Pushpa 2 Box Office Collection: ಮೊದಲ ದಿನವೇ ಭರ್ಜರಿ ಕಮಾಯಿ..! ಎಲ್ಲಾ ದಾಖಲೆಗಳನ್ನು ಪುಡಿ-ಪುಡಿ ಮಾಡಿದ ಪುಷ್ಪ-2
Pushpa 2 Box Office Collection: ಭಾರತ ಮಾತ್ರವಲ್ಲ, ಸಾಗರದಾಚೆಗೂ ಸಖತ್ ಸೌಂಡ್ ಮಾಡುತ್ತಿರುವ ‘ಪುಷ್ಪಾ -2’ ಬಿಡುಗಡೆಯಾದ ಮೊದಲ ದಿನ ಬಾಕ್ಸ್ ಆಫೀಸಿನ ಈವರೆಗಿನ ಎಲ್ಲಾ ದಾಖಲೆಗಳನ್ನು ಕುಟ್ಟಿ ಕುಟ್ಟಿ ಪುಡಿ ಪುಡಿ ಮಾಡಿ ಬಿಸಾಕಿದೆ. ಘಟಾನುಘಟಿ ನಿರ್ದೇಶಕರು, ನಾಯಕರ ಸಿನಿಮಾಗಳೆಲ್ಲವನ್ನೂ ಹಿಂದಿಕ್ಕಿದೆ.
Pushpa 2 Box Office Collection Day 1: ‘ಪುಷ್ಪಾ -2’ ಸಿನಿಮಾ ಬಿಡುಗಡೆಗೆ ಮೊದಲೇ ನೂರಾರು ಕೋಟಿ ರೂಪಾಯಿಗಳ ಮುಂಗಡ ಬುಕಿಂಗ್ ಆಗಿತ್ತು. ‘ಪುಷ್ಪಾ -1’ ಸಿನಿಮಾ ಭರ್ಜರಿ ಸಕ್ಸಸ್ ಆಗಿದ್ದರಿಂದ ‘ಪುಷ್ಪಾ -2’ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕ್ಯೂರಾಸಿಟಿ ಮತ್ತು ಕ್ರೇಜು ಎರಡೂ ಇದ್ದವು. ಗುರುವಾರ ಸಿನಿಮಾ ರಿಲೀಸ್ ಆಗಿದ್ದು ಮೊದಲ ದಿನವೇ ಕಮಾಲ್ ಮಾಡಿದೆ. ಯಾರೂ ನಿರೀಕ್ಷೆ ಮಾಡದಷ್ಟು ಕಲೆಕ್ಷನ್ ಮಾಡಿದೆ ಎಂದು ಗೊತ್ತಾಗಿದೆ.
ಸಾಮಾನ್ಯವಾಗಿ ರಾಜಮೌಳಿ ಸಿನಿಮಾಗಳ ಬಗ್ಗೆ ಈ ರೀತಿಯ ಓಪನಿಂಗ್ ಮತ್ತು ಕ್ರೇಜು ಇರುತ್ತಿತ್ತು. ಅದಲ್ಲದೆ ಬಾಲಿವುಡ್ ಬಾದಷಾ ಶಾರುಖಾನ್, ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ ಸಿನಿಮಾಗಳಿಗೆ ಇಂಥ ಕಲೆಕ್ಷನ್ ಆಗ್ತಿತ್ತು. ಆದರೆ ಅಲ್ಲು ಅರ್ಜುನ್ ನಾಯಕತ್ವದ ಸುಕುಮಾರ್ ನಿರ್ದೇಶನದ ‘ಪುಷ್ಪಾ -2’ ಇವರೆಲ್ಲರ ದಾಖಲೆಗಳನ್ನು ಧೂಳಿಪಟ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ 175.1 ಕೋಟಿ ರೂಪಾಯಿಗಳನ್ನು ಬಾಚಿ ಗುಡ್ಡೆ ಹಾಕಿಕೊಂಡಿದೆ. ರಾಜಮೌಳಿಯವರ RRR ಸಿನಿಮಾ ಮೊದಲ ದಿನ 156 ಕೋಟಿ ಕಮಾಯಿ ಮಾಡಿತ್ತು.
‘ಪುಷ್ಪಾ -2’ ಸಿನಿಮಾ ನೋಡಿದ ಎಲ್ಲರೂ ಅಲ್ಲು ಅರ್ಜುನ್ ಅವರ ಅದ್ಭುತವಾದ ನಟನೆಯ ಬಗ್ಗೆ ಮತ್ತು ಸುಕುಮಾರ್ ಅವರ ಅಮೋಘ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಪುಷ್ಪಾ -2’ ಸಿನಿಮಾ ಮೂಲಕ ಅಲ್ಲು ಅರ್ಜುನ್ ‘ಸ್ಟಾರ್ ಆಫ್ 2024’ ಆಗಿದ್ದಾರೆ. ಸುಕುಮಾರ್ ಕೂಡ ‘ಸ್ಟಾರ್ ಡೈರೆಕ್ಟರ್ ಆಫ್ ಡಿ ಇಯರ್’ ಎನಿಸಿಕೊಂಡಿದ್ದಾರೆ. ಪ್ರತಿ ದೃಶ್ಯವೂ ಅದ್ಭುತವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೂ ಕ್ಲೈಮ್ಯಾಕ್ಸ್ ದೃಶ್ಯದ ಬಗ್ಗೆಯಂತೂ ಜನ ಹುಚ್ಚೆದ್ದು ಕುಣಿಯುವಂತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ- ಸಖತ್ ಸೌಂಡ್ ಮಾಡುತ್ತಿರುವ ಪುಷ್ಪಾ-2 ಸಿನಿಮಾವನ್ನು ಈ ಐದು ಕಾರಣಗಳಿಗಾಗಿ ನೋಡಲೇಬೇಕು..!
‘ಪುಷ್ಪಾ -2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ನೆಗೆಟೀವ್ ಶೇಡ್ ಪಾತ್ರ ಮಾಡಿದ್ದರೂ ತಮ್ಮ ಅತ್ಯದ್ಭುತ ನಟನೆಯ ಮೂಲಕ ‘ಇನ್ನೊಬ್ಬ ಹೀರೋ’ ಎನಿಸಿಕೊಳ್ಳುತ್ತಿದ್ದಾರೆ. ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮಿರಿ ಮಿರಿ ಮಿಂಚಿದ್ದಾರೆ. ಐಟಂ ಸಾಂಗಿಗೆ ಸೊಂಟ ಬಳುಕಿಸಿರುವ ಇನ್ನೊಬ್ಬ ಕನ್ನಡತಿ ಶ್ರೀಲೀಲಾ ಕೂಡ ಸಿನಿಮಾದ ಅಂದವನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಸಿನಿ ರಂಗದಲ್ಲಿ ಗ್ಲಾಮರ್ ಗರ್ಲ್, ರಾಜಕೀಯದಲ್ಲಿ ರಾಣಿ, ಇಡೀ ನಾಡಿಗೆ 'ಅಮ್ಮ'ನಾಗಿದ್ದ ಹೃದಯವಂತೆ ಈಕೆ ಯಾರು ಗೊತ್ತಾ..!
2021ರಲ್ಲಿ ರಿಲೀಸ್ ಆಗಿದ್ದ ‘ಪುಷ್ಪಾ -1’ ಸಿನಿಮಾ ಕೊರೋನಾ ನಡುವೆಯೂ ವಿಶ್ವಾದ್ಯಂತ ಒಟ್ಟಾರೆ 326.6 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ‘ಪುಷ್ಪಾ -1’ ಸಿನಿಮಾ ಮೊದಲ ದಿನವೇ 175.1 ಕೋಟಿ ರೂಪಾಯಿಗಳನ್ನು ಗಳಿಸಿದೆ. ಒಂದು ವಾರ ಹೀಗೆ ಓಡಿದರೆ ಚಿತ್ರದ ಕಲೆಕ್ಷನ್ ಸಾವಿರ ಕೋಟಿ ದಾಟಬಹುದು ಎಂದು ಹೇಳಲಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.