ʼಪುಷ್ಪಾʼಗೆ ಅಲ್ಲು ಅರ್ಜುನ್, ರಶ್ಮಿಕಾ, ಫಹದ್ ಮೊದಲ ಆಯ್ಕೆಯಲ್ಲ; ಇವರಿಗೆ ಮೊದಲ ಆಫರ್ ಬಂದಿತ್ತು!!
Pushpa 2 The Rule: ವರದಿಗಳ ಪ್ರಕಾರ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ `ಪುಷ್ಪಾ`ಗೆ ಮೊದಲ ಆಯ್ಕೆಯಾಗಿರಲಿಲ್ಲ. ಹೌದು! ಶಾಕ್ ಎನಿಸಿದರೂ ನಿರ್ದೇಶಕ ಸುಕುಮಾರ್ ಪ್ರಿ-ಪ್ರೊಡಕ್ಷನ್ ಸಮಯದಲ್ಲಿ ಈ ಸೂಪರ್ ಸ್ಟಾರ್ ಅನ್ನು ಮನಸ್ಸಿನಲ್ಲಿಟ್ಟುಕೊಂಡಿರಲಿಲ್ಲ.
Pushpa 2 The Rule: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʼಪುಷ್ಪ 2: ದಿ ರೂಲ್ʼ ಗ್ರ್ಯಾಂಡ್ ಆಗಿ ಬಿಡುಗಡೆಯಾಗಿದೆ. ಈ ಸೂಪರ್‌ಹಿಟ್ ಸಿನಿಮಾವು 2021ರ ʼಪುಷ್ಪಾ: ದಿ ರೈಸ್ʼ ಚಿತ್ರದ ಮುಂದಿನ ಭಾಗವಾಗಿದ್ದು, ಡಿಸೆಂಬರ್ 4ರಂದು ಹೈದರಾಬಾದ್‌ನಲ್ಲಿ ಮತ್ತು ಡಿಸೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಾಕಷ್ಟು ಕ್ರೇಜ್ ಹುಟ್ಟಿಸಿದ್ದ ಈ ಸಿನಿಮಾ ಇದೀಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ವರದಿಗಳ ಪ್ರಕಾರ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ 'ಪುಷ್ಪಾ'ಗೆ ಮೊದಲ ಆಯ್ಕೆಯಾಗಿರಲಿಲ್ಲ. ಹೌದು! ಶಾಕ್ ಎನಿಸಿದರೂ ನಿರ್ದೇಶಕ ಸುಕುಮಾರ್ ಪ್ರಿ-ಪ್ರೊಡಕ್ಷನ್ ಸಮಯದಲ್ಲಿ ಈ ಸೂಪರ್ ಸ್ಟಾರ್ ಅನ್ನು ಮನಸ್ಸಿನಲ್ಲಿಟ್ಟುಕೊಂಡಿರಲಿಲ್ಲ.ಕನ್ನಡ ಸೇರಿದಂತೆ ಆರು ಭಾಷೆಗಳ ಸುಮಾರು 12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಚಿತ್ರದ ನಿರ್ದೇಶಕ ಸುಕುಮಾರ್ ಅವರ ಮೊದಲ ಆಯ್ಕೆ ಅಲ್ಲು ಅರ್ಜುನ್ ಆಗಿರಲಿಲ್ಲ. ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪಾತ್ರಗಳಿಗೂ ಸಹ ನಿರ್ದೇಶಕರು ಮೊದಲು ಬೇರೆ ನಟ-ನಟಿಯರನ್ನು ಆಯ್ಕೆ ಮಾಡಿದ್ದರಂತೆ.
ಇದನ್ನೂ ಓದಿ: Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್... ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!
