anchor Subi Suresh Death : ಸಿನಿಮಾ, ಧಾರಾವಾಹಿ ನಟಿ ಹಾಗೂ ಖ್ಯಾತ ಟಿವಿ ಆ್ಯಂಕರ್ ಸುಬಿ ಸುರೇಶ್ ನಿಧನರಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 10 ಗಂಟೆಗೆ ಕೇರಳದ ಕೊಚ್ಚಿಯ ರಾಜಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಸುಬಿ ಟಿವಿ ವಾಹಿನಿ ಕಾರ್ಯಕ್ರಮಗಳಲ್ಲಿ ನಿರೂಪಕಿಯೂ ಖ್ಯಾತಿ ಪಡೆದಿದ್ದರು. ಸ್ಟೇಜ್ ಶೋಗಳಲ್ಲಿ ನಿರೂಪಕರಾಗಿ ಮಿಂಚಿದ್ದರು. 


COMMERCIAL BREAK
SCROLL TO CONTINUE READING

ಸುಬಿ ಎರ್ನಾಕುಲಂ ಜಿಲ್ಲೆಯ ತ್ರಿಪುನಿತುರಾದಲ್ಲಿ ಜನಿಸಿದರು. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ತ್ರಿಪುಣಿತುರಾ ಸರ್ಕಾರಿ ಶಾಲೆ ಮತ್ತು ಎರ್ನಾಕುಲಂ ಸೇಂಟ್ ದಿ ರೆಸಾಸ್‌ನಲ್ಲಿ ಮುಗಿಸಿದರು. ಸುಬಿ ಶಾಲೆಯಲ್ಲಿದ್ದಾಗ ಬ್ರೇಕ್ ಡ್ಯಾನ್ಸ್ ಕಲಿತಿದ್ದಳು. ಆ ಮೂಲಕವೇ ಕಲಾ ಕ್ಷೇತ್ರಕ್ಕೆ ಕಾಲಿಟ್ಟರು. ಕೊಚ್ಚಿನ್ ಕಲಾಭವನದ ಮೂಲಕ ಗುರುತಿಸಿಕೊಂಡ ಅವರು ವಿದೇಶಗಳಲ್ಲಿ ಹಲವಾರು ಸ್ಟೇಜ್ ಶೋಗಳಲ್ಲಿ ಕಾಮಿಡಿ ಸ್ಕಿಟ್‌ಗಳನ್ನು ಪ್ರದರ್ಶಿಸಿದ್ದಾರೆ. ನಟ ರಾಜಸೇನನ್ ನಿರ್ದೇಶನದ ಕನಕ ಸಿಂಹಾಸನಂ ಚಿತ್ರದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದರು. 


ಇದನ್ನೂ ಓದಿ: ದೇವರು ದೊಡ್ಡವನು, ನಾನು ಫ್ರಿಡ್ಜ್ನಲ್ಲಿ ಶವ ಆಗುವುದನ್ನು ತಡೆದ: ಕಣ್ಣೀರಿಟ್ಟ ರಾಖಿ ಸಾವಂತ್


ಸುಬಿ ಅವರು ಸೂರ್ಯ ಟಿವಿಯಲ್ಲಿ ಕುಟ್ಟಿಪಟ್ಟಳಂ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಚಿಕ್ಕ ಮಕ್ಕಳ ಭಾಗವಹಿಸುವಿಕೆಯೊಂದಿಗೆ ಪ್ರದರ್ಶನವು ಅದ್ಧೂರಿಯಾಗಿ ಯಶಸ್ವಿಯಾಯಿತು. ಇದರಲ್ಲಿ ಸುಬಿಯ ಪಾತ್ರ ದೊಡ್ಡದಿತ್ತು. ಮಕ್ಕಳೊಂದಿಗೆ ಸುಬಿಯೂ ಒಬ್ಬಳಾಗುತ್ತಿದ್ದಳು. ಮಿಮಿಕ್ರಿ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ಸಕ್ರಿಯರಾಗಿಲ್ಲದ ಕಾಲದಲ್ಲಿ ಸುಬಿ ಆ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಸುಬಿ ಜನಪ್ರಿಯ ಹಾಸ್ಯ ಕಾರ್ಯಕ್ರಮಗಳ ಭಾಗವಾಗುವ ಮೂಲಕ ಪ್ರೇಕ್ಷಕರ ನೆಚ್ಚಿನ ಹಾಸ್ಯ ನಟಿಯಾಗಿ ಜನಮನಗೆದ್ದಿದ್ದರು.


ಸುಬಿ ಕಳೆದ ಕೆಲವು ವರ್ಷಗಳಿಂದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿಲ್ಲದಿದ್ದರೂ, ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು. ಆದರೆ, ಕೋವಿಡ್ ನಂತರ ಸುಬಿಗೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗದ್ದವು ಎಂದು ಆಪ್ತರು ಹೇಳುತ್ತಾರೆ. ಇತ್ತೀಚೆಗೆ ವಧುವಿನ ನೋಟದ ಸುಬಿಯ ಚಿತ್ರಗಳು ವೈರಲ್ ಆಗಿದ್ದವು. ಈ ʼದಿನಕ್ಕಾಗಿ ಕಾಯುತ್ತಿದ್ದೇನೆʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು. ಸುಭಿ ತಂದೆ ಸುರೇಶ್, ತಾಯಿ ಅಂಬಿಕಾ, ಸಹೋದರ ಎಬಿ ಸುರೇಶ್ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.