Rat inside Amitabh Bachchan Pant : ಅಮಿತಾಬ್ ಬಚ್ಚನ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಮಾತ್ರವಲ್ಲದೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಇರುತ್ತಾರೆ. 43 ವರ್ಷಗಳ ಹಿಂದೆ ತೆರೆಕಂಡ ತಮ್ಮ ‘ದೋ ಔರ್ ದೋ ಪಾಂಚ್’ ಸಿನಿಮಾದ ದಿನಗಳನ್ನು ನೆನಪಿಸಿಕೊಂಡ ಅಮಿತಾಬ್, ಇಂಥದ್ದೊಂದು ಸ್ವಾರಸ್ಯಕರ ಘಟನೆಯನ್ನು ಹೇಳಿ ಅಭಿಮಾನಿಗಳನ್ನು ನಗಿಸಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರತಿ ಯುಗವು ವಿಭಿನ್ನ ಫ್ಯಾಷನ್ ಹೊಂದಿರುತ್ತದೆ. 80 ರ ದಶಕ ಬೆಲ್ ಬಾಟಮ್ ಯುಗವಾಗಿತ್ತು. ಆಗಿನ ಕಾಲದಲ್ಲಿ ಆಂಗ್ರಿ ಯಂಗ್ ಮ್ಯಾನ್ ಅಮಿತಾಬ್ ಬಚ್ಚನ್ ಅವರ ಕೇಶವಿನ್ಯಾಸ ಯುವಜನರ ಮೊದಲ ಆಯ್ಕೆಯಾಗಿತ್ತು.10 ಫೆಬ್ರವರಿ 1980 ರಂದು ಅಮಿತಾಭ್ ಅಭಿನಯದ 'ದೋ ಔರ್ ದೋ ಪಾಂಚ್' ಸಿನಿಮಾ ಬಿಡುಗಡೆಯಾಗಿತ್ತು. ಹಿರಿಯ ನಟ ಅಮಿತಾಭ್ ಬಚ್ಚನ್ Instagram ನಲ್ಲಿ ತಮ್ಮ ಚಿತ್ರವಾದ ದೋ ಔರ್ ದೋ ಪಾಂಚ್‌ ಚಿತ್ರವನ್ನು ಹಂಚಿಕೊಂಡಿದ್ದಾರೆ. ದೋ ಔರ್ ದೋ ಪಾಂಚ್ ಬಿಡುಗಡೆಗೊಂಡು 43 ವರ್ಷ ಪೂರೈಸಿದ ಹಿನ್ನೆಲೆ ಈ ಸ್ವಾರಸ್ಯಕರ ಘಟನೆಯನ್ನು ಅವರು ನೆನಪು ಮಾಡಿಕೊಂಡಿದ್ದಾರೆ. 


ಇದನ್ನೂ ಓದಿ : Kiccha Sudeep : ಸುದೀಪ್ ಮುಂದಿನ ಚಿತ್ರದ ಬಗ್ಗೆ ಅನೂಪ್ ಭಂಡಾರಿ ಬಿಗ್‌ ಅಪ್‌ಡೇಟ್‌.!?


ಚಿತ್ರದಲ್ಲಿ ಶಶಿ ಕಪೂರ್, ಪರ್ವೀನ್ ಬಾಬಿ, ಲಲಿತಾ ಪವಾರ್ ಇತರರು ನಟಿಸಿದ್ದಾರೆ. ಥಿಯೇಟರ್‌ಗಳಲ್ಲಿ ಸಿನಿಮಾ ನೋಡುತ್ತಿದ್ದಾಗ ‘ಪ್ಯಾಂಟ್‌ನಲ್ಲಿ ಇಲಿ ಹೋಗಿತ್ತು’ ಎಂಬ ಅನುಭವವನ್ನೂ ಹಂಚಿಕೊಂಡಿದ್ದಾರೆ. ಅವರ 'ಬೆಲ್ ಬಾಟಮ್' ಪ್ಯಾಂಟ್‌ನಿಂದ ಇದು ಸಂಭವಿಸಿದೆ ಎಂದು ಬಿಗ್‌ ಬಿ ಹೇಳಿದ್ದಾರೆ. "ಆ ದಿನಗಳಲ್ಲಿ ಬೆಲ್ ಬಾಟಮ್‌ಗಳು ತುಂಬಾ ಟ್ರೆಂಡ್‌ ಆಗಿತ್ತು.. ಥಿಯೇಟರ್‌ಗೆ ಫಿಲ್ಮ್ ನೋಡಲು ಹೋದೆ ಮತ್ತು ಇಲಿ ನನ್ನ ಪ್ಯಾಂಟ್‌ ಒಳಗೆ ಹೋಯಿತು.. ಬೆಲ್ ಬಾಟಮ್‌ಗೆ ಧನ್ಯವಾದಗಳು" ಎಂದು ಬರೆದಿದ್ದಾರೆ.


 


Prabhas Anushka Shetty : ʼಈ ನಟನʼ ಜೊತೆ ʼಅನುಷ್ಕಾ ಸಂಬಂಧʼ..! ಇದೇ ʼಪ್ರಭಾಸ್‌-ಶೆಟ್ಟಿ ಬ್ರೇಕ್‌ಅಪ್‌ʼಗೆ ಕಾರಣ..!


43 ವರ್ಷಗಳ ಹಿಂದೆ ಬಿಡುಗಡೆಯಾದ 'ದೋ ಔರ್ ದೋ ಪಾಂಚ್' ಅತ್ಯುತ್ತಮ ಆಕ್ಷನ್, ಹಾಸ್ಯಭರಿತ ಚಿತ್ರ. ಈ ಚಿತ್ರವನ್ನು ರಾಕೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಈ ಚಿತ್ರ ಹಿಂದಿಯಲ್ಲಿ ಭರ್ಜರಿ ಹಿಟ್ ಆಗಿತ್ತು. ನಂತರ ಅದರ ರೀಮೇಕ್ ತಮಿಳಿನಲ್ಲಿ ಮಾಡಲ್ಪಟ್ಟಿತು, ಇದರಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.