ನವದೆಹಲಿ: ಕತ್ರಿನಾ ಕೈಫ್ ಅವರ ರೀಲ್ 'ವೆಡ್ಡಿಂಗ್' ನಲ್ಲಿ ಅಮಿತಾಬ್ ಬಚ್ಚನ್ ನಾಗಾರ್ಜುನ, ಪ್ರಭು ಗಣೇಶನ್ ಮತ್ತು ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಈ ರೀಲ್ ಮದುವೆ ಕ್ಷಣವನ್ನು ಜಾಹಿರಾತುಗಾಗಿ ಚಿತ್ರಿಕರಿಸಲಾಗಿದೆ. ಇದರಲ್ಲಿ ದಕ್ಷಿಣ ಭಾರತದ ತಾರೆಗಳಾದ ನಾಗಾರ್ಜುನ, ಪ್ರಭು ಮತ್ತು ಶಿವ ರಾಜ್‌ಕುಮಾರ್ ಅವರು ಕೂಡ ಭಾಗಿಯಾಗಿದ್ದಾರೆ. ಇದಾದ ನಂತರ ತಮ್ಮ ಟ್ವಿಟ್ಟರ್ ನಲ್ಲಿ ಪೋಟೋ ಹಂಚಿಕೊಂಡಿರುವ ಬಿಗ್ ಬಿ : "ಜಯಾ ಮತ್ತು ನನಗಿದು ಐತಿಹಾಸಿಕ ಕ್ಷಣ...ಭಾರತೀಯ ಚಲನಚಿತ್ರೋದ್ಯಮದ ಮೂರು ಅಪ್ರತಿಮ ದಂತಕಥೆಗಳ ಮೂವರು ಸೂಪರ್‌ಸ್ಟಾರ್ ಪುತ್ರರು ನಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಾರೆ...ಎಂತಹ ಗೌರವ. ನಾಗಾರ್ಜುನ- ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪುತ್ರ, (ತೆಲುಗು). ಶಿವರಾಜ್‌ಕುಮಾರ್ - ಡಾ.ರಾಜ್‌ಕುಮಾರ್ ಅವರ ಪುತ್ರ (ಕನ್ನಡ). ಪ್ರಭು - ಮಗ ಶಿವಾಜಿ ಗಣೇಶನ್ ಅವರ ಮಗ (ತಮಿಳು) ಎಂದು ಬರೆದುಕೊಂಡಿದ್ದಾರೆ.


ಅಮಿತಾಬ್ ಬಚ್ಚನ್ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಚಿತ್ರೀಕರಣದಿಂದ ಹಂಚಿಕೊಂಡಿರುವ ಹೆಚ್ಚಿನ ಫೋಟೋಗಳಲ್ಲಿ, ಕತ್ರಿನಾ ಕೈಫ್ ವಧುವಿನಂತೆ ಧರಿಸುವುದನ್ನು ಕಾಣಬಹುದು. ಬಿಗ್ ಬಿ ಮತ್ತು ಜಯ ಬಚ್ಚನ್ ಅವರು 'ವಧು' ಕತ್ರಿನಾ ಅವರನ್ನು ಮಂಟಪಕ್ಕೆ ಇಬ್ಬರು ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದಾರೆ.



ತಮ್ಮ ಅಧಿಕೃತ ಬ್ಲಾಗ್‌ನಲ್ಲಿ, ಅಮಿತಾಬ್ ಬಚ್ಚನ್ ಅವರು ದಕ್ಷಿಣ ಸಿನೆಮಾದ ದಂತಕಥೆಗಳೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ. "ಜಯ ಮತ್ತು ನನಗೆ ಎಂತಹ ಗೌರವ...ನಮ್ಮ ಉದ್ಯಮದ ಈ ಪ್ರತಿಮೆಗಳ ಗೌರವ ಮತ್ತು ನಂಬಲಾಗದ ಅನುಸರಣೆ ಮತ್ತು ಉಪಸ್ಥಿತಿಯು ಅಭಿವ್ಯಕ್ತಿಯನ್ನೂ ಮೀರಿದೆ...ಮೂರೂ ದಂತಕಥೆಗಳೊಂದಿಗೆ ಭೇಟಿಯಾಗಲು ಮತ್ತು ಸಮಯ ಕಳೆಯುವ ಅವಕಾಶ ಮತ್ತು ದೊಡ್ಡ ಗೌರವ...ನಾನು ಶಿವಾಜಿ ಗಣೇಶನ್ ಮತ್ತು ಡಾ.ರಾಜ್ ಕುಮಾರ್ ಅವರ ಚಿತ್ರಗಳ ರಿಮೇಕ್‌ಗಳಲ್ಲಿ ಕೆಲಸ ಮಾಡಿದ್ದೇನೆ...ಮತ್ತು ನಾಗ್ ನನಗೆ ಅವರ ತಂದೆ ಅಕ್ಕಿನೇನಿ ನಾಗೇಶ್ವರ ಅವರ ಜೊತೆ ನಟಿಸುವ ಪ್ರಾಜೆಕ್ಟ್ ನೀಡಿದರು... ಆದರೆ ಅತ್ಯಂತ ವಿಶೇಷವಾದದ್ದು ನಾವು ಪರಸ್ಪರ ಆನಂದಿಸುವ ಕುಟುಂಬ ಬಂಧ ಆಗಿನಿಂದ ಈಗಿನವರೆಗೂ ಮುಂದುವರೆದಿದೆ...ವಿವರಿಸಲು ಹಲವು ವಿಶೇಷ ಕ್ಷಣಗಳಿವೆ... ಆದರೆ ಈಗ ಹಾಗೆ ಮಾಡಲು ಸಾಕಷ್ಟು ಸಮಯವಿಲ್ಲ.' ಎಂದು ಬರೆದುಕೊಂಡಿದ್ದಾರೆ.