ನವದೆಹಲಿ : ಅಮೃತಾ ಸಿಂಗ್ 80-90ರ ದಶಕದ ಅತ್ಯಂತ ಜನಪ್ರಿಯ ಬಾಲಿವುಡ್ ನಟಿಯರಲ್ಲಿ ಒಬ್ಬರಾಗಿದ್ದರು. 1983 ರಲ್ಲಿ ತೆರೆ ಕಂಡ ಸನ್ನಿ ಡಿಯೋಲ್ ಜೊತೆಗಿನ ಬೇತಾಬ್ ಚಿತ್ರದ ಮೂಲಕ ಅಮೃತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.  ಈ ಚಿತ್ರದ ನಂತರ, ಅಮೃತಾಗೆ ಒಂದರ ಹಿಂದೆ ಒಂದರಂತೆ ಅವಕಾಶಗಳು  ಸಿಗುತ್ತಾ ಹೋದವು.  ಹೀಗೆ ಬಹಳ ಬೇಗನೆ  ಟಾಪ್ ನಟಿಯರ ಪಟ್ಟಿಯಲ್ಲಿ ಅಮೃತಾ ಸಿಂಗ್ ಸ್ಥಾನ ಪಡೆದುಕೊಂಡರು. 


COMMERCIAL BREAK
SCROLL TO CONTINUE READING

ಇದೇ ಸಮಯದಲ್ಲಿ ಪ್ರೇಮ ಬದುಕಿನ ವಿಚಾರವಾಗಿಯೇ  ಅಮೃತಾ ಸುದ್ದಿಯಾದರು. ಮೊದಲು ಅವರ ಹೆಸರು ಸನ್ನಿ ಡಿಯೋಲ್‌ ಜೊತೆ ಕೇಳಿ ಬಂದಿತ್ತು. ನಂತರ ರವಿಶಾಸ್ತ್ರಿ ಜೊತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆಯೂ ಸುದ್ದಿಯಾಗಿತ್ತು. ರವಿಶಾಸ್ತ್ರಿ ಜೊತೆ ಬ್ರೇಕಪ್ ಆದ ನಂತರ ವಿನೋದ್ ಖನ್ನಾ ಜೊತೆ ಅಮೃತಾ ಆಪ್ತತೆ ಹೆಚ್ಚಾಗತೊಡಗಿತು. ಆದರೆ  ಇವರಿಬ್ಬರ ಗೆಳೆತನ ಕೂಡಾ ಬಹು ಕಾಲ ಉಳಿಯಲಿಲ್ಲ.  ಇದಾದ ನಂತರ ಇನ್ನೂ ಚಿತ್ರ ರಂಗಕ್ಕೆ ಕಾಲಿಡದ  ಸೈಫ್ ಅಲಿ ಖಾನ್ ಅವರನ್ನು ಅಮೃತಾ ಭೇಟಿಯಾದರು.


ಇದನ್ನೂ ಓದಿ : Jailer : ಒಟಿಟಿಗೆ ಜೈಲರ್ ಸಿನಿಮಾ.. ಎಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್?


ಇಬ್ಬರ ನಡುವೆ ದೊಡ್ಡ ವಯಸ್ಸಿನ ಅಂತರವಿತ್ತು : 
ಫೋಟೋಶೂಟ್ ಸಮಯದಲ್ಲಿ, ಸೈಫ್ ಮತ್ತು ಅಮೃತಾ ಸಿಂಗ್ ನಡುವೆ  ಆತ್ಮೀಯತೆ ಹೆಚ್ಚಾಯಿತು. ಶೀಘ್ರದಲ್ಲೇ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇದಾದ ನಂತರ ಇಬ್ಬರೂ ಗುಟ್ಟಾಗಿ ಮದುವೆಯಾದರು. ಮದುವೆಯಾದಾಗ ಅಮೃತಾಗೆ 32 ವರ್ಷ ವಯಸ್ಸಾಗಿತ್ತು. ವೃತ್ತಿಜೀವನದ ಉತ್ತುಂಗದಲ್ಲಿದ್ದವರು ಅಮೃತಾ. 


