ನವದೆಹಲಿ: ಅತ್ಯುತ್ತಮ ಸ್ಟುಡೆಂಟ್ ಆಗಿದ್ದ ಈ ನಟಿ ಈಗ ಕಾಲೇಜ್ ಶಿಕ್ಷಣಕ್ಕೆ ಗುಡ್ ಬೈ ಹೇಳಿದ್ದಾರೆ.ಹಾಗಾದ್ರೆ ಯಾರು ಅಂತೀರಾ ? ಆ ಬಾಲಿವುಡ್ ನಟಿ. ಅವರು ಬೇರೆ ಯಾರು ಅಲ್ಲ ಈಗ ಸ್ಟೂಡೆಂಟ್ ಆಫ್ ದಿ ಇಯರ್ -2 ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನನ್ಯಾ ಪಾಂಡೆ ಈಗ ಈ ಚಿತ್ರಕ್ಕಾಗಿ ತಮ್ಮ ಉನ್ನತ ಶಿಕ್ಷಣಕ್ಕೆ ಗುಡ್ ಬೈ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅನನ್ಯಾ ಪಾಂಡೆ " ನಾನು ಕಾಲೇಜ್ ಗೆ ಹೋಗಲು ಸಿದ್ದಳಾಗಿದ್ದೆ, ಯುನಿವರ್ಸಿಟಿ ಆಫ್ ಸೌಥರ್ನ್ ಕ್ಯಾಲಿಫೋರ್ನಿಯಾಗೆ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದ್ದೆ. ಅದಕ್ಕೂ ಮೊದಲು ನಾನು ಫಿಲಂಗೊಸ್ಕರ್ ಆಡಿಶನ್ ಗಾಗಿ ಹೋದೆ. ಅದೃಷ್ಟವಶಾತ್ ನನಗೆ ಅವಕಾಶ ಸಿಕ್ಕಿತು. ಆ ಮೂಲಕ ನನ್ನ ಕನಸು ನನಸಾಯಿತು" ಎಂದು ಹೇಳಿದ್ದಾರೆ. 


ಇನ್ನೊಂದೆಡೆ ಅನನ್ಯ ಪಾಂಡೆ ತಂದೆ ಚಂಕಿ ಪಾಂಡೆ ಪ್ರತಿಕ್ರಿಯಿಸಿ " ಆಕೆಗೆ ಎರಡು ವಿವಿಗಳಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಸಿನಿಮಾದಿಂದಾಗಿ ಆಕೆ ಹೋಗಲಿಲ್ಲ. ಇನ್ನು ಮುಂದೆ ಆಕೆ ವಿವಿಗೆ ಹೋಗುವುದಿಲ್ಲ. ಬಾಲಿವುಡ್ ನಲ್ಲಿ ಆಕೆ ಕಾರ್ಯ ನಿರ್ವಹಿಸಲಿದ್ದಾಳೆ. ಎಂದು ಹೇಳಿದರು. ಇನ್ನು ಬೆಳ್ಳಿ ತೆರೆಯ ಮೇಲೆ ಮಗಳ ನಟನೆ ಬಗ್ಗೆ ಮಾತನಾಡಿದ ಅವರು " ಆಕೆಯ ಬಗ್ಗೆ ನನಗೆ ಹೆಮ್ಮೆ ಇದೆ, ಅತ್ಯುತಮವಾಗಿ ನಟಿಸಿದ್ದಾಳೆ. ನನಗೆ ಮೊದಲು ಆಕೆ ಚೆನ್ನಾಗಿ ನಿರ್ವಹಿಸುತ್ತಾಳೋ ಇಲ್ಲವೋ ಎನ್ನುವ ಬಗ್ಗೆ ಸಂಶಯವಿತ್ತು. ಆಕೆ ಈಗ ಒಳ್ಳೆಯ ಕೆಲಸ ಮಾಡಿದ್ದಾಳೆ. ಅದರ ಬಗ್ಗೆ ನನಗೆ ಈಗ ಸಂತಸವಿದೆ " ಎಂದು ಹೇಳಿದ್ದಾರೆ.