ಟೀಂ ಇಂಡಿಯಾ `super` ಥ್ರಿಲ್ಲರ್ ಗೆ ಅಮಿತಾಭ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಭಾರತ ತಂಡದ ಈ `ಸೂಪರ್` ಗೆಲುವಿನಿಂದ ಸಂತಸಗೊಂಡ ಶತಮಾನದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಕೂಡ `ಸೂಪರ್` ಟ್ವೀಟ್ ಮಾಡುವ ಮೂಲಕ ಟೀಂ ಇಂಡಿಯಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನವದೆಹಲಿ: ಇಂದಿನ ದಿನ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ನೆನಪಿನಲ್ಲಿ ಒಂದು ಅಚ್ಚಳಿಯದ ಛಾಪು ಮೂಡಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅತ್ತ ಇನ್ನೊಂದೆಡೆ ಭಾರತ ತಂಡದ ಈ 'ಸೂಪರ್' ಗೆಲುವಿನಿಂದ ಸಂತಸಗೊಂಡ ಶತಮಾನದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಕೂಡ 'ಸೂಪರ್' ಟ್ವೀಟ್ ಮಾಡುವ ಮೂಲಕ ಟೀಂ ಇಂಡಿಯಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಮಿತಾಭ್ ಮಾಡಿರುವ ಈ ಟ್ವೀಟ್ ನೋಡಿ ನಿಮಗೂ ಕೂಡ ಒಂದು ಕ್ಷಣ ಓರ್ವ ಕ್ರಿಕೆಟ್ ಅಭಿಮಾನಿಯ ಟ್ವೀಟ್ ವಿಕ್ಷೀಸುವ ಅನುಭವವಾಗಲಿದೆ. ಏಕೆಂದರೆ 'ಇಂಡಿಯಾ, ಇಂಡಿಯಾ, ಇಂಡಿಯಾ' ನಿಂದ ಆರಂಭವಾಗುವ ಅಮಿತಾಭ್ ಟ್ವೀಟ್, ಬಳಿಕ ಅವರು ಕೊನೆಯ ಓವರ್ ನ ಕಾಮೆಂಟ್ರಿ ಮಾಡಿದ್ದಾರೆ ಎಂದೆನಿಸಲಿದೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಮೂರನೇ ಟಿ20 ಪಂದ್ಯ ಸೂಪರ್ ಓವರ್ ನಲ್ಲಿ ಮುಕ್ತಾಯಗೊಂಡಿದೆ. ಈ ಸೂಪರ್ ಓವರ್ ನಲ್ಲಿ ನ್ಯೂಜಿಲೆಂಡ್ ತಂಡ 17 ರನ್ ಗಳನ್ನು ಕಲೆಹಾಕಿದೆ. ಇದಕ್ಕೆ ಉತ್ತರಿಸಿರುವ ಭಾರತ ತಂಡ, ಓವರ್ ನ ಕೊನೆಯ ಎರಡು ಬೌಲ್ ಗಳಲ್ಲಿ ರೋಹಿತ್ ಶರ್ಮಾ ಬಾರಿಸಿರುವ ಎರಡು ಸಿಕ್ಸರ್ ನೆರವಿನಿಂದ 20 ರನ್ ಬಾರಿಸಿ ಇತಿಹಾಸ ಬರೆದಿದೆ. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಮುನ್ನಡೆ ಸಾಧಿಸಿದಂತಾಗಿದೆ. ತನ್ಮೂಲಕ ಇದೆ ಮೊದಲ ಬಾರಿಗೆ ಭಾರತ ತಂಡ ನ್ಯೂಜಿಲ್ಯಾಂಡ್ ನಲ್ಲಿ ಟಿ20 ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸರಣಿಯ ನಾಲ್ಕನೇ ಪಂದ್ಯ ಜನವರಿ 31ರಂದು ನಡೆಯಲಿದೆ.
ಪಂದ್ಯದ ಆರಂಭದಲ್ಲಿ ಮೊದಲು ಬ್ಯಾಟ್ ಬೀಸಿದ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ಗಳನ್ನು ಕಲೆಹಾಕಿದೆ. ಗೆಲುವಿಗಾಗಿ 180ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ ಕೂಡ 6 ವಿಕೆಟ್ ಕಳೆದುಕೊಂಡು 179 ರನ್ ಗಳನ್ನು ಕಲೆಹಾಕಿದೆ. ಹೀಗಾಗಿ ಮ್ಯಾಚ್ ಟೈ ಆದ ಕಾರಣ ನಿರ್ಣಯ ಸುಪರ್ ಓವರ್ ನಲ್ಲಿ ಮುಕ್ತಾಯಗೊಂಡಿದೆ.
ಅಮಿತಾಭ್ ಅವರ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಅಮಿತಾಭ್ ಶೀಘ್ರವೇ 'ಗುಲಾಬೋ ಸಿತಾಬೋ', 'ಝುಂಡ್', 'ಚೆಹರೆ' ಹಾಗೂ 'ಬ್ರಹ್ಮಾಸ್ತ್ರ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಅವರು ಅಭಿನಯಿಸಿರುವ 'ಝುಂಡ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಮಿತಾಭ್ ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.