32 ನೇ ವಯಸ್ಸಿಗೆ ಬಹಳಷ್ಟು ಯಶಸ್ಸು ಕಂಡಿದ್ದರು. ಹಾಗಾಗಿ ವೃತ್ತಿ ಬದುಕಿನಿಂದ ಹಿಂದೆ ಸರಿಯುವುದರಲ್ಲಿ ಅವರಿಗೆ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ. ಸಿನಿಮಾ ಬದುಕಿನಿಂದ ಹಿಂದೆ ಸರಿದು  ಕುಟುಂಬ ಜೀವನದತ್ತ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದರು. ಆದರೆ ಸೈಫ್ ಗೆ ಆಗ ಕೇವಲ 20 ವರ್ಷ. ಬಾಲಿವುಡ್‌ನಲ್ಲಿ ತಮ್ಮ ಚೊಚ್ಚಲ ಚಿತ್ರದ  ಚಿತ್ರೀಕರಣ ನಡೆಯುತ್ತಿತ್ತು. ಹೀಗಿರುವಾಗ ಮದುವೆಯ ನಂತರ ಸೈಫ್ ಮೇಲೆ ಕೌಟುಂಬಿಕ ಒತ್ತಡ ಹೆಚ್ಚಾಗಬಾರದು ಎಂದು ಅಮೃತಾ ದೊಡ್ಡ ನಿರ್ಧಾರವನ್ನೇ ತೆಗೆದುಕೊಂಡಿದ್ದರು. 


ಇದನ್ನೂ ಓದಿ : ಅಪ್ಪ - ಅಮ್ಮನನ್ನೇ ಕೋರ್ಟ್‌ ಕಟಕಟೆಯಲ್ಲಿ ನಿಲ್ಲಿಸಿದ ಖ್ಯಾತ ನಟಿ !


13 ವರ್ಷಗಳಲ್ಲಿ ಮುರಿದ ಮದುವೆ  : 
ಮಾಧ್ಯಮ ವರದಿಗಳ ಪ್ರಕಾರ, ಅಮೃತಾ ಮದುವೆಯಾದ ತಕ್ಷಣ ಕುಟುಂಬ ಮುಂದುವರಿಸಲಿಲ್ಲ. ಏಕೆಂದರೆ ಸೈಫ್ ಕುಟುಂಬದ ಬದಲಿಗೆ ತನ್ನ ವೃತ್ತಿಜೀವನದತ್ತ ಗಮನ ಹರಿಸಬೇಕೆಂಬುದು ಅಮೃತಾ ಬಯಕೆಯಾಗಿತ್ತು.  ಇದೇ ಕಾರಣದಿಂದ ಮದುವೆಯಾದ ನಾಲ್ಕು ವರ್ಷಗಳ ನಂತರ 1995ರಲ್ಲಿ ಇಬ್ಬರಿಗೂ ಮೊದಲ ಮಗು ಹುಟ್ಟಿದ್ದು. ಸಾರಾ ಅಲಿ ಖಾನ್ 1995 ರಲ್ಲಿ  ಹುಟ್ಟಿದರೆ ಮತ್ತೆ ಕೆಲವು ವರ್ಷಗಳ ನಂತರ ಇಬ್ರಾಹಿಂ ಅಲಿ ಖಾನ್  ಜನನ. ಆದರೆ, ಸೈಫ್-ಅಮೃತಾ ದಾಂಪತ್ಯ ಜೀವನವು 13 ವರ್ಷಗಳಲ್ಲಿಯೇ ಕೊನೆಯಾಯಿತು.  ನಂತರ ಇಬ್ಬರೂ ವಿಚ್ಛೇದನ ಪಡೆದು ಬಂಧ ಮುಕ್ತವಾದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