ಬೆಂಗಳೂರು: ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅವರ ಬಹುನಿರೀಕ್ಷಿತ 'ಅಮರ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. “ಹೀರೋ ತರನಾ, ಚಾನ್ಸೇ ಇಲ್ಲಾ ನೋ ವೇ..ಯೇ ನಾನು ಹೀರೋನೆ” ಎಂಬ ಅಭಿಷೇಕ್​ ಪಂಚಿಂಗ್ ಡೈಲಾಗ್​ ಅಂಬರೀಶ್​ ಅವರನ್ನೇ ನೆನಪಿಸುತ್ತದೆ. 


COMMERCIAL BREAK
SCROLL TO CONTINUE READING

ಪ್ರೇಮಿಗಳ ದಿನದಂದು 'ಅಮರ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ‘ಅಮರ್​’ನಲ್ಲಿ ಅಭಿಷೇಕ್​ ಪಾತ್ರ ಹೇಗಿರಲಿದೆ ಎಂಬ ನಿರೀಕ್ಷೆಗೆ ಸಣ್ಣ ಝಲಕ್  ಅಭಿ ಸಖತ್ ಮಾಸ್ ಆಗಿ ಆಗಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ತೋರಿಸಲಾಗಿರುವ ಅಭಿಷೇಕ್ ಬೈಕ್​ ಸ್ಟಂಟ್​ಗಳು ಮೈ ನವಿರೇಳಿಸುವಂತಿದೆ. 


ಮಲೇಶಿಯಾದಲ್ಲಿ ಮಗ ಅಭಿಷೇಕ್ ಜೊತೆ ಇರುವ ಅಂಬರೀಷ್ ಪತ್ನಿ ಸುಮಲತಾ ಅವರು ಈ ಸಮಯದಲ್ಲಿ ಅಗಲಿರುವ ತಮ್ಮ ಗಂಡ ಅಂಬಿಯನ್ನು ನೆನೆದು ಟ್ವೀಟರ್ ಖಾತೆಯಲ್ಲಿ "ಯಾವತ್ತೂ ನಾವು ಅವರ ಗೈಡೆನ್ಸ್ ಮತ್ತು ಆಶೀರ್ವಾದವನ್ನು ಎದುರು ನೋಡುತ್ತೇವೆ.. ಅವರು ಮೇಲಿನಿಂದಲೇ ನಿನ್ನನ್ನು ನೋಡಿ 'ಮಗ್ನೇ, ಆಲ್ ದಿ ಬೆಸ್ಟ್..' ಎಂದಿರುತ್ತಾರೆ" ಎಂದು ಹೇಳಿದ್ದಾರೆ. 



ಚಿತ್ರದಲ್ಲಿ ಅಭಿಷೇಕ್ ಅಣ್ಣನಾಗಿ ದೊಡ್ಡ ಬಿಸಿನೆಸ್ ಮ್ಯಾನ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿರುವ ಡಿ ಬಾಸ್ ದರ್ಶನ್, ನನ್ನ ಪ್ರೀತಿಯ ತಮ್ಮ ಅಭಿ ಅಂಬರೀಷ್ ‘ಅಮರ್’ ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟೀಸರ್ ಈಗ ನಿಮ್ಮ ಮುಂದೆ. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಬರಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.



ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ಕಲಾವಿದರು 'ಅಮರ್' ಚಿತ್ರಕ್ಕೆ ಶುಭ ಹಾರೈಸಿದ್ದಾರೆ.