ಬೆಂಗಳೂರು: ಸ್ಯಾಂಡಲ್ ವುಡ್ ನ  ಬಾಕ್ಸ್ ಬ್ಲಾಸ್ಟರ್ ಸಿನಿಮಾ ದಿ ವಿಲನ್ ನಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ 'ದಿ ವಿಲನ್' ಸೀತೆ ಈಗ ತಾಯಿಯಾಗುವ ಸನ್ನಿಹಿತದಲ್ಲಿದ್ದಾರೆ. ಇದನ್ನು ಸ್ವತಃ ನಟಿ ಆಮಿ ಜಾಕ್ಸನ್ ಅವರೇ ತಮ್ಮ ಇನ್ಸ್ಟಾ ಗ್ರಾಂ ಪೋಸ್ಟ್  ಮೂಲಕ ಹೇಳಿಕೊಂಡಿದ್ದಾರೆ.



COMMERCIAL BREAK
SCROLL TO CONTINUE READING

ಉದ್ಯಮಿ ಜಾರ್ಜ್ ಪಾನಾಯಿಟೋರೊಂದಿಗೆ ಎಂಗೇಜ್ ಆಗಿದ್ದ ನಟಿ ಆಮಿ ಜಾಕ್ಸನ್ ಈಗ ಇನ್ಸ್ಟಾಪೋಸ್ಟ್ ನಲ್ಲಿ" ನಾನೀಗ ಮನೆಯ ಮೇಲ್ಮಾಳಿಗೆ ಮೇಲೆ ನಿಂತು ಕೂಗಲು ಹಾತೊರೆಯುತ್ತಿದ್ದೇನೆ.ಇಂದು ತಾಯಂದಿರ ದಿನವಾಗಿದ್ದರಿಂದ ಇದಕ್ಕಿಂತಲೂ ಸೂಕ್ತ ದಿನ ಇನ್ನ್ಯಾವುದು ಇಲ್ಲ..ನಾನು ಈಗಾಗಲೇ ಅತಿ ಹೆಚ್ಚು ನಿನ್ನನ್ನು ಪ್ರೀತಿಸಿದ್ದೇನೆ. ಈಗ  ನಮ್ಮ ಪುಟ್ಟ ಲಿಬ್ರಾ ಗಾಗಿ ಹಾತೊರೆಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.



ಬ್ರಿಟನ್ನಲ್ಲಿ ಮಾರ್ಚ್ 31 ರಂದು ತಾಯಿ ದಿನವನ್ನು ಆಚರಿಸುವುದರ ಹಿನ್ನಲೆಯಲ್ಲಿ ಅವರು ತಾಯಿ ದಿನವನ್ನು ಪ್ರಸ್ತಾಪಿಸಿದ್ದಾರೆ.ಈ ಪೋಸ್ಟ್ ಗೆ ನಟಿ ಹಾಗೂ ಗಾಯಕಿ ಸೋಪಿ ಚೌದರಿ ಮತ್ತು ನಟಿ ಕೀರ್ತಿ ಸನೂನ್ ಶುಭ ಹಾರೈಸಿದ್ದಾರೆ.