Amala Paul Pregnancy: ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದ ನಾಯಕ ನಟಿ ಅಮಲಾ ಪೌಲ್ ತನ್ನ ಗ್ಲಾಮರಸ್ ಸ್ಟೈಲ್‌’ಗೆ ಹೆಸರುವಾಸಿಯಾದವರು. ಕಳೆದ ವರ್ಷ ಅಂದರೆ 2023ರ ಕೊನೆಯಲ್ಲಿ ಮದುವೆಯಾದ ಅಮಲಾ ಪೌಲ್, ಈಗ ತಾನು ಗರ್ಭ ಧರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೈದಾನದಲ್ಲಿ ಭಗವಾನ್ ಶ್ರೀರಾಮನಂತೆ ಬಿಲ್ಲು ಹಿಡಿದು ನಿಂತ ಕೊಹ್ಲಿ…


ಕಳೆದ ವರ್ಷ ನವೆಂಬರ್ 6 ರಂದು ಅಮಲಾ ಪೌಲ್ ಜಗತ್ ದೇಸಾಯಿ ಎಂಬವರನ್ನು ವಿವಾಹವಾದರು. ಜಗತ್ ಜೊತೆ ಅಮಲಾಗೆ ಇದು ಎರಡನೇ ಮದುವೆ. ಈ ಹಿಂದೆ ಎಎಲ್ ವಿಜಯ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ, ಆ ಬಳಿಕ ದೂರವಾಗಿದ್ದರು.


ಇದೀಗ ತನ್ನ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿರುವ ನಟಿ, ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಅಮಲಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌’ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತನ್ನ ಬೇಬಿ ಬಂಪ್ ಪ್ರದರ್ಶನಿಸಿದ್ದಾರೆ. ಈ ಫೋಟೋಗಳ ಶೀರ್ಷಿಕೆಯಲ್ಲಿ ಅಮಲಾ ಪೌಲ್ ಹೀಗೆ ಬರೆದಿದ್ದಾರೆ-


ಇದನ್ನೂ ಓದಿ: ಇದು ಅಂತಿಂಥಾ ಮನೆಯಲ್ಲ ಸ್ವಾಮಿ…? ಎಷ್ಟೊಂದು ವೈಭವದಿಂದಿದೆ ನೋಡಿ ವರ್ತೂರ್ ಸಂತೋಷ್ ಅರಮನೆ


32 ವರ್ಷದ ಅಮಲಾ ಪೌಲ್ ಮೊದಲ ಬಾರಿಗೆ ತಾಯಿಯಾಗುತ್ತಿರುವ ಸಂತೋಷವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ಅಮಲಾ ಪ್ರೆಗ್ನೆಂಟ್ ಆಗಿರೋದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.