ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಮ್ಮೆ Trollಗೆ ಒಳಗಾದ Ananya Pandey
ಉದಯೋನ್ಮುಖ ಬಾಲಿವುಡ್ ನಟಿ ಅನನ್ಯಾ ಪಾಂಡೆಯನ್ನು ಬೇಯೋನ್ಸೆಗೆ ಹೋಲಿಸಿದ್ದಕ್ಕೆ ನೆಟ್ಟಿಗರು ಆಕೆಯನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.
ನವದೆಹಲಿ: ನಟ ಇಶಾನ್ ಖಟ್ಟರ್ ಹಾಗೂ ನಟಿ ಅನನ್ಯಾ ಪಾಂಡೆ (Ananya Pandey) ಅವರ ಮುಂಬರುವ ಚಿತ್ರ 'ಖಾಲಿ-ಪಿಲೀ'ಚಿತ್ರದ ಹಾಡು 'ಬೇಯೋನ್ಸೆ ಶರ್ಮಾ ಜಾಯೆಗಿ' ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಇಬ್ಬರ ಜೋಡಿ ಅದ್ಭುತ ಮೂಡಿಬಂದಿದೆ. ಒಂದೆಡೆ ಕೆಲವರು ಈ ಹಾಡಿನ ಡಾನ್ಸ್ ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಸಾಮಾಜಿಕ ಮಾಧ್ಯಮದಲ್ಲಿ ಕೆಲ ಬಳಕೆದಾರರು ಅನನ್ಯಾ ಪಾಂಡೆ ಹೋಲಿಕೆಯನ್ನು ಬೇಯೋನ್ಸೆ ಜೊತೆ ಮಾಡಿದ್ದಕ್ಕೆ ಟ್ರೋಲ್ ಕೂಡ ಮಾಡುತ್ತಿದ್ದಾರೆ.
'ಬೇಯೋನ್ಸೆ ಶರ್ಮಾ ಜಾಯೆಗಿ' ಹಾಡಿನಲ್ಲಿ ಹಲವು ಲಾಕಿಂಗ್, ಪಾಪಿಂಗ್, ಕಥಕ್ ಜೊತೆಗೆ ಫಾಕ್ ಡಾನ್ಸ್ ತೋರಿಸಲಾಗಿದೆ. ಸರ್ಕಸ್ ನ ಥೀಮ್ ವೊಂದನ್ನು ಆಧರಿಸಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ರಿಂಗ್ ಡಾನ್ಸ್ ಹಾಗೂ ಫೈರ್ ಡಾನ್ಸ್ ಗಳಂತಹ ಹಲವು ಡಾನ್ಸ್ ಕಲೆಗಳನ್ನು ಉಪಯೋಗಿಸಲಾಗಿದೆ. ಅಕ್ಟೋಬರ್ 2 ರಂದು ಝೀಪ್ಲೆಕ್ಸ್ ಪ್ಲಾಟ್ಫಾರ್ಮ್ ಮೇಲೆ ಈ ಚಿತ್ರ ಬಿಡುಗಡೆಯಾಗುತ್ತಿದೆ.