ವರದಿಗಳ ಪ್ರಕಾರ, 'ಪುಷ್ಪ: ದಿ ರೈಸ್' ನಿರ್ದೇಶಕ ಸುಕುಮಾರ್ ಅವರು ಮಹೇಶ್ ಬಾಬುರನ್ನು ಪ್ರಮುಖ ಪಾತ್ರ 'ಪುಷ್ಪರಾಜ್'ಗೆ ಆಯ್ಕೆ ಮಾಡಲು ಬಯಸಿದ್ದರಂತೆ. ಆದರೆ ಮಹೇಶ್ ಬಾಬು ಈ ಪಾತ್ರದಲ್ಲಿ ನಟಿಸಲು ಹಿಂಜರಿದು ಚಿತ್ರದಿಂದ ಹಿಂದೆ ಸರಿದರಂತೆ. ಮಹೇಶ್ ಬಾಬು ಚಿತ್ರ ಮಾಡಲು ನಿರಾಕರಿಸಿದಾಗ, ಅಲ್ಲು ಅರ್ಜುನ್ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಯಿತು. ಇದಕ್ಕೆ ಓಕೆ ಎಂದ ಅಲ್ಲು ಅರ್ಜುನ್ ಅದ್ಭುತವಾಗಿ ನಟಿಸುವ ಮೂಲಕ ಸಿನಿಮಾ ಸೂಪರ್ ಹಿಟ್ ಆಗುವಂತೆ ಮಾಡಿದರು. ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯು ಅರಸಿ ಬಂತು. ಇದಲ್ಲದೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮೊದಲ ತೆಲುಗು ನಟನೆಂಬ ಹೆಗ್ಗಳಿಕೆಗೂ ಪಾತ್ರರಾದರು.
'ಪುಷ್ಪಾ: ದಿ ರೈಸ್'ನಲ್ಲಿ ಐಟಂ ಸಾಂಗ್‌ನಲ್ಲಿ 'ಊ ಅಂಟಾವಾ ಮಾವ.. ಊಊ ಅಂಟಾವಾ ಮಾವ..!ʼ ಎಂದು ಭರ್ಜರಿ ಡ್ಯಾನ್ಸ್ ಮಾಡಿದ ಸಮಂತಾ ರುತ್ ಪ್ರಭು ಅವರಿಗೆ ʼಶ್ರೀವಲ್ಲಿʼ ಪಾತ್ರಕ್ಕೆ ಆಫರ್ ನೀಡಲಾಗಿತ್ತು. ಆದರೆ ಈ ಪಾತ್ರವನ್ನು ಅವರು ನಿರಾಕರಿಸಿದ್ದರು.‘ರಂಗಸ್ಥಳಂ’ ನಂತರ ತೆರೆಮೇಲೆ ಗ್ರಾಮೀಣ ಹುಡುಗಿಯ ಪಾತ್ರ ಮಾಡಲು ಸಮಂತಾರಿಗೆ ಇಷ್ಟವಿರಲಿಲ್ಲವಂತೆ. ನಂತರ ಈ ಪಾತ್ರವನ್ನು ರಶ್ಮಿಕಾ ಮಂದಣ್ಣಗೆ ನೀಡಲಾಯಿತು.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದುವೆ ಡೇಟ್ ಫಿಕ್ಸ್!? ಈ ವಿಷಯ ಕೇಳಿ ಫ್ಯಾನ್ಸ್ ಫುಲ್ ಖುಷ್
ನಿರ್ದೇಶಕ ಸುಕುಮಾರ್ ಅವರು 'ಪುಷ್ಪ' ವಿಲನ್ ಎಸ್ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರಕ್ಕೆ ವಿಜಯ್ ಸೇತುಪತಿಯವರನ್ನು ಆಯ್ಕೆ ಮಾಡಿದ್ದರಂತೆ. ಆದರೆ ಬ್ಯುಸಿ ಶೆಡ್ಯೂಲ್‌ನಿಂದಾಗಿ ಸೇತುಪತಿ ಈ ಸಿನಿಮಾಗೆ ಲಭ್ಯವಾಗಲಿಲ್ಲ. ಹೀಗಾಗಿ ಈ ಪಾತ್ರಕ್ಕೆ ಸುಕುಮಾರನ್ ಅವರು ಫಹದ್ ಫಾಸಿಲ್‌ರನ್ನು ಆಯ್ಕೆ ಮಾಡಿದರಂತೆ. ಬೇರೆಯವರ ಪಾಲಾಗಬೇಕಿದ್ದ ʼಪುಷ್ಪʼ ಸಿನಿಮಾದ ಪಾತ್ರಗಳಿಗೆ ಅಲ್ಲು ಅರ್ಜುನ್, ರಶ್ಮಿಕಾ ಮತ್ತು ಫಹದ್ ಜೀವ ತುಂಬಿದಂತೆ ನಟಿಸಿದರು. ಪರಿಣಾಮ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್‌ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿತು. ಈ ಸಿನಿಮಾದ ಮೂಲಕ ಅನೇಕರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.