Anant Ambani Watch Prize: ಮುಖೇಶ್ ಅಂಬಾನಿ ಹಾಗೂ ನೀತು ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿರುವುದು ಗೊತ್ತೇ ಇದೆ. ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ವಿದೇಶಿ ನಟರು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು ಮತ್ತು ರಾಜಕಾರಣಿಗಳು ಸೇರಿ ಬಹುದೊಡ್ಡ ತಾರಾ ಬಣವೇ ಭಾಗವಹಿಸಿದ್ದರು. 


COMMERCIAL BREAK
SCROLL TO CONTINUE READING

ಟಾಲಿವುಡ್, ಕಾಲಿವುಡ್, ಬಾಲಿವುಡ್ ಇಂಡಸ್ಟ್ರಿಯ ಸ್ಟಾರ್‌ ನಟರು ಅಂಬಾನಿ ಮನೆಯ ಮದುವೆ ಸಮಾರಂಭದಲ್ಲಿ ಮಸ್ತಿ ಮಾಡಿ ಸ್ಟೆಪ್ಸ್‌ ಹಾಕಿದ್ದರು. ಶನಿವಾರ, ಜುಲೈ 13 ರಂದು ನಡೆದ ಶುಭ ಆಶೀರ್ವಾದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಪಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನವ ದಂಪತಿಗಳನ್ನು ಆಶೀರ್ವದಿಸಿದರು. 


ಇದನ್ನೂ ಓದಿ: ಅಂಬಾನಿ ಸೊಸೆ ಧರಿಸರುವ ಈ ಲೆಹಂಗಾದ ಬಗ್ಗೆ ತಿಳಿದರೆ ನೀವು ಶಾಕ್‌ ಆಗೋದು ಗ್ಯಾರಂಟಿ..!


ಅನಂತ್ ಮತ್ತು ರಾಧಿಕಾ ಮದುವೆ ಜಗತ್ತಿನ ಅತ್ಯಂತ ದುಬಾರಿ ಮದುವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅಲ್ಲದೇ ಈ ಮದುವೆಗೆ ಬಂದ ಅತಿಥಿಗಳಿಗೆ ಅಂಬಾನಿ ಕುಟುಂಬ ಸ್ಮರಣೀಯ ಆತಿಥ್ಯ ನೀಡುತ್ತಿದೆ. ದುಬಾರಿ ಉಡುಪು ಆಭರಣ ಧರಿಸಿ ಅಂಬಾನಿ ಕುಟುಂಬದ ಸದಸ್ಯರು ಸೋಷಿಯಲ್‌ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ.


ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂಬಾನಿ ಅವರ ವಿವಾಹ ಸಮಾರಂಭವು ಅದ್ಭುತವಾಗಿತ್ತು. ವೇದಿಕೆಯನ್ನು ಭವ್ಯವಾದ ಹೂವಿನ ಅಲಂಕಾರಗಳು ಮತ್ತು ಮಿನುಗುವ ದೀಪಗಳಿಂದ ಅಲಂಕರಿಸಲಾಗಿತ್ತು. ಅಲ್ಲದೇ ಮುಖೇಶ್ ಅಂಬಾನಿ ಕುಟುಂಬಸ್ಥರು ತೊಟ್ಟಿರುವ ಬಟ್ಟೆ ಹಾಗೂ ಆಭರಣಗಳಿಂದ ನೆಟ್ಟಿಗರು ಬೆರಗಾಗಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಮುಖೇಶ್ ಅಂಬಾನಿ 5000 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡುತ್ತಿದ್ದಾರಂತೆ.


ಇದನ್ನೂ ಓದಿ: ಅನಂತ್‌-ರಾಧಿಕಾ ಜೋಡಿಗೆ ಆರ್ಶಿವಾದ ಮಾಡಿದ ಪ್ರಧಾನಿ ಮೋದಿ


ಅನಂತ್ ಅಂಬಾನಿ ಮದುವೆಯಲ್ಲಿ ಧರಿಸಿದ್ದ ವಾಚ್ ಬೆಲೆ ಗೊತ್ತಾದ್ರೆ ನೆಟ್ಟಿಗರು ಶಾಕ್ ಆಗಿದ್ದಾರೆ. ಅನಂತ್ ಅಂಬಾನಿ ತಮ್ಮ ವಿವಾಹ ಸಮಾರಂಭದಲ್ಲಿ ರಿಚರ್ಡ್ ಮಿಲ್ಲೆ RM 52-05 ಟೂರ್ ಬಿಲ್ಲನ್ ಫಾರೆಲ್ ವಿಲಿಯಮ್ಸ್ ವಾಚ್ ಧರಿಸಿದ್ದರು.ಮದುವೆ ಸಮಾರಂಭದಲ್ಲಿ ಅನಂತ್ ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿತ್ತು. ಈ ಅದ್ಭುತ ವಾಚ್‌ನ ಬೆಲೆ ಸುಮಾರು 54 ಕೋಟಿ ರೂ. ಅಂಬಾನಿ ಕುಟುಂಬವು ವಿಶ್ವದ ಅತ್ಯುತ್ತಮ ಮತ್ತು ವಿಶೇಷವಾದ ವಿಷಯಗಳಲ್ಲಿ ಆಸಕ್ತಿ ಹೊಂದಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