ನವದೆಹಲಿ:  ಅಮಲಾ ಪಾಲ್ ತನ್ನ ವೃತ್ತಿಜೀವನದಲ್ಲಿ ಎಂದಿಗೂ ಕೂಡ ಧೈರ್ಯಶಾಲಿ ಮತ್ತು ಪ್ರಾಯೋಗಿಕ ಪಾತ್ರಗಳನ್ನು ಮಾಡಲು ಹಿಂದೆ ಸರಿದಿಲ್ಲ.ಈಗ ಇದಕ್ಕೆ ಸಾಕ್ಷಿ ಎನ್ನುವಂತೆ ರತ್ನ ಕುಮಾರ್ ನಿರ್ದೇಶನದ ಅವರ ಮುಂಬರುವ ಆದೈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್.


COMMERCIAL BREAK
SCROLL TO CONTINUE READING

ಹೌದು, ಈ ಚಿತ್ರದಲ್ಲಿನ ಬೋಲ್ಡ್  ಪಾತ್ರಕಾಗಿ ಅವರು  ಪ್ರೇಕ್ಷಕರು ಮತ್ತು ವಿಮರ್ಶಕರಲ್ಲಿ ಸಕಾರಾತ್ಮಕ ಸಂಚಲನವನ್ನು ಸೃಷ್ಟಿಸಿದ್ದಾರೆ. ಒಂದು ನಿಮಿಷದ ಈ ಟೀಸರ್ ನಲ್ಲಿ ಅಮಲಾ ಎಲ್ಲರನ್ನು ಒಮ್ಮೆಗೆ ಬೆಚ್ಚಿ ಬೀಳಿಸಿದ್ದಾಳೆ.



ಈ ಟೀಸರ್ ನಲ್ಲಿ ತಾಯಿಯೊಬ್ಬಳು ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾಳೆ. ಆದರೆ ಇನ್ಸ್ಪೆಕ್ಟರ್ ತಾಯಿಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಅವಳು ತನ್ನ ಮಗಳ ಸ್ನೇಹಿತರೊಂದಿಗೆ ಮಾತನಾಡಿದ್ದೀರಾ ಎಂದು ಕೇಳುತ್ತಾರೆ. ಕೊನೆಯ ಬಾರಿಗೆ ತನ್ನ ಮಗಳು ತನ್ನೊಂದಿಗೆ ಮಾತನಾಡಿದಾಗ ಕುಡಿದಿದ್ದಳು ಎಂದು ತಾಯಿ ಹೇಳಲು ಹಿಂಜರಿಯುತ್ತಾಳೆ. 


ಪೊಲೀಸರು ತಮ್ಮ ಶೋಧ ಕೊನೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಂತೆ, ಅಮಲಾ ಪಾಲ್ ತನ್ನನ್ನು ಸಂಪೂರ್ಣವಾಗಿ ಬೆತ್ತಲೆಯಾಗಿರುವುದನ್ನು ಕಂಡು ಆಘಾತದಿಂದ ಎಚ್ಚರಗೊಳ್ಳುವುದನ್ನು ನಾವು ನೋಡುತ್ತೇವೆ.



ಟೀಸರ್ ಜೀನ್ ಪಾಲ್ ಸಾರ್ತ್ರೆಯ ಪ್ರಸಿದ್ಧ ಹೇಳಿಕೆಯೊಂದಿಗೆ ಪ್ರಾರಂಭವಾಗುತ್ತದೆ. ರತ್ನಾ ಕುಮಾರ್  ನಿರ್ದೇಶನದ ಈ ಚಿತ್ರವನ್ನು ವಿಜಿ ಸುಬ್ರಮಣ್ಯನ್ ನಿರ್ಮಿಸಿದ್ದಾರೆ.  ಒಂದೆರಡು ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬರಲಿದೆ ಎನ್ನಲಾಗಿದೆ. ಅಮಲಾ ಪಾಲ್ ಅವರ ಈ ಮನೋಜ್ಞ ಅಭಿನಯಕ್ಕೆ ಸುಮಂತಾ ಪ್ರಭು, ಕರಣ್ ಜೋಹರ್, ರಾಮ್ ಗೋಪಾಲ್ ವರ್ಮಾ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.