Sunny Leone : ಮಹಿಳೆಯರಿಗಾಗಿ ಛತ್ತೀಸ್‌ಗಢ ಸರ್ಕಾರದ 'ಮಹಾತಾರಿ ವಂದನ್ ಯೋಜನೆ'ಯನ್ನು ಜಾರಿ ಮಾಡಿದೆ. ಇದೀಗ ಈ ಯೋಜನೆಯ ಅಡಿಯಲ್ಲಿ ಖ್ಯಾತ ನಟಿ ಸನ್ನಿ ಲಿಯೋನ್ ತಿಂಗಳಿಗೆ 1000 ರೂ. ಹಣ ಪಡೆಯುತ್ತಿರುವ ವಿಚಾರ ಚರ್ಚೆಯ ವಿಷಯವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ಅಧಿಕಾರಿಗಳು ಕ್ಷೇತ್ರಕ್ಕೆ ತೆರಳಿ ಪರಿಶೀಲಿಸಿದಾಗ ಸತ್ಯ ಬಯಲಿಗೆ ಬಂದಿದೆ.


COMMERCIAL BREAK
SCROLL TO CONTINUE READING

ವ್ಯಕ್ತಿಯೊಬ್ಬ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಖಾತೆ ತೆರೆದು ವಿವಾಹಿತ ಮಹಿಳೆಯರಿಗೆ ಸರ್ಕಾರದ ಯೋಜನೆಯಡಿ ಪ್ರತಿ ತಿಂಗಳು ಠೇವಣಿ ಇಡುತ್ತಿದ್ದ 1000 ರೂಪಾಯಿಯನ್ನು ಅಕ್ರಮವಾಗಿ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ. ಈ ಪ್ರಕರಣ ಛತ್ತೀಸ್‌ಗಢದಲ್ಲಿ ಬೆಳಕಿಗೆ ಬಂದಿದೆ.


ಇದನ್ನೂ ಓದಿ:ಕೆಡಿ ಚಿತ್ರದ ಮೊದಲ ಹಾಡು ಬಿಡುಗಡೆ: ಶಿವ ಶಿವ ಲಿರಿಕಲ್ ವಿಡಿಯೋ ಔಟ್‌..!


ಬಸ್ತಾರ್ ಜಿಲ್ಲೆಯ ತಾಳೂರು ಗ್ರಾಮದ ವೀರೇಂದ್ರ ಜೋಶಿ ಎಂಬ ವ್ಯಕ್ತಿ ಸನ್ನಿ ಲಿಯೋನ್ ಹೆಸರಿನಲ್ಲಿ ಮಹತಾರಿ ವಂದನ್ ಯೋಜನೆಯಡಿ ಖಾತೆ ತೆರೆದಿದ್ದ. ಇದರಿಂದ ಈ ಖಾತೆಯಿಂದ ತಿಂಗಳಿಗೆ 1000 ರೂ.ನಂತೆ ಹತ್ತು ತಿಂಗಳವರೆಗೆ ಲಾಭ ಪಡೆಯುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಕ್ರಮವಾಗಿ ಲಾಭ ಮಾಡಿಕೊಳ್ಳುತ್ತಿದ್ದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. 


ಅರ್ಹ ಫಲಾನುಭವಿಗಳ ಪತ್ತೆಗೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ಆರೋಪಿಯು ಕಳೆದ 10 ತಿಂಗಳಿಂದ ಅಕ್ರಮ ಸವಲತ್ತು ಪಡೆಯುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಯಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯನ್ನು ಕೆಲಸದಿಂದ ವಜಾಗೊಳಿಸಿದ್ದು, ಯೋಜನಾಧಿಕಾರಿ ಹಾಗೂ ಮೇಲ್ವಿಚಾರಕರನ್ನು ಸರ್ಕಾರ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಬ್ಯಾಂಕ್ ಖಾತೆ ಜಪ್ತಿ ಮಾಡಿ ಹಣ ವಸೂಲಿ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ..


ಇದನ್ನೂ ಓದಿ:ಮ್ಯಾಕ್ಸ್ ’ಕಿಚ್ಚು ಹಚ್ಚುತ್ತೆ, ಮಾಸ್ ಅಂಡ್ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಫಿಕ್ಸ್ !


ಮತ್ತೊಂದೆಡೆ, ಸನ್ನಿ ಲಿಯೋನ್ ಹೆಸರಿನಲ್ಲಿ ಸರ್ಕಾರದ ಯೋಜನೆ ಹಣದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇಂತಹ ವಂಚನೆ ಮಾಡಿರುವ ಆರೋಪಿ ವೀರೇಂದ್ರ ಜೋಶಿ ತಾನು ನಿರಪರಾಧಿ, ಯಾರೋ ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ನನ್ನನ್ನು ಈ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಹೇಳುತ್ತಿದ್ದಾರೆ... ಪ್ರಕರಣ ತನಿಖೆ ಹಂತದಲ್ಲಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.