ಅಭಿಷೇಕ್-ಐಶ್ವರ್ಯ ರೈ ಡಿವೋರ್ಸ್ ವದಂತಿ ಮಧ್ಯೆ ಬಿಗ್ ಬಿ ಟ್ವೀಟ್ ವೈರಲ್! ಅಭಿಮಾನಿಗಳಲ್ಲಿ ಹೆಚ್ಚಾಯ್ತು ಆತಂಕ..
amitabh bachchan tweet: ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ನಡುವೆ ಅಮಿತಾಬ್ ಬಚ್ಚನ್ ಅವರ ಇತ್ತೀಚಿನ ಟ್ವೀಟ್ ಎಲ್ಲೆಡೆ ಚರ್ಚೆಯಲ್ಲಿದೆ.. ಬಿಗ್ ಬಿ ಅವರ ಒಂದು ಮಾತು ಎಲ್ಲೆಡೆ ಅನುಮಾನವನ್ನು ಉಂಟುಮಾಡುತ್ತಿದೆ..
Abhishek-Aishwarya Rai: ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಇಬ್ಬರೂ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಲು ನಿರ್ಧರಿಸಿ.. 2007 ರಲ್ಲಿ ವಿವಾಹವಾದರು. ಒಂದು ಕಾಲದಲ್ಲಿ ಅಭಿಮಾನಿಗಳಿಗೆ ಫ್ಯಾಶನ್ ಗೋಲ್ ಕೊಟ್ಟಿದ್ದ ಜೋಡಿ ಈಗ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.. ಆದರೆ ಐಶ್ವರ್ಯ - ಅಭಿಷೇಕ್ ಈ ಬಗ್ಗೆ ಇನ್ನೂ ಯಾವುದೇ ರೀತಿಯ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಇದೀಗ ಮೆಗಾ ಹೀರೋ ಅಮಿತಾಬ್ ಬಚ್ಚನ್ ಟ್ವೀಟ್ ಎಲ್ಲೆಡೆ ಸಂಚಲನ ಮೂಡಿದೆ.
ಕೆಲ ದಿನಗಳ ಹಿಂದೆ ಅಮಿತಾಬ್ ಬಚ್ಚನ್ ಬ್ಲಾಗ್ ಮೂಲಕ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಮಾತುಕತೆ ಬಗ್ಗೆ ಮೌನ ಮುರಿದು... ವದಂತಿಗಳು ಕೇವಲ ವದಂತಿಗಳೇ.. ಅವುಗಳಲ್ಲಿ ಯಾವುದೇ ಸತ್ಯವಿಲ್ಲ... ಎಂದು ಬಿಗ್ ಬಿ ಹೇಳಿದ್ದರು.. ಇದರ ಬಳಿಕ ನಿನ್ನೆಯಷ್ಟೇ ಅಂದರೇ ಡಿಸೆಂಬರ್ 2, 2024 ರಂದು ಅಮಿತಾಬ್ ಒಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ 'ಚುಪ್' ಎಂದು ಒಂದೇ ಪದವನ್ನು ಬರೆದು.. ಮುಂದೆ ಕೋಪದ ಎಮೋಜಿಯನ್ನು ಸಹ ಪೋಸ್ಟ್ ಮಾಡಲಾಗಿದೆ. ಐಶ್ವರ್ಯಾ ರೈ ತಮ್ಮ ಹೆಸರಿನಿಂದ ಬಚ್ಚನ್ ಉಪನಾಮವನ್ನು ತೆಗೆದುಹಾಕಿದ ನಂತರ ಬಿಗ್ ಬಿ ಈ ಟ್ವೀಟ್ ಮಾಡಿದ್ದಾರೆ.
ನನಗೆ ನಿರ್ಮಾಪಕ ಅಪ್ಪನಂತಿದ್ದರೆ ನಿರ್ದೇಶಕ ಅಮ್ಮನಂತೆ :ಹಿರಿಯ ನಟಿ ತಾರಾ
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಭಾಗವಹಿಸಿದ್ದರು.. ಆಗ ನಟಿ ಬಚ್ಚನ್ ಬದಲಿಗೆ ‘ಐಶ್ವರ್ಯ ರೈ’ ಎಂದು ಮಾತ್ರ ಹೇಳಿದ್ದರು... ಇದರಿಂದಾಗಿ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಮಾತುಕತೆ ಮತ್ತಷ್ಟು ಹೆಚ್ಚಾಯಿತು. ಇದಲ್ಲದೆ, ನಟಿಯ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಿಂದಾಗಿ ನಟಿಯ ಖಾಸಗಿ ಜೀವನವು ಚರ್ಚೆಯಲ್ಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.