ಮದುವೆ ಪ್ರಶ್ನೆಗಳಿಗೆ ಉತ್ತರ... ಕೊನೆಗೂ ಪ್ರೀತಿಯಲ್ಲಿ ಬಿದ್ದ ಆಂಕರ್ ಅನುಶ್ರೀ!? ಮಾತಿನ ಮಲ್ಲಿಯ ʼಜೋಡಿʼ ಯಾರು?
Anushree promo on Instagram: ಸೋಶಿಯಲ್ ಮೀಡಿಯಾ ಇನ್ʼಸ್ಟಾಗ್ರಾಂನಲ್ಲಿ ಪ್ರೋಮೋ ಶೇರ್ ಮಾಡಿರುವ ಅವರು, `ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಇದೆಲ್ಲದಕ್ಕೂ ಉತ್ತರ ಕೊಡಲು ನಾನು ಬರ್ತಿದ್ದೇನೆ. ಹೊಸ ಪ್ರೀತಿ, ಹೊಸ ಮದುವೆ ಜೊತೆ, ಬನ್ನಿ ಪ್ರೀತಿಯನ್ನು ಸೆಲೆಬ್ರೇಟ್ ಮಾಡೋಣ` ಎಂದಿದ್ದಾರೆ.
Anushree promo on Instagram: ಕರ್ನಾಟಕದಲ್ಲಿ ಅದೆಷ್ಟೋ ಮಂದಿ ಸ್ವಚ್ಛಂದವಾಗಿ ನಿರೂಪಣೆ ಮಾಡುತ್ತಾರೆ. ಆದರೆ ಅವರೆಲ್ಲರ ಪಟ್ಟಿಯಲ್ಲಿ ಅನುಶ್ರೀ ಮಾತ್ರ ಕೊಂಚ ವಿಭಿನ್ನ. ತರಲೆ, ತಮಾಷೆ, ತುಂಟಾಟಗಳನ್ನು ಮಾಡುತ್ತಾ ಕರುನಾಡಿನ ಜನರ ಹೃದಯ ಗೆದ್ದ ಮನೆಮಗಳು ಅನುಶ್ರೀ. ಆದರೆ ಇತ್ತೀಚಿನ ದಿನಗಳಲ್ಲಿ ಇವರ ಮದುವೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಹಳಷ್ಟು ಮಂದಿ ಪ್ರಶ್ನೆಗಳನ್ನು ಮಾಡುತ್ತಲೇ ಇದ್ದರು. ಇದೀಗ ಈ ವಿಚಾರಕ್ಕೆ ಸ್ಪಷ್ಟನೆ ಕೊಡಲೆಂದೇ ಅನುಶ್ರೀ ಬರ್ತಿದ್ದಾರಂತೆ.
ಇದನ್ನೂ ಓದಿ: ಈ ಮೂರು ವಿಷಯಗಳನ್ನು ಗೂಗಲ್ʼನಲ್ಲಿ ಸರ್ಚ್ ಮಾಡಲೇಬಾರದು: ಅಪ್ಪಿತಪ್ಪಿ ಮಾಡಿದರಂತೂ ಜೈಲೇ ಗತಿ
ಹೌದು ಹೀಗಂದಿದ್ದು ಸ್ವತಃ ಅನುಶ್ರೀ ಅವರೇ. ಸೋಶಿಯಲ್ ಮೀಡಿಯಾ ಇನ್ʼಸ್ಟಾಗ್ರಾಂನಲ್ಲಿ ಪ್ರೋಮೋ ಶೇರ್ ಮಾಡಿರುವ ಅವರು, "ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಇದೆಲ್ಲದಕ್ಕೂ ಉತ್ತರ ಕೊಡಲು ನಾನು ಬರ್ತಿದ್ದೇನೆ. ಹೊಸ ಪ್ರೀತಿ, ಹೊಸ ಮದುವೆ ಜೊತೆ, ಬನ್ನಿ ಪ್ರೀತಿಯನ್ನು ಸೆಲೆಬ್ರೇಟ್ ಮಾಡೋಣ" ಎಂದಿದ್ದಾರೆ.
ಇದನ್ನು ನೋಡಿ ಅವರ ಅಭಿಮಾನಿಗಳು ಮತ್ತು ಕರುನಾಡಿನ ಜನತೆ, ಕೊನೆಗೂ ಅನುಶ್ರೀ ಮದುವೆಯಾಗ್ತಿದ್ದಾರಾ? ಕೊನೆಗೂ ಪ್ರೀತಿಯಲ್ಲಿ ಬಿದ್ರಾ? ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇದು ಅನುಶ್ರೀ ಮದುವೆ ಘೋಷನೆ ಅಲ್ಲ ಎಂಬುದು ಕೆಲವರ ಮಾತು.
ಇನ್ನು ಅನುಶ್ರೀ ಈಗಾಗಲೇ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಇದರ ಮೂಲಕ ಅನೇಕ ಸಿನಿಮಾಗಳ ಪ್ರಮೋಷನ್ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅನೇಕ ನಟ-ನಟಿಯರ ಸಂದರ್ಶನ ಕೂಡ ನಡೆಸಿಕೊಟ್ಟಿದ್ದಾರೆ. ಇದೀಗ ಇಂತಹ ಪ್ರೋಮೋ ರಿಲೀಸ್ ಮಾಡಿರುವ ಅನುಶ್ರೀ ಯಾವ ವಿಷಯದ ಬಗ್ಗೆ ಸುಳಿವು ನೀಡ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ. ಅಷ್ಟೇ ಅಲ್ಲದೆ, ಇಲ್ಲಿ ಹೊಸ ಪ್ರೀತಿ, ಹೊಸ ಮದುವೆ ಎಂದು ಉಲ್ಲೇಖಿಸಿರುವ ಅವರು, ಜೋಡಿಯಾಗಿ ಈ ಶೋಗೆ ಬರ್ತಿದ್ದಾರಾ? ಎಂಬುದು ಅನೇಕರಲ್ಲಿ ಮೂಡಿರುವ ಬಹುದೊಡ್ಡ ಪ್ರಶ್ನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews