Allu Arjun Wax Statue: ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಅಲ್ಲು ಅರ್ಜುನ್ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಅಲ್ಲು ಅರ್ಜುನ್ ದುಬೈಗೆ ತೆರಳಿ ಸ್ವತಃ ತಮ್ಮ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಬನ್ನಿ ತಮ್ಮ ಮೊದಲ ಸಿನಿಮಾ ಗಂಗೋತ್ರಿ ಬಿಡುಗಡೆಯಾಗಿ ಇಂದಿಗೆ 21 ವರ್ಷಗಳಾದ ಹಿನ್ನೆಲೆ, ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ವಿಶೇಷ.


COMMERCIAL BREAK
SCROLL TO CONTINUE READING

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 21 ವರ್ಷ ಕಳೆದಿದೆ. 2003 ಮಾರ್ಚ್ 28ರಂದು ಗಂಗೋತ್ರಿ ಸಿನಿಮಾ ಮೂಲಕ ಬನ್ನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲು ಸಿನಿಪಯಣಕ್ಕೆ 21 ವರ್ಷ ಪೂರೈಸಿದೆ. ಈ ಖುಷಿ ಕ್ಷಣ ನಡುವೆಯೇ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ (Allu Arjun UNVEILS his wax statue) ಮೇಣದ ಪ್ರತಿಮೆ ಅನಾವರಣಗೊಂಡಿದೆ.


ಇದನ್ನೂ ಓದಿ:ಎಲ್ಲೆಡೆ ʼಯುವʼ ಹವಾ ಶುರು..! ಫುಲ್ ಮಾಸ್.. ಫುಲ್ ಕ್ಲಾಸ್.. ಮಚ್ಚಾ


ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಕ್ ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಲೋಕಾರ್ಪಣೆಗೊಂಡಿದೆ. 'ಅಲವೈಕುಂಠಪುರಂಲೋ' ಚಿತ್ರದ ಅಲ್ಲು ಅರ್ಜುನ್ ಲುಕ್ ನ ಮೇಣದ ಪ್ರತಿಮೆಯನ್ನು ಮಾರ್ಚ್ 28 ರ ರಾತ್ರಿ ಅನಾವರಣ ಮಾಡಲಾಯ್ತು. ತಮ್ಮದೇ ಮೇಣದ ಪ್ರತಿಮೆ ಲುಕ್ ನಲ್ಲಿ ಕೆಂಪು ಬಣ್ಣದ ಸೂಟ್ ಧರಿಸಿ ಬನ್ನಿ ಕಾಣಿಸಿಕೊಂಡಿದ್ದಾರೆ.  ಡೂಡ್ಲಿಕೇಟ್ ಪಕ್ಕ ನಿಂತು ತಗ್ಗೋದೇ ಇಲ್ಲ ಅಂತಾ ಪುಷ್ಪ ಸ್ಟೈಲ್ ನಲ್ಲಿ ಪೋಸ್ ಕೊಟ್ಟಿದ್ದಾರೆ.


ನಟಿ ಅದಿತಿ ರಾವ್‌ ಯಾರು ಗೊತ್ತೆ..? ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ನಟಿಯ ಇತಿಹಾಸ


ಭಾರತೀಯ ಚಿತ್ರರಂಗದ ಹಲವು ತಾರೆಯರ ಮೇಣದ ಪ್ರತಿಮೆಗಳು ಲಂಡನ್ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿವೆ. ಆದ್ರೆ ಅಲ್ಲು ಅರ್ಜುನ್ ಪ್ರತಿಮೆ ಮಾತ್ರ ದುಬೈ ಮ್ಯೂಸಿಯಂನಲ್ಲಿದೆ. ದುಬೈನಲ್ಲಿ ಮೇಣದ ಪ್ರತಿಭೆಗೆ ಭಾಜನರಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಖ್ಯಾತಿ ಅಲ್ಲು ಅರ್ಜುನ್ ತಮ್ಮದಾಗಿಸಿಕೊಂಡಿದ್ದಾರೆ. ಅಂದಹಾಗೇ ಲಂಡನ್ ಮ್ಯೂಸಿಯಂನಲ್ಲಿ ಪ್ರಭಾಸ್, ಮಹೇಶ್ ಬಾಬು, ಹಾಗೂ ಕಾಜಲ್ ಮೇಣದ ಪ್ರತಿಮೆಗಳಿವೆ.


'ಪುಷ್ಪ: ದಿ ರೈಸ್'ನಲ್ಲಿ ಮೂಲಕ ಅಲ್ಲು ಅರ್ಜುನ್ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ, ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಈಗ 'ಪುಷ್ಪಾ 2: ದಿ ರೂಲ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆಗಸ್ಟ್ 15 ರಿಂದ ಚಿತ್ರ ತೆರೆಗೆ ಬರಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.