ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್  ಅಮಿತಾಬ್ ಇತ್ತೀಚೆಗಿನ ಕೆಲವು ತಿಂಗಳಿಂದ ಕಾಂಗ್ರೆಸ್ ನ ರಾಹುಲ್ ಗಾಂಧಿ ಮತ್ತು ಇತರ ನಾಯಕರ ಟ್ವಿಟ್ಟರ್ ಖಾತೆಗಳನ್ನು ಹಿಂಬಾಲಿಸುತ್ತಿದ್ದಾರೆ. ಈ ಸಂಗತಿ ನಿಮಗೆ ಅಚ್ಚರಿ ಎನಿಸಿದರು ಸಹಿತ ಸತ್ಯ.


COMMERCIAL BREAK
SCROLL TO CONTINUE READING

ಹೌದು, ಅಮಿತಾಬ್ ಬಚ್ಚನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಇವರ ಒಂದೊಂದು ಟ್ವೀಟ್ ಗಳನ್ನು ಸಹಿತ ಕೋಟ್ಯಾಂತರ ಅಭಿಮಾನಿಗಳು ಓದುತ್ತಾರೆ. ಆದ್ದರಿಂದ ಅವರ ಬಗೆಗಿನ ಯಾವುದೇ ಸುದ್ದಿಗಳು ಮಾಧ್ಯಮದಲ್ಲಿ ಸಾಕಷ್ಟು ಹವಾ ಮಾಡುತ್ತವೆ. ಈಗ ಟ್ವಿಟ್ಟರ್ ನಲ್ಲಿ ಅವರು ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರನ್ನು ಹಿಂಬಾಲಿಸುತ್ತಿರುವುದು ಹೊಸ ರೀತಿಯ ಉಹಾಪೋಹಗಳಿಗೆ ಕಾರಣವಾಗಿದೆ. 


ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಸ್ನೇಹಿತರಾಗಿದ್ದ ಬಿಗ್ ಬಿ, ಈ ಹಿಂದೆ ಒಮ್ಮೆ ಕಾಂಗ್ರೆಸ್ ನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ ನಂತರ ರಾಜಕೀಯದಿಂದ ದೂರ ಉಳಿದಿದ್ದರೂ ಸಹಿತ ಒಂದು ಕಡೆ ಅವರ ಪತ್ನಿ ಜಯಾ ಬಚ್ಚನ್ ಸಮಾಜವಾದಿ ಪಕ್ಷದಲ್ಲಿದರೆ, ಇನ್ನೊಂದೆಡೆಗೆ ಬಚ್ಚನ್ ಪ್ರಧಾನಿ ನರೇಂದ್ರ ಮೋದಿಜಿ ಆಪ್ತರಾಗಿ  ಸರ್ಕಾರದ ಬಹುತೇಕ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಮೂಲಕ ರಾಜಕೀಯದಲ್ಲಿರದಿದ್ದರೂ ಕೂಡಾ ತಮ್ಮ ಪ್ರಭಾವವನ್ನು ತೆರೆಮರೆಯಲ್ಲಿಯೆ ನಿಭಾಯಿಸುತ್ತಿದ್ದಾರೆ ಎನ್ನುವ ಅಂಶ ಎಲ್ಲರಿಗೂ ಗೊತ್ತಿದೆ. 


ಆದರೆ ಈಗ ಇತ್ತೀಚಿಗಿನ ಕೆಲವು ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಇತರ ಪಕ್ಷದ ನಾಯಕರನ್ನು ಟ್ವಿಟ್ಟರ್ ನಲ್ಲಿ  ಅಮಿತಾಬ್ ಬಚ್ಚನ್ ಹಿಂಬಾಲಿಸುತ್ತಿರುವ ಸಂಗತಿ ಪ್ರಧಾನಿ ಮೋದಿಯವರ ಅಂತರ ಕಾಯ್ದುಕೊಳ್ಳಲು ಈ ನಡೆಗೆ ಯತ್ನಿಸುತ್ತಿದ್ದಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಉಂಟಾಗಿದೆ.