರೆ. ದಕ್ಷಿಣದಿಂದ ಹಿಂದಿಗೆ ಡಬ್ ಆಗುವ ಸಿನಿಮಾಗಳಿಗೆ ಉತ್ತರ ಭಾರತವೇ ದೊಡ್ಡ ಮಾರುಕಟ್ಟೆ. ಅಲ್ಲಿ ಸೌತ್ ಸಿನಿಮಾಗಳು ಬಿಡುಗಡೆಯಾದರೆ ಭರ್ಜರಿ ಕಲೆಕ್ಷನ್ ಆಗುತ್ತದೆ. ಇದರಿಂದಾಗಿ ಹಿಂದಿ ಅವತರಣಿಕೆಯ ‘ಪುಷ್ಪ 2’ ಚಿತ್ರಕ್ಕೆ ಭಾರಿ ಬೇಡಿಕೆ ಬಂದಿತ್ತು. 


ವರದಿಗಳ ಪ್ರಕಾರ, ಅನಿಲ್ ಥಡಾನಿ ಅವರು 'ಪುಷ್ಪ 2' ಹಿಂದಿ ಆವೃತ್ತಿಯನ್ನು ವಿತರಿಸಲು ಯೋಜಿಸುತ್ತಿದ್ದಾರೆ. ಇದಕ್ಕಾಗಿ 200 ಕೋಟಿ ಖರ್ಚು ಮಾಡಿದ್ದಾರೆ ಎಂಬ ಮಾತು ಬಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ನೋಡಿ ಅಲ್ಲು ಅರ್ಜುನ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಹಾಡುಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆಡಿಯೋ ರಿಲೀಸ್ ಆದ ನಂತರ ಕ್ರೇಜ್ ಹೆಚ್ಚಾಗಲಿದೆ. 


'ಪುಷ್ಪ 2' ಸಿನಿಮಾದ ಆಡಿಯೋ ರೈಟ್ಸ್ (ಎಲ್ಲಾ ಭಾಷೆಗಳು ಸೇರಿ) 60 ಕೋಟಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಬಿಡುಗಡೆಗೂ ಮುನ್ನ ಪುಷ್ಪ 2 ಚಿತ್ರವು 1000 ಕೋಟಿ ಪ್ರೀ ರಿಲೀಸ್ ಬಿಸಿನೆಸ್ ಮಾಡಿದೆ ಎಂದು ವರದಿಯಾಗಿದೆ.  


ಇದನ್ನೂ ಓದಿ: 9 ಕೋಟಿ ಬೆಲೆಯ ವಾಚ್ ತೊಟ್ಟ ಈ ಸ್ಟಾರ್ ನಟನ ಪತ್ನಿ ಮಾಜಿ ಸಿಎಂ ಸೊಸೆ! 600 ಕೋಟಿ ಆಸ್ತಿ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.